
ಆರೋಗ್ಯದ ವಿಷಯ ಬಂದಾಗ ತುಪ್ಪ ಮಹತ್ವದ ಪಾತ್ರವನ್ನು ವಹಿಸುತ್ತದೆ ಆರೋಗ್ಯಕರವಾದ ತುಪ್ಪ ಜಿಡ್ಡಿನ ಪದಾರ್ಥಗಳಲ್ಲಿ ಒಂದು ಇದರಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಪೋಷಕಾಂಶಗಳು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಆಂಟಿ ಆಕ್ಸಿಡೆಂಟ್ ಗಳು ಇವೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಾಗೂ ನಮ್ಮ ಆರೋಗ್ಯಕ್ಕೆ ಯಾವ ಎಲ್ಲಾ ರೀತಿಯ ಉಪಯೋಗಗಳು ಇವೆ ಅಂತ ನೋಡೋಣ.
ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪದಲ್ಲಿ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಜಾಸ್ತಿಯಾಗಿದೆ ಆದ್ದರಿಂದ ಎಮ್ಮೆಯ ಹಾಲಿನ ತುಪ್ಪ ಕ್ಕಿಂತ ಹಸುವಿನ ಹಾಲಿನ ತುಪ್ಪವು ಉತ್ಕೃಷ್ಟವಾಗಿದೆ. ಸಾಮಾನ್ಯವಾಗಿ ಅನ್ನ ಚಪಾತಿ ಸಿಹಿ ಮೊದಲಾದ ಆಹಾರದೊಂದಿಗೆ ಸ್ವಲ್ಪ ತುಪ್ಪವನ್ನು ಸೇರಿಸಿ ತಿಂದರೆ ರುಚಿ ಬಹಳಷ್ಟು ಹೆಚ್ಚುತ್ತದೆ ತುಪ್ಪವನ್ನು ಇದ್ದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ.
ಸುಟ್ಟ ಗಾಯಕ್ಕೆ ಚಿಕ್ಕಪ್ಪ ತರಚುಗಾಯ ಗಳಿಗೆ ಇದನ್ನು ಹಚ್ಚುವುದರಿಂದ ಗಾಯಗಳು ಬೇಗನೆ ಮಾಗುತ್ತವೆ. ಹಸುವಿನ ತುಪ್ಪವನ್ನು ನಿಯಮಿತ ಸೇವನೆ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ಸಹಾಯವಾಗುತ್ತದೆ ಹಸಿವಿನ ತುಪ್ಪವನ್ನು ಸೇವಿಸುವುದರಿಂದ ಕೂದಲು ಉದುರುವುದು ಹೃದಯದ ಕ್ಷಮತೆಯನ್ನು ಹೆಚ್ಚಿಸುವುದು ಮೊದಲಾದ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು.
ಆದ್ದರಿಂದ ಅಪ್ಪಟ ದೇಸಿ ತುಪ್ಪವನ್ನು ನಾವು ಯಾವಾಗಲೂ ಸೇವಿಸುತ್ತಿರಬೇಕು. ಆದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ ಅತಿ ಆದರೆ ಅಮೃತವೂ ವಿಷ ಎನ್ನುವ ಹಾಗೇ ಅತಿಯಾದ ತುಪ್ಪದ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಾಗಬಹುದು. ಆದ್ದರಿಂದ ನಿಯಮಿತ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಬೇಕೆಂದು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ.
ಚಿಕ್ಕ ಪ್ರಮಾಣದಲ್ಲಿ ತುಪ್ಪ ಪ್ರತಿದಿನ ಊಟದೊಂದಿಗೆ ಸೇವಿಸುತ್ತಾ ಬಂದರೆ ನಮ್ಮ ಜೀರ್ಣಕ್ರಿಯೆ ಸುಲಭವಾಗುತ್ತದೆ ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕ ರೂಪದಲ್ಲಿ ನೆರವಾಗುತ್ತದೆ ಆದಕಾರಣ ನೀವು ಕೂಡ ಪ್ರತಿನಿತ್ಯ ಊಟದೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಊಟ ಮಾಡಿ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು ಒಳ್ಳೆಯದು.
ರಾತ್ರಿ ದಿನಾಲೂ ತುಪ್ಪವನ್ನು ಸ್ವಲ್ಪ ಪ್ರಮಾಣದಲ್ಲಿ ದೇಹಕ್ಕೆ ಸೇರಿಸುತ್ತ ಹೋದರೆ ನಮ್ಮ ದೇಹದಲ್ಲಿರುವ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ಸಾಧ್ಯವಾಗುತ್ತದೆ.
ಮೂಗಿನಿಂದ ರಕ್ತ ಬರುತ್ತಿದ್ದರೆ ವೈದ್ಯರಿಗೆ ತೋರಿಸುವ ಮೊದಲು ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳು ಒಳಗೆ ವಿಶೇಷವಾಗಿ ರಕ್ತ ಒಸರುವ ದಿನಾಲು ಮೂರ್ನಾಲ್ಕು ಸಾರಿ ಹಚ್ಚಬೇಕು ಹೀಗೆ ಮಾಡುತ್ತ ಹೋದರೆ ನಿಮಗೆ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಈ ಎಲ್ಲಾ ಕಾಯಿಲೆ ಬರಬಹುದು
ಕೂದಲು ಉದುರುವ ಸಮಸ್ಯೆಗೆ ಪರಿಹಾರ । ಕೂದಲು ಉದುರುವಿಕೆಗೆ ಮನೆ ಮದ್ದು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.