
Disadvantages of Afternoon Sleep in Kannada: ಅನೇಕರು ಮಧ್ಯಾಹ್ನ ಊಟ ಮಡಿದ ನಂತರ ಸ್ವಲ್ಪ ರಿಫ್ರೆಶ್ ಆಗಲಿ ಎಂದು ಸ್ವಲ್ಪ ಹೊತ್ತು ನಿದ್ರೆಯನ್ನು ಮಾಡುತ್ತಾರೆ. ಆದರೆ ಮಧ್ಯಾಹ್ನ ಮಲಗುವುದರಿಂದ ನಮ್ಮ ದೇಹದ ಮೇಲೆ ಯಾವೆಲ್ಲ ರೀತಿಯ ಪರಿಣಾಮ ಬೀರುತ್ತೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ.
ಹೊಸ ಅಧ್ಯಯನದಲ್ಲಿ ತಿಳಿದು ಬಂದ ಪ್ರಕಾರ ಮಧ್ಯಾಹ್ನ ಹೆಚ್ಚು ಸಮಯ ಮಲಗುವುದರಿಂದ ಅಧಿಕ ರಕ್ತದೊತ್ತಡ ಹಾಗೂ ರಕ್ತ ನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಅರ್ಧ ಗಂಟೆ ಹಾಗೂ ಅದಕ್ಕಿಂತ ಹೆಚ್ಚು ಹೊತ್ತಿನ ನಿದ್ರೆ ಮಾರಕವಾಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ಹಲವು ಪರಿಣಾಮವನ್ನು ಬೀರುತ್ತೆ ಎಂದು ಹೇಳಲಾಗಿದೆ.
Join Whats App Group click here
ಅತಿಯಾದ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವೆಲ್ಲ ದುಷ್ಪರಿಣಾಮ ಬೀರುತ್ತೆ ನೋಡಿ
ವೈದ್ಯರು ಹೇಳುವ ಪ್ರಕಾರ ಇದು ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗುತ್ತೆ. ಪ್ರತಿದಿನ ಅರ್ಧ ಗಂಟೆ ಸಮಯ ಮಧ್ಯಾಹ್ನದ ಸಮಯದಲ್ಲಿ ಮಲಗುವುದರಿಂದ ಕೂಡ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗುತ್ತೆ ಎಂದು ತಜ್ಞರು ಹೇಳಿದ್ದಾರೆ. ಪ್ರಪಂಚದಾದ್ಯಂತ ನಾಲ್ಕು ಕೋಟಿಗೂ ಅಧಿಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಜನರ ಡೇಟಾವನ್ನು ಪರಿಶೀಲಿಸಿದಾಗ ವೈದ್ಯರು ಈ ತೀರ್ಮಾನಕ್ಕೆ ಬಂದಿದ್ದಾರೆ. ಜನರ ಹೃದಯ ಬಡಿತವು ಅನಿಯಮಿತವಾಗಿಲ್ಲ ಆದರೆ ಅವರಿಗೆ ಮಲಗಲು ಹೇಳಿದ ತಕ್ಷಣ ಅವರ ಹೃದಯ ಬಡಿತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ರಾತ್ರಿಯ ನಿದ್ರೆಯ ಮೇಲೆ ಸಹ ಇದು ಪರಿಣಾಮವನ್ನು ಬೀರುತ್ತದೆ. ಹಗಲಿನಲ್ಲಿ ಮಲಗುವುದರಿಂದ ರಾತ್ರಿ ಸಮಯದ ಗುಣಮಟ್ಟದ ನಿದ್ರೆಯ ಮೇಲೆ ಪರಿಣಾಮ ಬೀರುತ್ತೆ. ಇದರಿಂದ ಬೇರೆ ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಹೇಳಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.