
ಮೂಲಂಗಿಯನ್ನು ಸಾಮಾನ್ಯವಾಗಿ ಎಲ್ಲರು ಸೇವನೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಮೂಲಂಗಿಯಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು ಇರುವುದರಿಂದ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ ಆಗಿದೆ .ಮೂಲಂಗಿ ಸೇವನೆಯಿಂದ ಹಲವಾರು ಪ್ರಯೋಜನಗಳು ಲಭ್ಯ. ಮೂಲಂಗಿಯ ಕಾಯಿ ಬೇರು ಮತ್ತು ಸೊಪ್ಪುಗಳು ಗಣನೀಯ ಪ್ರಮಾಣದ ಔಷದಿಯ ಗುಣಗಳನ್ನು ಹೊಂದಿವೆ, ಮೂಲಂಗಿ ಎಲ್ಲಾ ಭಾಗಗಳು ಬಹಳ ಉಪಯುಕ್ತವಾಗಿವೆ.
- ಮೂಲಂಗಿ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ
- ಕಣ್ಣಿನ ದೃಷ್ಟಿಗೆ ಸಹಾಯಕಾರಿ ಮೂಲಂಗಿ
- ಹಸಿವು ಹೆಚ್ಚಿಸಲು ಸಹಾಯ ಮಾಡುತ್ತೆ
ಪ್ರತಿನಿತ್ಯ ಮೂಲಂಗಿ ಸೊಪ್ಪಿನ ಸೇವನೆಯಿಂದ ರಕ್ತ ವೃದ್ಧಿ ಆಗುತ್ತದೆ ಮೂಲವ್ಯಾಧಿಗೆ ಮೂಲಂಗಿ ಒಂದು ದಿವ್ಯ ಔಷಧಿ. ಹಸಿ ಮೂಲಂಗಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸನ್ನು ನಿಂಬೆರಸಕ್ಕೆ ಸೇರಿಸಿ ಊಟವಾದ ನಂತರ ಸೇವಿಸುತ್ತಿದ್ದರೆ ತಿಂದ ಆಹಾರ ಚೆನ್ನಾಗಿ ಪಚನವಾಗುತ್ತದೆ.
ಒಂದು ಚಮಚ ಜೇನುತುಪ್ಪ ಮೂಲಂಗಿ ರಸ ಮತ್ತು ಸೈಂಧವ ಲವಣವನ್ನು ಮಿಶ್ರಣ ಮಾಡಿ ಸೇವಿಸಿದರೆ ಜಾಗಕ್ಕೆ ಲೇಪಿಸಿದರೆ ನೋವು ಶಮನಗೊಳ್ಳುತ್ತವೆ. ಕಾಮಾಲೆ ಪಿತ್ತಜನಕಾಂಗ ಮತ್ತು ಗುಲ್ಮದ ರೋಗಗಳಿಂದ ನರಳುತ್ತಿರುವವರು ಇದರ ಬೇರು ಮತ್ತು ಸೊಪ್ಪುಗಳನ್ನು ಹಸಿಯಾಗಿಯೇ ನಿತ್ಯ ಸೇವಿಸುತ್ತಿದ್ದರೆ ರೋಗಗಳು ವಾಸಿಯಾಗುತ್ತವೆ.
ಸೊಪ್ಪಿನಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಮಲಬದ್ಧತೆಗೆ ಬಹಳ ಉಪಯುಕ್ತ ಕಣ್ಣುಗಳ ದೃಷ್ಟಿ ಸುಧಾರಣೆಗೆ ಮೂಲಂಗಿಯ ಸೊಪ್ಪು ಅತ್ಯಂತ ಉಪಯುಕ್ತ ಏಕೆಂದರೆ ಇದರಲ್ಲಿ ಜೀವಸತ್ವ ಜೀವ ಇರುವುದು.
ಸೊಪ್ಪಿನಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಮಲಬದ್ಧತೆಗೆ ಬಹಳ ಉಪಯುಕ್ತ ಬೇರು ಮತ್ತು ಸೊಪ್ಪುಗಳು ಜೀರ್ಣಕಾರಿಯಾಗಿರುವುದರಿಂದ ಹಸಿವನ್ನು ಹೆಚ್ಚಿಸುತ್ತವೆ.
ಮೂಲಂಗಿ ಬೀಜವನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ದಿನಾಕೆ ಮೂರು ಬಾರಿ ಮುಖಕ್ಕೆ ಹಚ್ಚಿದರೆ, ಕಲೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚಿಸುತ್ತದೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.