ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ [RBI] ಇದು ಭಾರತದ ಪ್ರತಿಯೊಂದು ಬ್ಯಾಂಕ್ ಗಳಿಗೂ ಪ್ರಮುಖ ಕೇಂದ್ರ ಬಿಂದು. ಹೆಚ್ಚಿನ ಜನರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೇ ಅವರ ಖಾತೆಗಳನ್ನು ತೆರೆಯಲು ಬಯಸುತ್ತಾರೆ. ಈಗ ಆರ್ ಬಿ ಐ [RBI] ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಕೆಲವು ನಿರ್ಬಂಧಗಳನ್ನು ಹೇಳಿದೆ.
ಈಗಂತೂ ಅನೇಕ ಬ್ಯಾಂಕ್ ಗಳಲ್ಲಿ ಆನ್ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಓಪನ್ ಮಾಡುವ ಸೌಲಭ್ಯವನ್ನು ಒದಗಿಸಿವೆ. ಇದರಿಂದ ಜನರಿಗೆ ತುಂಬಾ ಅನೂಕೂಲ ಸಹ ಆಗಿದೆ. ಹಾಗಾಗಿ ಹಲವಾರು ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳನ್ನು ಓಪನ್ ಮಾಡುತ್ತಾರೆ. ಹಾಗಾದರೆ ಒಬ್ಬ ವ್ಯಕ್ತಿಯು ಎಷ್ಟು ಅಕೌಂಟ್ ಗಳನ್ನೂ ಹೊಂದಬಹುದು? ಇದ್ದಕ್ಕೆ ಏನಾದರೂ ಮಿತಿ ಇದೆಯೇ? ಇದರ ಬಗ್ಗೆ ಆರ್ ಬಿ ಐ [RBI] ಏನು ಹೇಳುತ್ತೆ ನೋಡಿ.
ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು?
ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ ಪ್ರಕಾರ ಒಬ್ಬ ವ್ಯಕ್ತಿಯು ನಾಲ್ಕರಿಂದ ಐದು ಬ್ಯಾಂಕ್ ಖಾತೆಗಳನ್ನು ಹೊಂದಬಹುದು. ಆದರೆ ಅವು ಪ್ರತ್ಯೇಕ ಬ್ಯಾಂಕ್ ಆಗಿರಬೇಕು. ಆದರೆ ಈ ಸಮಯದಲ್ಲಿ ನೀವು ಕೆಲವು ವಿಷಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತೆ.
ಇದನ್ನೂ ಓದಿ: 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದವರ ಬ್ಯಾಂಕ್ ಖಾತೆ ಕ್ಲೋಸ್
ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಆಗುವ ಅನಾನುಕೂಲಗಳು
ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಗಳನ್ನೂ ಹೊಂದಿದ್ದರೆ ಎಲ್ಲಾ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಕಷ್ಟ ಆಗಬಹುದು. ಪ್ರತಿಯೊಂದು ಉಳಿತಾಯ ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ತನ್ನದೇ ಆದಂತಹ ಮಿತಿಯನ್ನು ಹೊಂದಿರುತ್ತೆ. ಒಂದು ವೇಳೆ ಆ ಮೊತ್ತವನ್ನು ನಿರ್ವಹಿಸದಿದ್ದರೆ ಬ್ಯಾಂಕ್ ನಿಮಗೆ ದಂಡವನ್ನು ವಿಧಿಸುತ್ತೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
