
ಹಲವು ಜನರಿಗೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸ ಇರುತ್ತೆ. ಹೀಗೆ ಮಲಗುವ ಮುನ್ನ ಹಾಲು ಕುಡಿದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಹಾಗೂ ಹಲವಾರು ಉತ್ತಮ ಅಂಶಗಳು ಸಿಗುತ್ತೆ. ಆದ್ರೆ ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಎಲ್ಲವನ್ನು ನೀವು ತಿಳಿದಿರಬೇಕು.
- ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ಏನಾಗುತ್ತೆ
- ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ಜೀರ್ಣ ಕ್ರಿಯೆ ಸಮಸ್ಯೆ ಆಗಬಹದು
- ಈ ಸಮಯದಲ್ಲಿ ಹಾಲು ಕುಡಿಯುವುದರಿಂದ ಇನ್ಸುಲಿನ್ ಪ್ರಮಾಣ ದೇಹದಲ್ಲಿ ಹೆಚ್ಚುತ್ತೆ
ಮಲಗುವಾಗ ಹಾಲು ಕುಡಿದರೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತೆ ಎಂದು ಹಲವಾರು ಜನರು ಹೇಳುತ್ತಾರೆ. ಟ್ರಿಪ್ಟಾಪಾನ್ ಹಾಲಿನಲ್ಲಿ ಜಾಸ್ತಿ ಪ್ರಮಾಣದಲ್ಲಿ ಇರುತ್ತೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತೆ ಆದರೆ ಇದು ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆ ಉಂಟುಮಾಡುತ್ತೆ.
Join Telegram | Join Now |
ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಯಾಕೆಂದರೆ ರಾತ್ರಿ ಮಲಗಿದಾಗ ಕ್ಯಾಲೋರಿ ಬರ್ನ್ ಆಗುವುದಿಲ್ಲ. ಇದರಿಂದ ತೂಕ ಹೆಚ್ಚಾಗುತ್ತೆ. ಹಾಗಾಗಿ ನೀವು ರಾತ್ರಿ ಹಾಲು ಕುಡಿಯುತ್ತಿದ್ದರೆ ಮಲಗುವ ಎರಡು ಗಂಟೆಗೆ ಮುನ್ನವೇ ಕುಡಿಯಿರಿ. ಇದರಿಂದ ಹಾಲಿನ ಜೀರ್ಣಕ್ರಿಯೆಯು ಸರಿಯಾಗಿ ಆಗುತ್ತೆ ಹಾಗೆಯೆ ನಿಮ್ಮ ತೂಕ ಕೂಡ ಹೆಚ್ಚುವುದಿಲ್ಲ.
ಕಾರ್ಬೋಹೈಡ್ರೇಟ್ ಹಾಲಿನಲ್ಲಿ ಇರುತ್ತೆ. ಊಟವಾದ ತಕ್ಷಣ ಹಾಲು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತೆ.
ಈ ಕಾಯಿಲೆ ಬರುವ ಮುನ್ನ ಮೌತ್ ವಾಶ್ ಬಳಸುವುದನ್ನು ನಿಲ್ಲಿಸಿ
ನೀವು ಪ್ರತಿದಿನ ಸೇವಿಸುವ ಈ ಆಹಾರ ವಿಷವಾಗಬಹುದು ಎಚ್ಚರ ವಹಿಸಿ
ತಲೆ ದಿಂಬು ಇಲ್ಲದೆ ಮಲಗುತ್ತಿದ್ದೀರಾ? ಹಾಗಿದ್ರೆ ತಪ್ಪದೇ ನೋಡಿ