
ಹೆಚ್ಚಿನ ಜನರು ಇತ್ತೀಚಿನ ದಿನಗಳಲ್ಲಿ ಪ್ಯಾಕೆಟ್ ಹಾಲನ್ನು ಬಳಸುತ್ತಾರೆ. ನಗರಗಳಲ್ಲಿ ಹೆಚ್ಚಾಗಿ ಎಲ್ಲರೂ ಬಳಸುವುದು ಇದೇ ಪ್ಯಾಕೆಟ್ ಹಾಲು. ಎಲ್ಲರೂ ಹಾಲನ್ನು ಕುಡಿಯುವ ಮುನ್ನ ಹಾಲನ್ನು ಕುದಿಸುತ್ತಾರೆ. ಹಾಲನ್ನು ಕುದಿಸುವುದರಿಂದ ಅದರಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳು ಸಾಯುತ್ತವೆ ಎಂದು ಹಲವರು ನಂಬುತ್ತಾರೆ. ನೇರವಾಗಿ ಹಸುವಿನಿಂದ ಪಡೆದ ಹಾಲನ್ನು ಕುದಿಸುತ್ತಾರೆ ಆದ್ರೆ ಪ್ಯಾಕೆಟ್ ನಲ್ಲಿ ತಂದ ಹಾಲನ್ನು ಕೂಡ ಕುದಿಸಬೇಕೇ?
Join telegram | Click Here |
ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ ಪಾಶ್ಚರೀಕಲಿಸಲಾದ ಹಾಲನ್ನು ಮತ್ತೆ ಕುದಿಸುವ ಅವಶ್ಯಕತೆ ಇಲ್ಲ. ಪಾಶ್ಚರೀಕರಣವು ರೋಗಕಾರಕಗಳು ಮತ್ತು ಇತರ ಹಾಳಾಗುವ ಜೀವಿಗಳನ್ನು ನಾಶಪಡಿಸುವ ಮೂಲಕ ಉತ್ಪನ್ನದ ಸುರಕ್ಷತೆಯನ್ನು ಹೆಚ್ಚಿಸುತ್ತೆ. ಈ ಹಾಲನ್ನು ನೀವು ಮತ್ತೆ ಬಿಸಿ ಮಾಡುವುದರಿಂದ ಪಾಶ್ಚರೀಕರಣದ ನಂತರ ಉಳಿದಿರುವ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಈ ಮಾಹಿತಿಯನ್ನು ಹೈದ್ರಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ತನ್ನ ಸಂಶೋದನೆಯಲ್ಲಿ ತಿಳಿಸಿದೆ.
ಪ್ಯಾಕೆಟ್ ಹಾಲನ್ನು ಮತ್ತೆ ಬಿಸಿಮಾಡುವುದರಿಂದ ಹಾಲಿನಲ್ಲಿರುವ ಪೋಷಕಾಂಶಗಳು ಕಡಿಮೆ ಆಗುತ್ತೆ ಎಂದು ಹೇಳಿದ್ದಾರೆ. ಇದು ವಿಟಮಿನ್ ಎ, ಬಿ 3, ಬಿ 5 ಮತ್ತು ಬಿ 12 ನಂತಹ ಪ್ರಮುಖ ಸೂಕ್ಷ್ಮ ಜೀವಸತ್ವಗಳನ್ನು ಕಡಿಮೆ ಮಾಡುತ್ತದೆ.
ಇವರು ಹೇಳಿದ ಪ್ರಕಾರ ಹಸುವಿನಿಂದ ನೇರವಾಗಿ ಪಡೆದ ಹಾಲನ್ನು ಕುಡಿದ ನಂತ್ರ ಅದು ಜೀರ್ಣವಾಗಲು ಕನಿಷ್ಠ ಹತ್ತು ಗಂಟೆಗಳು ಬೇಕಾಗುತ್ತೆ. ಆದ್ರೆ ಈ ಪಾಶ್ಚರೀಕಲಿಸಲಾದ ಹಾಲನ್ನು ಸೇವಿಸುವುದರಿಂದ ಜೀರ್ಣವಾಗಲು ಕಡಿಮೆ ಸಮಯ ಸಾಕಾಗುತ್ತೆ.
ಈ ಕಾಯಿಲೆ ಬರುವ ಮುನ್ನ ಮೌತ್ ವಾಶ್ ಬಳಸುವುದನ್ನು ನಿಲ್ಲಿಸಿ
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುತ್ತಿರಾ? ಇದರಿಂದ ಏನೆಲ್ಲಾ ತೊಂದರೆ ಆಗುತ್ತೆ ಗೊತ್ತಾ?
ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ
ಹುಟ್ಟುಹಬ್ಬದ ದಿನ ಕೇಕ್ ತಿನ್ನುವ ಮುನ್ನ ಎಚ್ಚರ..!
ಈ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಿನ್ನಬೇಡಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.