ಜೇನುತುಪ್ಪ ಒಂದು ಸಿಹಿಯಾದ ದ್ರವವಾಗಿದೆ. ಜೇನುತುಪ್ಪವನ್ನು ಔಷಧಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಜೆನುತುಪ್ಪವು ಎಲ್ಲರ ಮನೆಯಲ್ಲೂ ಇರುವಂತಹ ವಸ್ತುವಾಗಿದೆ. ಹೆಚ್ಚಾಗಿ ಜನರಿಗೆ ಜೇನುತುಪ್ಪ ತಿನ್ನುವುದು ಅಂದರೆ ಇಷ್ಟ. ಜೇನುತುಪ್ಪದಿಂದ ಹಲವಾರು ಪ್ರಯೋಜನ ಇದೆ. ಹಾಗೆಯೆ ಇದರ ಮೂಲ ಮುಖದ ಕಾಂತಿ ಹೆಚ್ಚಿಸುವುದು ಹೇಗೆ ಅನ್ನೋ ಮಾಹಿತಿ ಕೂಡ ತಿಳಿಯಿರಿ.
- ಚರ್ಮದ ಕಾಂತಿ ಹೆಚ್ಚಿಸುತ್ತೆ
- ಮಲಬದ್ಧತೆ ಸಮಸ್ಯೆ ದೂರವಾಗುತ್ತೆ
- ದೇಹದ ತೂಕ ಇಳಿಸಲು ಸಹಾಯಕಾರಿ
- ಉಸಿರಾಟದ ಸಮಸ್ಯೆಗೆ ಸುಲಭವಾದ ಮನೆಮದ್ದು
ಚರ್ಮದ ಕಾಂತಿ ಹೆಚ್ಚಿಸುತ್ತೆ ಜೇನುತುಪ್ಪ. ಒಂದು ಚಮಚ ಹಾಲು ಹಾಗೆಯೆ ಅರ್ಧ ಚಮಚ ಜೇನುತುಪ್ಪ ಜೊತೆಗೆ ಅರ್ಧ ಚಮಚ ಹಿಸುಕಿದ ಬಾಳೆಹಣ್ಣಿನಿಂದಿಗೆ ಮಿಕ್ಸ್ ಮಾಡಿ ನಂತರ ನಿಮ್ಮ ಮುಖ ಹಾಗೂ ಕತ್ತಿನ ಭಾಗಗಳಿಗೆ ಹಚ್ಚಿ. ನಂತರ ಹದಿನೈದರಿಂದ ಇಪ್ಪತ್ತು ನಿಮಿಷದ ನಂತ್ರ ಒಣಗಲು ಬಿಡಿ. ನಂತ್ರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.
ಕೀಲುನೊವಿರುವ ಜಾಗಕ್ಕೆ ಜೇನುತುಪ್ಪ ಪಟ್ಟು ಹಾಕಿದರೆ ಕೀಲುನೋವು ಕಡಿಮೆಯಾಗುತ್ತದೆ.
ಜೇನುತುಪ್ಪದ ಸೇವನೆಯಿಂದ ಕಣ್ಣಿಗೆ ಹಿತವಾಗುವುದು ಮತ್ತು ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ. ಓದುವ ಮಕ್ಕಳು ಜೇನುತುಪ್ಪ ಸೇವನೆ ಮಾಡಿದರೆ ಅವರ ಬುದ್ಧಿಶಕ್ತಿ ಹೆಚ್ಚಿಸುವಲ್ಲಿ ಸಹಾಯಮಾಡುತ್ತೆ.
ಜೆನುತುಪ್ಪ ಸೇವನೆಯಿಂದ ಮಲಬದ್ದತೆ ಸಮಸ್ಯೆ ದೂರವಾಗುತ್ತದೆ. ಹಾಲಿನೊಂದಿಗೆ ಜೀನುತುಪ್ಪವನ್ನು ಬೆರೆಸಿ ಸೇವಿಸಿದರೆ ಆಯುಷ್ಯ ಪ್ರಮಾಣ ಹೆಚ್ಚಾಗುತ್ತದೆ. ಜೆನುತುಪ್ಪವನ್ನು ಕ್ರಮವಾಗಿ ಸೇವಿಸಿದರೆ ಕ್ಷಯರೋಗಿಗಳ ಮತ್ತು ಮಧುಮೆಹ ರೋಗಿಗಳ ಶಾರಿರಿಕ ಕ್ರಿಯೆ ಸರಿಯಾಗಿ ನಡೆಯುತ್ತದೆ.
ಜೆನುತುಪ್ಪವನ್ನು ಶರೀರದ ತೂಕ ಇಳಿಸಲು ಬಳಸುತ್ತಾರೆ. ತುಳಸಿ ರಸಕ್ಕೆ ಸ್ವಲ್ಪ ಜೀನುತುಪ್ಪ ಸೇರಿಸಿ ಮಕ್ಕಳಿಗೆ ಮೂರು ದಿನಗಳ ಕಾಲ ಕುಡಿಸುವುದರಿಂದ ಕೆಮ್ಮು ಮತ್ತು ಜ್ವರ ನಿವಾರಣೆಯಾಗುತ್ತದೆ. ಸುಣ್ಣ ಮತ್ತು ಜೆನುತುಪ್ಪವನ್ನು ಕಲಸಿ ಉಳುಕಿದ ಭಾಗಕ್ಕೆ ಹಚ್ಚುವುದರಿಂದ ಊತದಿಂದ ಮುಕ್ತಿ ಪಡೆಯಬಹುದು.
ನೀವು ಪ್ರತಿದಿನ ಸೇವಿಸುವ ಈ ಆಹಾರ ವಿಷವಾಗಬಹುದು ಎಚ್ಚರ ವಹಿಸಿ
ತಲೆ ದಿಂಬು ಇಲ್ಲದೆ ಮಲಗುತ್ತಿದ್ದೀರಾ?
ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
