
ಯೋಗಾಸನ ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕ. ಯೋಗಾಸನ ಮಾಡುವ ವ್ಯಕ್ತಿ ಆರೋಗ್ಯವಾಗಿರಲು ಸಾಧ್ಯ. ಹಾಗೆಯೆ ನೀವು ಕೂಡ ಆರೋಗ್ಯವಾಗಿರಲು ಬಯಸಿದರೆ ಪ್ರತಿದಿನ ಈ ಸುಲಭವಾದ ಯೋಗಾಸನಗಳನ್ನು ಮಾಡಿ. ಇದು ನಿಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮವಾಗಿಡಲು ಅತ್ಯಂತ ಪ್ರಯೋಜನಕಾರಿ.
- ಪ್ರಾಣಾಯಾಮ
- ಬಾಲಾಸನ
- ಭುಜಂಗಾಸನ
- ವೃಕ್ಷಾಸನ
- ಶವಾಸನ
ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರಾಣಾಯಾಮ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತೆ. ಪ್ರತಿದಿನ ಕನಿಷ್ಠ ಹದಿನೈದು ನಿಮಿಷ ಆದರು ಪ್ರಾಣಾಯಾಮ ಮಾಡಿ.
ಬಾಲಾಸನ: ಬಾಲಾಸನ ಮಾಡುವುದರಿಂದ ನಿಮ್ಮ ದೇಹಕ್ಕೆ ಅಧಿಕ ವಿಶ್ರಾಂತಿ ಸಿಗುತ್ತೆ. ಈ ಆಸನವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತೆ.
ಭುಜಂಗಾಸನ: ಭುಜಂಗಾಸನ ಅತ್ಯಂತ ಪ್ರಯೋಜನಕಾರಿ ಆಸನವಾಗಿದೆ. ಈ ಆಸನವು ಅನಿಯಂತ್ರಿತ ಮುತ್ತಿನ ಸಮಸ್ಯೆಯನ್ನು ಕಡಿಮೆ ಮಾಡುತ್ತೆ. ಹಾಗೆಯೆ ನಿಮಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದ್ದರೆ ಬೆನ್ನು ನೋವನ್ನು ಶಮನ ಮಾಡಲು ದಿನದಲ್ಲಿ ಸ್ವಲ್ಪ ಹೊತ್ತು ಭುಜಂಗಾಸನ ಮಾಡಿ.
ವೃಕ್ಷಾಸನ: ವೃಕ್ಷಾಸನ ನಿಮ್ಮ ಏಕಾಗ್ರತೆಯನ್ನು ಕಾಪಾಡಲು ಸಹಾಯ ಮಾಡುತ್ತೆ. ಪ್ರತಿದಿನ ಈ ಆಸನವನ್ನು ಮಾಡಿದರೆ ಒಳ್ಳೆಯದು.
ಶವಾಸನ: ನೀವು ಈ ಎಲ್ಲ ಆಸನ ಮಾಡಿದ ಮೇಲೆ ತಪ್ಪದೆ ಶವಾಸನ ಮಾಡಲೇಬೇಕು. ನೀವು ಯೋಗಾಸನ ಮಡಿದ ನಂತ್ರ ಶವಾಸನ ಮಾಡುವುದರಿಂದ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತೆ.
ಅಣಬೆ ಸೇವನೆ ಮಾಡುವ ಮುನ್ನ ತಪ್ಪದೆ ಇದನ್ನು ನೋಡಿ
ಮೂಲಂಗಿ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ?
ವಜ್ರಾಸನದಿಂದ ಬೆನ್ನು ನೋವು ಕಡಿಮೆ ಆಗುತ್ತಾ?
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.