
ಈಗಂತೂ ಎಲ್ಲರು ಮಾವಿನ ಹಣ್ಣನು ತಿನ್ನಲು ಇಷ್ಟ ಪಡ್ತಾರೆ. ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಆದರೆ ಈ ಆಹಾರಗಳ ಜೊತೆಗೆ ಇಂದಿಗೂ ಮಾವಿನ ಹಣ್ಣಿನ ಸೇವನೆ ಮಾಡಬೇಡಿ. ಈ ರೀತಿಯಾಗಿ ಮಾವಿನ ಹಣ್ಣನ್ನು ಈ ಆಹಾರದ ಜೊತೆಗೆ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮೊಸರಿನ ಜೊತೆಗೆ ಸೇವಿಸಬಾರದು: ಅನೇಕ ಜನರು ಮೊಸರನ್ನು ಸೇವನೆ ಮಾಡುವಾಗ ಅದರ ಜೊತೆಗೆ ಮಾವಿನ ಹಣ್ಣನ್ನು ಸಹ ತಿನ್ನುತ್ತಾರೆ. ಆದರೆ ಇದು ಜೀರ್ಣಕ್ರಿಯೆಗೆ ಉತ್ತಮವಲ್ಲ ಎಂದು ಹೇಳುತ್ತಾರೆ. ಮಾವಿನ ಹಣ್ಣಿನಲ್ಲಿ ಅಧಿಕ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ ಹಾಗೆಯೆ ಮೊಸರು ನಮ್ಮ ದೇಹವನ್ನು ತಂಪಾಗಿಸುತ್ತೆ. ಆದ್ದರಿಂದ ಈ ಎರಡು ಆಹಾರವನ್ನು ಒಟ್ಟಿಗೆ ಸೇವಿಸಬಾರದು.
ಬೇಸಿಗೆಯಲ್ಲಿ ಬೆವರುಸಾಲೆ ನಿಯಂತ್ರಣ ಮಾಡಲು ಇಲ್ಲಿದೆ ಮನೆಮದ್ದು
ಮಸಾಲೆಯುಕ್ತ ಆಹಾರದ ಜೊತೆಗೆ ಮಾವಿನ ಹಣ್ಣು: ಹಲವು ಜನರು ಊಟ ಮಾಡುವಾಗ ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿಯಾಗಿ ಊಟ ಮಾಡುವಾಗ ಮಾವಿನ ಹಣ್ಣುಗಳನ್ನು ಸೇವನೆ ಮಾಡಬಾರದು. ಮಸಾಲೆಯುಕ್ತ ಆಹಾರ ಪದಾರ್ಥಗಳ ಜೊತೆಗೆ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಶಾಖವನ್ನು ಹೆಚ್ಚಾಗಿಸುತ್ತೆ. ಈ ಕಾರಣದಿಂದಾಗಿ ಜೀರ್ಣಕ್ರಿಯೆಗೆ ತೊಂದರೆ ಆಗುತ್ತೆ.
ಮಾವಿನ ಹಣ್ಣು ಮತ್ತು ಸಿಟ್ರಸ್ ಹಣ್ಣು: ಅಧ್ಯಯನಗಳು ಹೇಳಿದ ಪ್ರಕಾರ ಸಿಟ್ರಸ್ ಹಣ್ಣು, ಕಿತ್ತಳೆ ಹಣ್ಣು, ಕಿವಿ ಹಣ್ಣುಗಳ ಜೊತೆಗೆ ಮಾವಿನ ಹಣ್ಣನು ಸೇವಿಸಬಾರದು. ಈ ರೀತಿಯಾಗಿ ಈ ಹಣ್ಣುಗಳ ಜೊತೆಗೆ ಮಾವಿನ ಹಣ್ಣು ಸೇವಿಸುವುದರಿಂದ ದೇಹದಲ್ಲಿರುವ ಪಿಎಚ್ ಲೆವೆಲ್ ಹೆಚ್ಚು ಕಡಿಮೆ ಆಗುತ್ತದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.