ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಈ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದಲ್ಲ. ಹಾಗೆ ಈ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಹೊಟ್ಟೆಯಲ್ಲಿ ಅಜಿರ್ಣದ ಸಮಸ್ಯೆ ಉಂಟಾಗುತ್ತದೆ. ಕಲ್ಲಂಗಡಿ ಹಣ್ಣು ಈ ಪದಾರ್ಥಗಳೊಡನೆ ಸಂಯೋಜನೆಯಾದರೆ ಕೆಲವು ಸಮಸ್ಯೆಗಳು ಉದ್ಭವವಾಗುತ್ತದೆ.
ಎಲ್ಲರು ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ. ಇದು ನಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಳವಾಗಿ ನೀರಿನ ಅಂಶ ಇರುವುದರಿಂದ ನಮ್ಮ ದೇಹವನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸುತ್ತದೆ. ಹಾಗೆಯೇ ಕಲ್ಲಂಗಡಿ ಹಣ್ಣನು ತಿಂದ ನಂತರ ಈ ತಪ್ಪುಗಳ್ನ್ನು ಮಾಡಲೇ ಬೇಡಿ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಈ ತಪ್ಪುಗಳನ್ನು ಸಾಮಾನ್ಯವಾಗಿ ಎಲ್ಲರು ಮಾಡುತ್ತಾರೆ.
ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಹಾಲನ್ನು ಕುಡಿಯಬೇಡಿ. ಕಲ್ಲಂಗಡಿ ಹಣ್ಣನನ್ನು ತಿಂದ ನಂತರ ಹಾಲನ್ನು ಕುಡಿಯುವುದು ಒಳ್ಳೆಯದಲ್ಲ. ಹಾಲು ವಿಟಮಿನ್ ಸಿ ಅನ್ನು ಹೊಂದಿರುತ್ತದೆ ಮತ್ತು ಇದು ಕಲ್ಲಂಗಡಿ ಹಣ್ಣಿನೊಂದಿಗೆ ಸಂಯೋಜನೆ ಆದಾಗ ಜೀರ್ಣಾಂಗ ವ್ಯವಸ್ಥೆಯನ್ನು ಹಾಳಮಾಡುತ್ತದೆ ಮತ್ತು ಅಜೀರ್ಣವನ್ನು ಉಂಟುಮಾಡುತ್ತಡವ. ಹೊಟ್ಟೆಯ ಉಬ್ಬುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಹಾಲನ್ನು ನಾವು ಕುಡಿಯಬಾರದು.
ಒಂದು ಸೊಳ್ಳೆ ಬತ್ತಿ ಹಚ್ಚಿದರೆ 100 ಸಿಗರೇಟ್ ಸೇದಿದಂತೆ !
ಮೊಟ್ಟೆಯನ್ನು ಸೇವಿಸಬಾರದು. ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಮೊಟ್ಟೆಯನ್ನು ಸೇವಿಸುವುದು ಆರೋ ಗ್ಯಕ್ಕೆ ಹಾನಿಕಾರಕ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಒಮೇಗಾ ೩ ಅಂತಹ ಕೊಬ್ಬಿನಾಮ್ಲಗಳು ಇರುತ್ತದೆ. ಮತ್ತು ಕಲ್ಲಂಗಡಿ ಹಣ್ಣು ನೀರಿನ ಜೊತೆ ಖನಿಜಗಳನ್ನು ಹೊಂದಿರುತ್ತದೆ. ಇವುಗಳು ಮೊಟ್ಟೆಯೊಂದಿಗೆ ಸೇರಿದಾಗ ಹೊಟ್ಟೆಯ ಉಬ್ಬುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ ಮತ್ತೆ ಮಲಬದ್ಧತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಆದರಿಂದ ಕಲ್ಲಂಗಡಿಯೊಂದಿಗೆ ಇವುಗಳನ್ನು ಸೇವಿಸದೇ ಇದ್ದರೆ ಒಳ್ಳೆಯದು ಮತ್ತು ಕಲ್ಲಂಗಡಿ ಸೇವಿಸಿದ ೩೦ ನಿಮಿಷಗಳವರೆಗೆ ಏನನ್ನು ತಿನ್ನದಿರುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಮ್ಮ ದೇಹವು ಎಲ್ಲ ಪೋಷಕಂಶಗಳನ್ನು ಸರಿಯಾಗಿ ಹೀರಿಕೊಳ್ಳುತ್ತದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
