
ಕಲಬುರಗಿ ನಗರದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬಾಂಗ್ಲಾದಲ್ಲಿ ಹಿಂದೂಗಳ ಮಾರಣಹೋಮಕ್ಕೆ ಕಾರಣರೆಂದು ಆರೋಪಿಸಲಾಗಿರುವ ಅಲ್ಲಿನ ಪ್ರಧಾನಿ ಮೊಹ್ಮದ್ ಯೂನುಸ್ ಅವರ ಅಭಿಮಾನಿ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ಅವರ ಈ ಹೇಳಿಕೆ ಸಭೆಯಲ್ಲಿ ಉಪಸ್ಥಿತರಿದ್ದವರಲ್ಲಿ ಅಚ್ಚರಿ ಮೂಡಿಸಿತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೌಶಲ್ಯ ಶಿಕ್ಷಣದ ಮಹತ್ವವನ್ನು ವಿವರಿಸುವಾಗ ಹಲವು ಉದಾಹರಣೆಗಳನ್ನು ನೀಡುತ್ತಾ, ತಾವು ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್ ಯೂನುಸ್ ಅವರ ಕಟ್ಟಾ ಅಭಿಮಾನಿ ಎಂದು ಸ್ಪಷ್ಟಪಡಿಸಿದರು. ಜೀವನದಲ್ಲಿ ಕೌಶಲ್ಯವು ಎಷ್ಟೊಂದು ಮುಖ್ಯ ಎಂಬುದನ್ನು ಯೂನುಸ್ ಅವರ ಮಾತುಗಳಿಂದ ತಾನು ಅರಿತುಕೊಂಡಿದ್ದೇನೆ ಮತ್ತು ಅವರ ವಿಚಾರಗಳು ತನಗೆ ಸ್ಫೂರ್ತಿಯ ಸೆಲೆಯಾಗಿವೆ ಎಂದು ಅವರು ಹೇಳಿದರು.
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಬಾಂಗ್ಲಾ ಪ್ರಧಾನಿ ಮೊಹ್ಮದ್ ಯೂನುಸ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನು ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದರು. “ಒಬ್ಬ ವ್ಯಕ್ತಿಗೆ ಒಂದು ಮೀನು ನೀಡಿದರೆ ಅದು ಕೇವಲ ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ.
ಇದನ್ನೂ ಓದಿ: ಹಿಂದೂ ಧಾರ್ಮಿಕ ಟ್ರಸ್ಟ್ನಲ್ಲೂ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ..? ಕೇಂದ್ರಕ್ಕೆ ಸುಪ್ರೀಂ ಬಿಗ್ ಶಾಕ್!
ಆದರೆ, ಅದೇ ವ್ಯಕ್ತಿಗೆ ಮೀನು ಹಿಡಿಯುವುದನ್ನು ಕಲಿಸಿದರೆ ಅದು ಅವನ ಜೀವನ ಪೂರ್ತಿ ಉಪಯುಕ್ತವಾಗುತ್ತದೆ” ಎಂಬ ಯೂನುಸ್ ಅವರ ಆ ಮಾತುಗಳು ತನ್ನ ಮೇಲೆ ಆಳವಾದ ಪ್ರಭಾವ ಬೀರಿದವು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅಂದಿನಿಂದಲೂ ನಾನು ಮೊಹ್ಮದ್ ಯೂನುಸ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.