
- ಜೂನ್ 29 ರಂದು ಶುಕ್ರ ವೃಷಭ ರಾಶಿ ಪ್ರವೇಶದಿಂದ ‘ಧನಶಕ್ತಿ ಯೋಗ’ ಬಲಗೊಳ್ಳಲಿದೆ
- ಆರ್ಥಿಕ ಲಾಭ, ವೃತ್ತಿ ಪ್ರಗತಿ, ಆಸ್ತಿ ಖರೀದಿ ಮತ್ತು ವಿದೇಶ ಯೋಗ
- ಹೊಸ ಆದಾಯ ಮೂಲಗಳು, ಹೂಡಿಕೆಯಿಂದ ಲಾಭ
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಭೌತಿಕ ಸುಖ, ಧನ-ಸಂಪತ್ತು, ಭೋಗ, ಪ್ರೀತಿ ಮತ್ತು ಐಷಾರಾಮಿ ಜೀವನವನ್ನು ಕರುಣಿಸುವ ಗ್ರಹವಿದು. ಶುಕ್ರನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಗಳ ಜನರ ಬದುಕಿನ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಇದೀಗ, ಅಂಥದ್ದೇ ಒಂದು ದೊಡ್ಡ ಬದಲಾವಣೆ ಮತ್ತು ಅದರ ಫಲವಾಗಿ ರೂಪುಗೊಂಡಿರುವ ಅತ್ಯಂತ ಮಂಗಳಕರ ಯೋಗವು ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ.
ಪ್ರಸ್ತುತ ಮಂಗಳನ ರಾಶಿಯಾದ ಮೇಷದಲ್ಲಿದ್ದ ಶುಕ್ರ, ಜೂನ್ 29, 2025 ರಂದು ತನ್ನದೇ ಅಧಿಪತ್ಯದ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಶುಕ್ರ ತನ್ನ ಸ್ವಂತ ರಾಶಿ ಪ್ರವೇಶಿಸುವುದು ಅತ್ಯಂತ ಬಲಶಾಲಿ. ಮುಂದಿನ ಜುಲೈ 26 ರವರೆಗೂ ಶುಕ್ರ ಇದೇ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾನೆ. ಆದರೆ, ವಿಶೇಷವೆಂದರೆ, ಪ್ರಸ್ತುತ ಶುಕ್ರ ಮೇಷ ರಾಶಿಯಲ್ಲಿದ್ದು, ಮಂಗಳ ಸಿಂಹ ರಾಶಿಯಲ್ಲಿರುವುದರಿಂದ ಈಗಾಗಲೇ ಅತ್ಯಂತ ಮಂಗಳಕರವಾದ ‘ಧನಶಕ್ತಿ ಯೋಗ’ ನಿರ್ಮಾಣವಾಗಿದೆ! ಶುಕ್ರ ವೃಷಭ ರಾಶಿಗೆ ಪ್ರವೇಶಿಸುವುದರಿಂದ ಈ ಯೋಗದ ಪ್ರಭಾವ ಮತ್ತಷ್ಟು ಹೆಚ್ಚಲಿದೆ.
ಧನಶಕ್ತಿ ಯೋಗದ ಪ್ರಭಾವ ಎಲ್ಲಾ 12 ರಾಶಿಗಳ ಮೇಲೂ ಕಂಡುಬಂದರೂ, ಮೂರು ರಾಶಿಗಳ ಬದುಕಿನಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದ ಇವರ ಬದುಕಿನಲ್ಲಿ ಶುಭ ಫಲಗಳು ಹೆಚ್ಚಾಗಲಿದ್ದು, ಕುಬೇರನ ಸಂಪತ್ತೇ ನಿಮ್ಮ ಕೈ ಸೇರಲಿದೆ.
ಧನಶಕ್ತಿ ರಾಜಯೋಗದಿಂದ ಅದೃಷ್ಟ ಬದಲಾಗಲಿರುವ 3 ರಾಶಿಗಳು
ತುಲಾ ರಾಶಿ (Libra): ಧನಶಕ್ತಿ ಯೋಗದಿಂದಾಗಿ ತುಲಾ ರಾಶಿಯವರಿಗೆ ಆದಾಯದ ಮೂಲಗಳು ಗಣನೀಯವಾಗಿ ಹೆಚ್ಚಾಗಲಿವೆ. ಹಣದ ಒಳಹರಿವಿಗೆ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ. ಹೊಸ ವ್ಯಾಪಾರ-ವ್ಯವಹಾರಗಳನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯಂತ ಶುಭ ಕಾಲ. ದಿಢೀರ್ ಧನಲಾಭದಿಂದ ನಿಮ್ಮ ಖಜಾನೆ ತುಂಬಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದ್ದು, ನಿಮ್ಮ ಆರ್ಥಿಕ ಸ್ಥಿತಿ ಉತ್ತುಂಗಕ್ಕೇರಲಿದೆ. ಭೂಮಿ, ಮನೆ, ಅಥವಾ ವಾಹನ ಖರೀದಿ ಯೋಗವೂ ಇದೆ.
ಇದನ್ನೂ ಓದಿ: ಸಾಕ್ಷಾತ್ ಮಹಾಲಕ್ಷ್ಮಿಯೇ ಕಾಯುವ ರಾಶಿಗಳಿವು! ಹಣದ ಕೊರತೆಯೇ ಬಾರದಂತೆ ಸಂಪತ್ತಿನ ಅಧಿದೇವತೆ ರಕ್ಷಿಸುವಳು
ವೃಷಭ ರಾಶಿ (Taurus): ವೃಷಭ ರಾಶಿಯವರೇ, ಈ ಧನಶಕ್ತಿ ಯೋಗವು ನಿಮ್ಮ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಪ್ರಮುಖ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ವಿದೇಶದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರಿಗೆ, ನಿಮ್ಮ ಕನಸುಗಳು ನನಸಾಗುವ ಸಮಯವಿದು. ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಬೆಳೆಯುವಿರಿ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕವಾಗಿ ಸದೃಢರಾಗಿ, ಐಷಾರಾಮಿ ಜೀವನ ಸಾಗಿಸುವ ಅವಕಾಶಗಳು ಒದಗಿ ಬರುತ್ತವೆ.
ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಈ ಧನಶಕ್ತಿ ಯೋಗದಿಂದ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಭೂಮಿ, ಮನೆ, ಆಸ್ತಿ ಖರೀದಿಗೆ ಸಂಬಂಧಿಸಿದಂತಹ ವಿಚಾರಗಳಲ್ಲಿ ವಿಶೇಷವಾಗಿ ಹೆಚ್ಚಿನ ಲಾಭವಾಗಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ, ಉತ್ತಮ ಸ್ಥಾನಮಾನ, ಮತ್ತು ವಿದೇಶಕ್ಕೆ ಹೋಗುವಂತಹ ಅದ್ಭುತ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವ್ಯಾಪಾರ-ವ್ಯವಹಾರ ಮಾಡುವವರಿಗೆ ಹಣದ ಹರಿವು ಹೆಚ್ಚಾಗಿ, ಕುಬೇರನ ಸಂಪತ್ತೇ ನಿಮ್ಮ ಕೈ ಸೇರುವ ಪ್ರಬಲ ಸಾಧ್ಯತೆ ಇದೆ. ಐಷಾರಾಮಿ ಜೀವನ ಸಾಗಿಸುವ ನಿಮ್ಮ ಕನಸು ನನಸಾಗಲಿದೆ.
ಇದನ್ನೂ ಓದಿ: ಜಾಕ್ಪಾಟ್! ನಾಳೆಯಿಂದ ಶನಿಯಿಂದ ಮಹಾ ರಾಜಯೋಗ: ಈ 5 ರಾಶಿಗೆ ಕುಬೇರನ ಖಜಾನೆಯೇ ಒಲಿದು ಬರಲಿದೆ!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಲೆಕ್ಕಾಚಾರಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು)
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.