ಕೇಂದ್ರ ಸರ್ಕಾರವು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸಂಸ್ಥೆ ಸೈಬರ್ ದೋಸ್ತ್ ಈ ಕುರಿತು ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆನ್ಲೈನ್ ಮೂಲಕ ಜನರನ್ನು ಯಾಮಾರಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಸೈಬರ್ ದೋಸ್ತ್ ತಿಳಿಸಿದೆ.
ನಿರ್ದಿಷ್ಟವಾಗಿ, CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಶನ್ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಈ ಅಪ್ಲಿಕೇಶನ್ ವಿದೇಶಿ ವಿರೋಧಿ ಶಕ್ತಿಗಳಿಗೆ ಸಂಬಂಧಿಸಿರುವ ಸಾಧ್ಯತೆ ಇದೆ ಎಂದು ಸೈಬರ್ ದೋಸ್ತ್ ಎಚ್ಚರಿಸಿದೆ. ಹೀಗಾಗಿ, ಇಂತಹ ಅನುಮಾನಾಸ್ಪದ ಅಪ್ಲಿಕೇಶನ್ಗಳ ಬಳಕೆಯಿಂದ ದೂರವಿರಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿರುವ CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಶನ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಅಪ್ಲಿಕೇಶನ್ 4.4 ರೇಟಿಂಗ್ ಅನ್ನು ಪಡೆದುಕೊಂಡಿದ್ದು, ಸುಮಾರು 7.19 ಸಾವಿರ ಜನರು ಇದರ ಬಗ್ಗೆ ವಿಮರ್ಶೆಗಳನ್ನು ನೀಡಿದ್ದಾರೆ. ಈ ಅಪ್ಲಿಕೇಶನ್ ಸಾಲ ಸೌಲಭ್ಯವನ್ನು ಒದಗಿಸುತ್ತಿತ್ತು ಮತ್ತು ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ದೋಸ್ತ್ ತಿಳಿಸಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದ ಕೆಮಿಕಲ್ ಕಲ್ಲಂಗಡಿ ಪತ್ತೆ ಹಚ್ಚುವುದು ಹೇಗೆ?
ಒಂದು ವೇಳೆ ನಿಮ್ಮ ಮೊಬೈಲ್ನಲ್ಲಿ ಈ ಅಪ್ಲಿಕೇಶನ್ ಇದ್ದರೆ, ತಕ್ಷಣವೇ ಅದನ್ನು ಅನ್ಇನ್ಸ್ಟಾಲ್ ಮಾಡಿ. ಹಾಗೆ ಮಾಡದಿದ್ದಲ್ಲಿ, ನಿಮ್ಮ ಮೊಬೈಲ್ನಲ್ಲಿರುವ ವೈಯಕ್ತಿಕ ದಾಖಲೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ, ಆರ್ಥಿಕವಾಗಿಯೂ ನೀವು ನಷ್ಟವನ್ನು ಅನುಭವಿಸುವ ಸಂಭವವಿರುತ್ತದೆ ಎಂದು ಎಚ್ಚರಿಸಲಾಗಿದೆ. ಆದ್ದರಿಂದ, ಈ ಅಪ್ಲಿಕೇಶನ್ ಅನ್ನು ತಕ್ಷಣವೇ ನಿಮ್ಮ ಮೊಬೈಲ್ನಿಂದ ತೆಗೆದುಹಾಕುವುದು ಸುರಕ್ಷಿತವಾಗಿದೆ.
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
