ಬೆಂಗಳೂರು: ನಗರದಲ್ಲಿ 23 ವರ್ಷದ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಮದುವೆಯಾಗಲು ಪೋಷಕರ ವಿರೋಧವನ್ನು ಎದುರಿಸುತ್ತಿದ್ದಳು. ಯುವತಿ ತನ್ನ ಪ್ರಿಯಕರನ ಮೇಲೆ ಅತೀವ ಭಾವನಾತ್ಮಕವಾಗಿ ನಂಬಿಕೆ ಇಟ್ಟುಕೊಂಡಿದ್ದಳು. ಆದರೆ, ಪೋಷಕರು ಈ ಮದುವೆಗೆ ಒಪ್ಪುವುದಿಲ್ಲವೆಂದು ತೀವ್ರವಾಗಿ ನಿರಾಕರಿಸಿದ್ದರು.
ಅಸಮಾಧಾನಗೊಂಡ ಯುವತಿ, ತನ್ನ ಪ್ರಿಯಕರನ ಬಳಿ ಹೋಗಿ ಅಳಲು ತೋರಿಸುತ್ತಿದ್ದಳು. ಈ ವೇಳೆ ಪ್ರಿಯಕರನೊಬ್ಬರು, “ನಿಮ್ಮ ತಾಯಿ ಖಾಸಗಿ ಫೋಟೋಗಳನ್ನು ತೆಗೆದುಕೋ, ಅವರು ಮದುವೆಗೆ ಒಪ್ಪದಿದ್ದರೆ ಅದನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡೋಣ” ಎಂಬ ಕಿಡಿಗೇಡಿ ಸಲಹೆ ನೀಡಿದರು. ಅವಳ ಮನಸ್ಸಿನಲ್ಲಿ ಆ ಸಲಹೆ ಬಿದ್ದು, ಯುವತಿ ತಕ್ಷಣ ತಾಯಿ ಖಾಸಗಿ ಫೋಟೋಗಳನ್ನು ಸೆರೆಹಿಡಿದಳು.
ಹೀಗಾಗಿ, ಪೋಷಕರ ವಿರೋಧದ ನಡುವೆಯೂ ಯುವತಿ ಪ್ರಿಯಕರನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಳು. ಆದರೆ, ಮನೆಯನ್ನು ಬಿಡುವಾಗ ಅವಳು ತನ್ನ ಮೊಬೈಲ್ ಅನ್ನು ಮನೆಯಲ್ಲೇ ಮರೆತು ಹೋಗಿದ್ದಳು. ಸಂಶಯಗೊಂಡ ಪೋಷಕರು ಮಗಳ ಮೊಬೈಲ್ ಪರಿಶೀಲಿಸಿದಾಗ, ತಾಯಿಯ ಖಾಸಗಿ ಫೋಟೋಗಳು ಅದೆಷ್ಟೋ ಪತ್ತೆಯಾಗಿದ್ದವು. ಈ ದೃಶ್ಯವನ್ನು ನೋಡಿದ ಪೋಷಕರು ಆಘಾತಕ್ಕೊಳಗಾದರು ಮತ್ತು ತಕ್ಷಣ ಪೊಲೀಸರು ದೂರು ನೀಡಿದರು.
ಇದನ್ನೂ ಓದಿ: ‘ಎರಡನೇ ಮದುವೆ ಬೇಕು’ ಎಂದ ಪತಿ: ಒಪ್ಪದ ಪತ್ನಿಯನ್ನು ಯಮಲೋಕಕ್ಕೆ ಕಳಿಸಿದ
ಪೊಲೀಸರ ವಿಚಾರಣೆಯಲ್ಲಿ, ಯುವತಿ ಎಲ್ಲ ಸತ್ಯವನ್ನು ಒಪ್ಪಿಕೊಂಡಳು. ಅವಳು ವಿವರಿಸಿದ್ದಂತೆ, ಫೋಟೋಗಳನ್ನು ತೆಗೆದುಕೊಂಡ ಉದ್ದೇಶವು ಕೇವಲ ಮದುವೆಗೆ ಪೋಷಕರ ಒಪ್ಪಿಗೆ ಪಡೆಯಲು ಮತ್ತು ಬ್ಲ್ಯಾಕ್ಮೇಲ್ ಮಾಡಲು ಮಾತ್ರ. ಅದೃಷ್ಟವಶಾತ್, ಆ ಫೋಟೋಗಳನ್ನು ಯಾರಿಗೂ ಕಳುಹಿಸಲಿಲ್ಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಸಲಿಲ್ಲ, ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: ಎದೆಹಾಲುಣಿಸುತ್ತಿದ್ದ ಪತ್ನಿಯ ಹತ್ಯೆ ಮಾಡಿದ ಪತಿ ! ಆರು ತಿಂಗಳ ಶಿಶು ಉಸಿರುಗಟ್ಟಿ ಸಾವು
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
