
ಸೀತಾಫಲ ಈ ಹಣ್ಣು ರುಚಿ ಹಾಗೂ ಸಿಹಿಗೆ ಹೆಸರಾಗಿರುವ ಹಣ್ಣು, ಅಲ್ಲದೆ ಪೋಷಕಾಂಶಗಳನ್ನು ಒಳಗೊಂಡಿದೆ ಜೊತೆಗೆ ಮಾನವನ ಹಲವು ರೋಗಗಳಿಗೆ ರಾಮಬಾಣವಾಗಿದೆ ಸೀತಾಫಲ ಹಣ್ಣು.
- ಸೀತಾಫಲ ಹಣ್ಣು ಆರೋಗ್ಯಕ್ಕೆ ಉತ್ತಮ
- ಈ ಹಣ್ಣಿನಿಂದ ಚರ್ಮದ ತೊಂದರೆಗಳನ್ನು ನಿವಾರಿಸಬಹುದು
- ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ
ಈ ಹಣ್ಣಿನ ಸೇವನೆಯಿಂದ ಕಣ್ಣು ಹಾಗೂ ಚರ್ಮದ ತೊಂದರೆಗಳನ್ನು ನಿವಾರಿಸಬಹುದು. ಹಣ್ಣಿನಲ್ಲಿ ಇರುವ ಮ್ಯಾಗ್ನಿಷಿಯಂ ಅಂಶ ಮನುಷ್ಯನ ಮಾಂಸ ಖಂಡಗಳ ಬೆಳವಣಿಗೆಗೆ ಉಪಯುಕ್ತವಾಗಿದೆ.
ಈ ಹಣ್ಣನ್ನು ತಿನ್ನಲು ಮಾತ್ರವಲ್ಲದೆ ಔಷಧೀಯವಾಗಿಯೂ ಬಳಸಿಕೊಳ್ಳಬಹುದು. ಈ ಹಣ್ಣಿನಲ್ಲಿರುವ ಫೈಬರ್ ನ ಅಂಶದಿಂದ ಆಹಾರ ಬಹುಬೇಗ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿರುವ ಸೀತಾಫಲ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಲಬದ್ಧತೆಯಿಂದ ಬಳಲುವವರಿಗೆ ಇದು ಸೂಕ್ತ ಔಷಧಿಯಾಗಿದೆ. ಗರ್ಭಿಣಿಯರು ಈ ಹಣ್ಣು ಸೇವಿಸುವ ಸಂದರ್ಭದಲ್ಲಿ ಜಾಗೃತರಾಗಿರಬೇಕು. ಇದರ ಬೀಜಗಳು ಸಹ ಔಷಧೀಯ ಗುಣಗಳಿಂದ ಕೂಡಿದೆ ಬೀಜಗಳನ್ನು ಚೆನ್ನಾಗಿ ತೊಳೆದು ವೃದ್ಧಿ ಅರೆದು ಅದನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ನಂತರ ಸ್ನಾನ ಮಾಡಿದರೆ ಕಣ್ಣಿಗೆ ಒಳ್ಳೆಯದು.
ಸೀತಾಫಲ ಹಣ್ಣಿನಲ್ಲಿರುವ ತಿರುಳು ನಾಲಿಗೆಯಲ್ಲಿನ ಜೀರ್ಣರಸ ಉತ್ಪಾದನೆಗೆ ಸಹಾಯವಾಗಿರುತ್ತದೆ ನಿಶಕ್ತಿ ಸುಸ್ತು ತಲೆ ಸುತ್ತುವುದು ಮುಂತಾದ ಬಾಳೆಲೆಗೆ ಎಂತಹ ಸಂದರ್ಭಗಳಲ್ಲಿ ಗ್ಲುಕೋಸ್ ರೀತಿಯಲ್ಲಿ ಕೆಲಸ ಮಾಡುತ್ತದೆ.
ಅಣಬೆ ಸೇವನೆ ಮಾಡುವ ಮುನ್ನ ತಪ್ಪದೆ ಇದನ್ನು ನೋಡಿ
ವಜ್ರಾಸನದಿಂದ ಬೆನ್ನು ನೋವು ಕಡಿಮೆ ಆಗುತ್ತಾ?