ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಕರ್ನಾಟಕದ ಮೂವರು ಪ್ರವಾಸಿಗರು ಬಲಿಯಾಗಿದ್ದು, ಅವರಲ್ಲಿ ಮೂಲತಃ ಆಂಧ್ರಪ್ರದೇಶದವರಾಗಿದ್ದ ಮಧುಸೂದನ್ ರಾವ್ ಅವರು ಬೆಂಗಳೂರಿನ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು.
ಕೇವಲ ಮೂರು ದಿನಗಳ ಹಿಂದೆಯಷ್ಟೇ ಮಧುಸೂದನ್ ಅವರ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಆದರೆ, ಉಗ್ರರ ಗುಂಡಿನ ದಾಳಿಗೆ ಬಲಿಯಾದ ಮಧುಸೂದನ್ ರಾವ್ ಅವರ ಕೊನೆಯ ಕ್ಷಣಗಳು ಅತ್ಯಂತ ಭಯಾನಕವಾಗಿದ್ದವು ಎಂದು ತಿಳಿದುಬಂದಿದೆ. ಮಧುಸೂದನ್ ರಾವ್ ಅವರು ತಮ್ಮ ಕುಟುಂಬದೊಂದಿಗೆ ಪಹಲ್ಗಾಮ್ನ ಸುಂದರ ಪರಿಸರವನ್ನು ಆಸ್ವಾದಿಸುತ್ತಿದ್ದಾಗ, ಏಕಾಏಕಿ ಬಂದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ಮನಬಂದಂತೆ ಗುಂಡು ಹಾರಿಸುತ್ತಿದ್ದರು.
ಮಧುಸೂದನ್ ರಾವ್ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ, ನಕಲಿ ಸೇನಾ ಸಮವಸ್ತ್ರ ಧರಿಸಿದ್ದ ಭಯೋತ್ಪಾದಕರು ಅಲ್ಲಿಗೆ ಬಂದಿದ್ದಾರೆ. ಬಂದ ತಕ್ಷಣವೇ ಅವರು ಮಧುಸೂದನ್ ರಾವ್ ಅವರನ್ನು ಪ್ರಶ್ನಿಸಿದ್ದಾರೆ: “ನೀವು ಹಿಂದೂನಾ ಅಥವಾ ಮುಸ್ಲಿಂನಾ?” ಗಾಬರಿಗೊಂಡ ಮಧುಸೂದನ್ ರಾವ್ ಅವರು “ನಾನು ಮುಸ್ಲಿಂ” ಎಂದು ಉತ್ತರಿಸಿದ್ದಾರೆ. ಆಗ ಭಯೋತ್ಪಾದಕನೊಬ್ಬ ತನ್ನ ಜೇಬಿನಿಂದ ಕುರಾನ್ ತೆಗೆದು ಅದನ್ನು ಓದುವಂತೆ ಹೇಳಿದ್ದಾನೆ.
ಇದನ್ನೂ ಓದಿ: ಭಯೋತ್ಪಾದಕರು ನಂಪುಸಕರು: ನಟಿ ಕಂಗನಾ ರನೌತ್
ಅದಕ್ಕೆ ಮಧುಸೂದನ್ ನಾನು ಮರೆತು ಹೋಗಿದ್ದೇನೆ ಎಂದು ಸಮಜಾಯಿಸಿದರು. ಆಗ ಉಗ್ರ ‘ಪ್ಯಾಂಟ್ ಬಿಚ್ಚು’ ಎಂದು ಬೆದರಿಕೆ ಹಾಕಿದ. ಪ್ಯಾಂಟ್ ಬಿಚ್ಚುತ್ತಿದ್ದಂತೆಯೇ ಹೆಂಡತಿ ಮತ್ತು ಮಕ್ಕಳ ಕಣ್ಣೆದುರೇ ಅವರ ತಲೆಗೆ ಗುಂಡಿಕ್ಕಿದರು. ಮಧುಸೂದನ್ ಮುಸ್ಲಿಂ ಅಲ್ಲ, ಹಿಂದೂ ಎಂದು ತಿಳಿದುಕೊಂಡೇ ಆ ಭಯೋತ್ಪಾದಕರು ದಾಳಿ ಮಾಡಿದರು ಎಂದು ಅವರ ಜೊತೆಗಿದ್ದ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ಲಾಮಿಕ್ ಪಠಣ ಹೇಳದಿದ್ದಕ್ಕೆ ತಂದೆಯನ್ನು ಕೊಂದ ಉಗ್ರರು!
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
