ರೋಗ ನಿವಾರಣೆಗೆ ಗೋಮೂತ್ರ । ಗೋಮೂತ್ರದ ಆರೋಗ್ಯ ಪ್ರಯೋಜನ ಕೇಳಿದರೆ ಅಚ್ಚರಿಪಡ್ತಿರಾ!

ಗೋಮೂತ್ರದಲ್ಲಿ 100 ಕ್ಕೂ ಅಧಿಕ ಹೆಚ್ಚು ಔಷಧಿಯ ಗುಣಗಳು ಇದೆ. ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪ್ರಮುಖವಾದ ಸ್ಥಾನವನ್ನು ನೀಡಲಾಗಿದೆ. ಗೋವಿಗೆ ಮಾತೆಯ ಸ್ಥಾನವನ್ನು ನೀಡಲಾಗಿದೆ. ಹೆಚ್ಚಿನ ಜನರಿಗೆ ಹಸುವಿನಿಂದ ಸಿಗುವ ಹಾಲಿನ ಪ್ರಯೋಜನಗಳ ಬಗ್ಗೆ ಮಾತ್ರ ತಿಳಿದಿದೆ. ಆದ್ರೆ ಗೋಮೂತ್ರದ ಬಗ್ಗೆ ತಿಳಿದಿಲ್ಲ.

ಗೋಮೂತ್ರದಲ್ಲಿ ಸೋಡಿಯಂ ಮತ್ತು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ ಇರುವುದು ಪತ್ತೆಯಾಗಿದೆ. ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಆಂಟಿವೈರಸ್ ಹಾಗೂ ಆಂಟಿಕ್ಯಾನ್ಸರ್ ಗುಣವಿದೆ.

ಅಮೇರಿಕಾದ ವೈಜ್ಞಾನಿಕರು ಗೋಮೂತ್ರದಲ್ಲಿ 60 ಗುಣಗಳನ್ನು ಪತ್ತೆ ಹಚ್ಚಿದ್ದಾರೆ. ದೇಸಿ ಹಸುವಿನಲ್ಲಿ ವಿಷವನ್ನು ಅರಗಿಸಿಕೊಳ್ಳುವ ವಿಶೇಷವಾದ ಗುಣ ಇದೆ ಎಂದು ಹೇಳಲಾಗಿದೆ. ದೇಸಿ ಹಸುಗಳ ಬೆನ್ನ ಮೇಲಿರುವ ಡುಬ್ಬ ಸೂರ್ಯ ಮತ್ತು ಚಂದ್ರನ ಕಿರಣಗಳನ್ನು ಸೆಳೆದುಕೊಳ್ಳುತ್ತದೆ. ಹಸುಗಳ ಡುಬ್ಬದ ಮೇಲೆ ಬಿದ್ದ ಸೂರ್ಯನ ಕಿರಣಗಳಿಂದ ಆರೋಗ್ಯವರ್ಧಕ ಕ್ರಿಯೆ ನಡೆದು ಕೆರೋಟಿನ್ ಎಂಬ ಪದಾರ್ಥ ಬಿಡುಗಡೆಯಾಗುತ್ತದೆ. ಈ ಸತ್ವವು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ALSO READ: ಕಿಸೆಯಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆ ಬರುತ್ತೆ ಎಚ್ಚರ..!

ಗೋಮೂತ್ರದಿಂದ ಸಿಗುವ ಲಾಭಗಳು

ಚರ್ಮದ ಮೇಲಿನ ಬಿಳಿ ಕಲೆ: ಹಲವು ಜನರಿಗೆ ಚರ್ಮದ ಮೇಲೆ ಅಲ್ಲಲಿ ಬಿಳಿಯ ಕಲೆ ಇರುವುದನ್ನು ಗಮನಿಸಿರಬಹುದು. ಈ ಸಮಸ್ಯೆಗೆ ಗೋಮೂತ್ರ ಉತ್ತಮ ಪರಿಹಾರವಾಗಿದೆ.

ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ: ಗೋಮೂತ್ರ ತೀಕ್ಷ್ಣ ಗುಣವನ್ನು ಹೊಂದಿದ ಕಾರಣ ದೇಹದ ಅಳದವರೆಗೂ ಹೋಗುತ್ತವೆ. ಅಧ್ಯಯನಗಳಲ್ಲಿ ತಿಳಿದು ಬಂದ ಪ್ರಕಾರ ಗೋಮೂತ್ರದ ಸೇವನೆಯಿಂದ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಗೆ ಕಾರಣವಾಗುವ ಜೀವಕೋಶಗಳ ಅಭಿವೃದ್ಧಿಯನ್ನು ತಡೆಯಲು ಸಹಾಯಕವಾಗಿದೆ.

ಹೊಟ್ಟೆಯ ಸಮಸ್ಯೆಗೆ ಬಳಸಬಹುದು: ಹೊಟ್ಟೆಯ ಸಮಸ್ಯೆಗೆ ಗೋಮೂತ್ರ ಮನೆಮದ್ದಾಗಿದೆ. ಹಲವು ಜನರಿಗೆ ಹೊಟ್ಟೆಯ ಹುಳದ ಕಾರಣದಿಂದ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುವುದು, ಜೀರ್ಣ ಶಕ್ತಿಯ ಕೊರತೆ, ಹಸಿವಾಗದೆ ಇರುವುದು, ಇಂತಹ ಸಮಸ್ಯೆ ಇರುವವರು ಗೋಮೂತ್ರವನ್ನು ಸೇವನೆ ಮಾಡಬಹುದು. ಆದರೆ ಮಿತ ಪ್ರಮಾಣದಲ್ಲಿ ಗೋಮೂತ್ರವನ್ನು ಸೇವಿಸಬೇಕು.

ಗೋಮೂತ್ರದ ಸೇವನೆ ಹೇಗೆ?

ಗೋಮೂತ್ರವನ್ನು ಸೇವನೆ ಮಾಡುವಾಗ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಕುಡಿಯುವುದು ಉತ್ತಮ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಗೋಮೂತ್ರಕ್ಕೆ ಸ್ವಲ್ಪ ನೀರನ್ನು ಸೇರಿಸಿ ಕುಡಿಯುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.

Share