ಭಾರತದಲ್ಲಿ ಪ್ರತಿವರ್ಷ ಜನವರಿ 1 ಬಂದಾಗ ಹೊಸವರ್ಷವನ್ನು ಈಗ ಆಚರಣೆ ಮಾಡಬೇಕೋ? ಅಥವಾ ಯುಗಾದಿಗೆ ಹೊಸವರ್ಷವನ್ನು ಆಚರಿಸಬೇಕೋ ಎನ್ನುವ ಹಲವು ಚರ್ಚೆಗಳು ನಡೆಯುತ್ತವೆ. ಹಾಗೆಯೇ ಈಗ ಪ್ರೇಮಿಗಳ ದಿನದಂದು [Valentine’s day] ಅಂದರೆ ಫೆಬ್ರವರಿ 14 ರಂದು ಎಲ್ಲ ಗೋ ಪ್ರೇಮಿಗಳು “ಗೋವುಗಳನ್ನು ಅಪ್ಪಿಕೊಳ್ಳುವ ದಿನ”ವನ್ನಾಗಿ [Cow Hug Day] ಆಚರಣೆ ಮಾಡಬೇಕು ಎಂದು ಅನಿಮಲ್ ವೆಲ್ಫೇರ್ ಬೋರ್ಡ್ [Animal Welfare Board] ಆದೇಶವನ್ನು ಹೊರಡಿಸಿದೆ.
ಭಾರತ ದೇಶವು ಸನಾತನ ಸಂಸ್ಕೃತಿಯನ್ನು ಹೊಂದಿದೆ. ಈಗ ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆಯಿಂದಾಗಿ ಭಾರತದ ಹಲವು ಆಚರಣೆಗಳು ನಶಿಸಿಹೋಗುತ್ತಿವೆ. ಅದರಲ್ಲೂ ಭಾರತದಲ್ಲಿ ಇತ್ತೀಚಿಗೆ ಆರೋಗ್ಯ, ಕೃಷಿ, ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗೋ ಮಾತೆಯನ್ನು ಕಡೆಗಣಿಸಲಾಗುತ್ತಿದೆ. ಈ ಕಾರಣದಿಂದಾಗಿ ಫೆಬ್ರವರಿ 14ರಂದು ಎಲ್ಲ ಗೋ ಪ್ರೇಮಿಗಳು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ [Cow Hug Day] ಆಚರಿಸಬೇಕು ಎಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ.
ಗೋವುಗಳು ಮನುಷ್ಯನಿಗೆ ತಾಯಿಯಂತೆ ಪ್ರೀತಿಯನ್ನು ನೀಡುತ್ತವೆ. ಗೋವುಗಳನ್ನು ತಬ್ಬಿಕೊಳ್ಳುವುದರಿಂದ ನಮ್ಮಲ್ಲಿರುವ ಭಾವನಾತ್ಮಕ ಸಿರಿವಂತಿಕೆ ಹೆಚ್ಚಾಗುತ್ತೆ. ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಕೂಡ ಸಿಗುತ್ತೆ.
Also Read: ಗೋಹತ್ಯೆ ಮಾಡುವವರು ಮುಂದಿನ ಜನ್ಮದಲ್ಲಿ ತಾವೇ ಗೋವಾಗಿ ಹತ್ಯೆ ಆಗುತ್ತಾರೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.