
ನೆಲ್ಲಿಕಾಯಿ ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಸಿಗುತ್ತೆ. ಆದ್ರೆ ಜನರು ಇದರ ಪ್ರಯೋಜನ ಪಡೆದುಕೊಳ್ಳುವುದು ಕಡಿಮೆ. ನೆಲ್ಲಿಕಾಯಿಯ ಸೇವನೆಯಿಂದ ಹಲವು ಲಾಭಗಳಿವೆ. ದೈಹಿಕ ಶಕ್ತಿ ಕೂಡ ಇದರಿಂದ ಲಭ್ಯವಾಗುತ್ತೆ. ನೆಲ್ಲಿಕಾಯಿಯನ್ನು ಯಾವ ರೀತಿ ಯಾವ ಲಾಭಕ್ಕಾಗಿ ಬಳಸಬೇಕು ಅನ್ನೋದನ್ನ ನೋಡಿ.
- ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತೆ
- ಬೇಸಿಗೆಯಲ್ಲಿ ಸೇವಿಸಿ ನೆಲ್ಲಿಕಾಯಿ
- ಕಫ ನಿವಾರಣೆ ಮಾಡುವಲ್ಲಿ ಸಹಾಯಕಾರಿ
ನೆಲ್ಲಿಕಾಯಿಯ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿ ಆಗುತ್ತದೆ ದೇಹಕ್ಕೆ ಅನೇಕ ಪ್ರಕಾರದ ಪೋಷಕಾಂಶಗಳನ್ನು ಒದಗಿಸುವುದರೊಡನೆ ಅನೇಕ ರೋಗಗಳನ್ನು ನಿವಾರಿಸುತ್ತದೆ ಮತ್ತು ರೋಗ ಬರದಂತೆ ದೂರವಿಡುತ್ತದೆ ನೆಲ್ಲಿಕಾಯಿಯಲ್ಲಿ ಎರಡು ಸಂತೂರ ಹಣ್ಣುಗಳಿಗೆ ಸಮಾನವಾದ ಪೋಷಕಾಂಶಗಳು ಇರುತ್ತದೆ
ಬೇಸಿಗೆಯಲ್ಲಿ ತಲೆ ಸುತ್ತು ಬರುತ್ತಿದ್ದರೆ ಮತ್ತು ಕಸಿವಿಸಿ ಆಗುತ್ತಿದ್ದರೆ ನಿತ್ಯ ನೆಲ್ಲಿಕಾಯಿಯ ರಸ ಕುಡಿಯಬೇಕು. ನೆಲ್ಲಿಕಾಯಿ ರಸ 30 ಗ್ರಾಂ ಮತ್ತು ಜೇನುತುಪ್ಪ 20 ಗ್ರಾಂ ಇವೆರಡರನ್ನೂ ಬೆರೆಸಿ ಎರಡು ಸಲ ಸೇವಿಸುತ್ತಾ ಬಂದರೆ ಹೊಟ್ಟೆಯ ಉರಿತ ಶಾಂತವಾಗುತ್ತದೆ ಮತ್ತು ಮೂತ್ರ ವಿಸರ್ಜನೆ ಕೂಡ ಸಾಮಾನ್ಯ ರೀತಿಯಲ್ಲಿ ಆಗುತ್ತದೆ.
ನೆಲ್ಲಿಕಾಯಿಯನ್ನು ಯಾವುದೇ ರೂಪದಿಂದ ನಿಯಮಿತವಾಗಿ ಸೇವಿಸುತ್ತಾ ಬಂದರೆ ವೃದಾಪ್ಯವನ್ನು ಮುಂದೂಡುವುದು ಸಾಧ್ಯ. ನೆಲ್ಲಿಕಾಯಿಯ ಚೂರ್ಣ ನೆಲ್ಲಿಕಾಯಿ ನೆಲ್ಲಿಕಾಯಿ ಉಪ್ಪಿನಕಾಯಿ ನೆಲ್ಲಿಕಾಯಿಯ ರಸ ಮತ್ತು ನೆಲ್ಲಿಕಾಯಿ ಎಂದು ತಯಾರಿಸಿದ ಯಾವುದೇ ಪದಾರ್ಥವನ್ನು ಸೇವೆಸುತ್ತಿದ್ದರೆ ಅಕಾಲ ವೃದ್ಧ ಅವರಿಸುವುದಿಲ್ಲ.
ನೆಲ್ಲಿಕಾಯಿಯ ಚೂರ್ಣದಲ್ಲಿ ಆರು ಗ್ರಾಂ ಜೇನುತುಪ್ಪವನ್ನು ಬರೆಸಿ ನಿರಂತರ 15 ದಿನಗಳವರೆಗೆ ಸೇವಿಸಿದರೆ ಬಿಳಿ ಸೆರಗಿನ ತೊಂದರೆ ನಿವಾರಣೆಯಾಗುತ್ತದೆ. ಒಣಗಿದ ನೆಲ್ಲಿಕಾಯಿ ಮತ್ತು ಮಲಹರಿ ಇವೆರಡರ ಚೂರ್ಣ ದಿನಕ್ಕೆರಡು ಸಲ ಸೇವಿಸಿ ಬಿಸಿ ನೀರು ಕುಡಿಯುತ್ತಾ ಬಂದರೆ ಕಫ ನಿವಾರಣೆಯಾಗುತ್ತದೆ
ಈ ಸಮಸ್ಯೆ ಇರುವ ಜನರು ಬಾಳೆಹಣ್ಣನ್ನು ತಿನ್ನಬೇಡಿ
ಮೂಲಂಗಿ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ?
ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.