
ತುಂಬಾ ಜನರ ತೂಕ ಕಡಿಮೆ ಇರುತ್ತೆ. ಹಾಗೆಯೆ ಹಲವು ಜನರ ತೂಕ ಜಾಸ್ತಿ ಇರುತ್ತೆ. ಜಾಸ್ತಿ ಇದ್ದವರು ತೂಕ ಕಡಿಮೆ ಮಾಡಲು ಬಯಸಿದರೆ ಕಡಿಮೆ ಇದ್ದವರು ತೂಕ ಜಾಸ್ತಿ ಮಾಡಿಕೊಳ್ಳಲು ಬಯಸುತ್ತಾರೆ. ಹೀಗೆ ತೂಕವನ್ನು ಹೆಚ್ಚಿಸಲು ಹಲವು ಆಹಾರಗಳಿವೆ. ಈಗ ನಾವು ಹೇಳುವುದನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು. ಇದು ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತೆ.
- ತೂಕ ಹೆಚ್ಚಾಗಲು ಈ ಆಹಾರವನ್ನು ಸೇವಿಸಿ
- ಬೆಲ್ಲ ಹಾಗೂ ತುಪ್ಪ ಸೇವನೆ ಮಾಡಿ
- ದೇಸಿ ತುಪ್ಪ ಆದರೆ ಅತ್ಯುತ್ತಮ
ತುಪ್ಪವನ್ನು ತಿಂದರೆ ದಪ್ಪ ಆಗುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದನ್ನು ಸೇವನೆ ಮಾಡಲು ಬೆಲ್ಲ ಕೂಡ ಬೇಕು. ದೇಸಿ ಹಸುವಿನ ತುಪ್ಪ ಇದ್ದಾರೆ ಒಳ್ಳೆಯದು. ಇದು ನಿಮ್ಮ ಜೀರ್ಣಕ್ರಿಯೆಗೂ ಕೂಡ ಸಹಾಯ ಮಾಡುತ್ತೆ.
ಇದನ್ನು ತಯಾರಿಸುವುದು ಹೇಗೆ?
- ಒಂದು ಚಮಚ ತುಪ್ಪ ಹಾಗೂ ಒಂದು ಚಮಚ ಬೆಲ್ಲದ ಪುಡಿ ತೆಗೆದುಕೊಳ್ಳಿ
- ಇವೆರಡನ್ನು ಮಿಶ್ರಣ ಮಾಡಿ ಆಹಾರ ಸೇವನೆಯ ನಂತರ ಅಥವಾ ಆಹಾರದ ಜೊತೆಗೆ ಸೇವಿಸಬಹುದು.
ಸುಮಾರು ಒಂದು ತಿಂಗಳ ಕಾಲ ಇದನ್ನು ಸೇವಿಸಿದ ನಂತರ ಇದರ ಸೇವೆಯನ್ನು ದ್ವಿಗುಣ ಗೊಳಿಸಬಹುದು. ಪ್ರತಿದಿನ ಊಟದ ನಂತರ ಸೇವನೆ ಮಾಡಿದರೆ ಉತ್ತಮ. ಬೆಲ್ಲ ಹಾಗೂ ದೇಸಿ ಹಸುವಿನ ತುಪ್ಪದಲ್ಲಿ ಸ್ನಾಯು ಹಾಗೂ ಮೂಳೆಗಳನ್ನು ಬಲಪಡಿಸುವ ಶಕ್ತಿಯಿದೆ. ಇವೆರಡನ್ನೂ ತಿಂದರೆ ನಮ್ಮ ದೇಹ ಕೂಡ ಬಲಶಾಲಿ ಆಗುತ್ತೆ.
ಬಿಸಿನೀರು ಸೇವನೆಯಿಂದ ಈ ಸಮಸ್ಯೆ ಬರಬಹುದು ಎಚ್ಚರ
ಈ ಆಹಾರವನ್ನು ಸೇವನೆ ಮಾಡಿದ್ರೆ ನೀವೇ ಕೊರೊನಾಗೆ ಆಹ್ವಾನ ನೀಡಿದಂತೆ
ಊಟ ಮಾಡಿದ ತಕ್ಷಣ ಮಲಗಿದರೆ ಏನೆಲ್ಲಾ ತೊಂದರೆ ಆಗುತ್ತೆ ನೋಡಿ