ಹಸುವಿನ ಸಗಣಿ ಕೇವಲ ವ್ಯವಸಾಯಕ್ಕೆ ಸಹಾಯ ಮಾಡುತ್ತೆ ಅಂತ ಹಲವರು ಅಂದುಕೊಂಡಿರುತ್ತಾರೆ. ಆದರೆ ಹಸುವಿನ ಸಗಣಿಯಿಂದ ಹಲವಾರು ರೀತಿಯ ವಸ್ತುಗಳನ್ನು ಸಹ ತಯಾರಿಸಲಾಗುತ್ತದೆ. ಭಾರತೀಯರು ಸ್ವದೇಶಿಯ ವಸ್ತುಗಳನ್ನು ಬಿಟ್ಟು ವಿದೇಶಿ ವಸ್ತುಗಳ ಮೊರೆ ಹೋಗಿದ್ದಾರೆ. ಆದರೆ ವಿದೇಶಿಗರು ಭಾರತೀಯ ವಸ್ತುಗಳಿಗೆ ಮುಗಿಬೀಳುತ್ತಿದ್ದಾರೆ.
ಭಾರತದಲ್ಲಿ ತಯಾರಾಗುವ ಪರಿಸರ ಸ್ನೇಹಿ ವಸ್ತುಗಳು ವಿದೇಶಿಗರ ಗಮನ ಸೆಳೆಯುತ್ತಿದೆ. ಹಸುವಿನ ಸಗಣಿಯಿಂದ ತಯಾರಾದ ಈ ಗಡಿಯಾರಗಳಿಗೆ ಬ್ರಿಟನ್, ಅಮೇರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.
ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ಮಹಿಳೆಯರು ಹಸುವಿನ ಸಗಣಿಯನ್ನು ಬಳಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅಲಂಕಾರಿಕ ವಸ್ತುಗಳ ಜೊತೆಗೆ ಈಗ ಹಸುವಿನ ಸಗಣಿಯಿಂದ ಗಡಿಯಾರಗಳನ್ನು ತಯಾರಿಸುತ್ತಿದ್ದಾರೆ. ಈಗ ಈ ಗಡಿಯಾರಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ.
ದೀಪಾವಳಿ ಹಬ್ಬಕ್ಕೂ ಮುನ್ನ ಮಹಿಳೆಯರು 5000 ಕ್ಕೂ ಹೆಚ್ಚು ಗೋಡೆ ಗಡಿಯಾರಗಳನ್ನು ತಯಾರು ಮಾಡಿದ್ದಾರೆ. ಶೇಕಡ 90% ಗಡಿಯಾರಗಳು ಈಗಾಗಲೇ ಮಾರಾಟವಾಗಿದೆ. ಈ ಗಡಿಯಾರಗಳ ಆಕರ್ಷಕ ವಿನ್ಯಾಸವನ್ನು ನೋಡಿ ವಿದೇಶಿಗರು ಮನಸೋತಿದ್ದಾರೆ.
Also Read: Deepavali wishes in kannada 2024
ಈ ಗಡಿಯಾರಗಳನ್ನು ಶೇಕಡ 70% ಹಸುವಿನ ಸಗಣಿಯನ್ನು ಹಾಗೂ ಶೇಕಡ 30% ಮಣ್ಣನ್ನು ಬಳಸಿ ಗೋಡೆ ಗಡಿಯಾರಗಳನ್ನು ತಯಾರಿಸದುತ್ತಿದ್ದಾರೆ.