ಈ ವರ್ಷದ ಸೂರ್ಯ ಗ್ರಹಣ ದೀಪಾವಳಿ ಹಬ್ಬದ ದಿನದಂದು ಬಂದಿದೆ. ಹಾಗೆ ದೀಪಾವಳಿ ಹಬ್ಬ ಮುಗಿದ ಕೆಲವೇ ದಿನಗಳಲ್ಲಿ ಈ ವರ್ಷದ ಕೊನೆ ಗ್ರಹಣವಾದ ಚಂದ್ರ ಗ್ರಹಣ [ Chandra Grahan 2022 ] ಸಂಭವಿಸಲಿದೆ. ಹಾಗಾದ್ರೆ ಚಂದ್ರ ಗ್ರಹಣ ಯಾವಾಗ? ಎಲ್ಲಿ ಗೋಚರವಾಗುತ್ತೆ ಚಂದ್ರ ಗ್ರಹಣ ಅನ್ನೋದನ್ನ ತಿಳಿಯೋಣ ಬನ್ನಿ.
ಚಂದ್ರ ಗ್ರಹಣವು 08 ನವೆಂಬರ್ 2022 ರಂದು ಸಂಭವಿಸಲಿದೆ. ಮಂಗಳವಾರ ಸಂಜೆ 05:32 ಕ್ಕೆ ಪ್ರಾರಂಭವಾಗಿ ಸಂಜೆ 06.18 ಕ್ಕೆ ಮುಗಿಯಲಿದೆ. ಚಂದ್ರ ಗ್ರಹಣವು 45 ನಿಮಿಷ 48 ಸೆಕೆಂಡ್ ಗಳ ಕಾಲ ಇರಲಿದೆ.
ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತದೆ?
ಚಂದ್ರ ಗ್ರಹಣ ನವೆಂಬರ್ 2022 ರ 08 ನೇ ತಾರೀಕು ಮಂಗಳವಾರದಂದು ಸಂಭವಿಸುತ್ತದೆ
ಚಂದ್ರ ಗ್ರಹಣ 2022 ಸಮಯ
ಚಂದ್ರ ಗ್ರಹಣವು ಸಂಜೆ 05:32 ಕ್ಕೆ ಪ್ರಾರಂಭವಾಗಿ ಸಂಜೆ 06.18 ಕ್ಕೆ ಮುಗಿಯಲಿದೆ.
ಚಂದ್ರ ಗ್ರಹಣ ಎಲ್ಲಿ ಗೋಚರವಾಗುತ್ತೆ?
ನವೆಂಬರ್ 08 ರಂದು ನಡೆಯುವ ಚಂದ್ರ ಗ್ರಹಣ ಭಾರತದ ಕೆಲವು ಸ್ಥಳಗಳಲ್ಲಿ ಕಾಣಬಹುದಾಗಿದೆ . ಕೋಲ್ಕತ್ತಾ, ಗುವಾಹಟಿ, ರಾಂಚಿ, ಪಾಟ್ನಾ ಹಾಗೂ ಸಿಲಿಗುರಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಕಾಣಬಹುದಾಗಿದೆ. ಚಂದ್ರ ಗ್ರಹಣವು ಉತ್ತರ ಯುರೋಪ್ , ಪೂರ್ವ ಯುರೋಪ್ , ಏಷ್ಯಾ, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೇರಿಕಾ ಹಾಗೂ ಉತ್ತರ ಅಮೇರಿಕಾದಲ್ಲಿ ಕಾಣಿಸಿಕೊಳ್ಳಲಿದೆ.
ಚಂದ್ರ ಗ್ರಹಣದ ಸಂದರ್ಭದಲ್ಲಿ ಇವುಗಳನ್ನ ಮಾಡಬೇಡಿ
- ಗ್ರಹಣ ಸೂತಕ ಕಾಲದಲ್ಲಿ ದೇವರ ಪೂಜೆ ಹಾಗೂ ಇತರೆ ಶುಭ ಕಾರ್ಯಗಳನ್ನು ಮಾಡಬಾರದು.
- ಚಂದ್ರ ಗ್ರಹಣದ ಸಮಯದಲ್ಲಿ ಪ್ರಯಾಣವನ್ನು ಮಾಡಬೇಡಿ. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ.
- ಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ವಿಶೇಷ ಕಾಳಜಿಯನ್ನು ವಹಿಸಬೇಕು.
- ಚಂದ್ರ ಗ್ರಹಣದ ಸಮಯದಲ್ಲಿ ಮಲಗಬಾರದು ಹಾಗೆಯೆ ಯಾವುದೇ ಚೂಪಾದ ವಸ್ತುವನ್ನು ಬಳಸಬಾರದು.
- ಗ್ರಹಣದ 9 ಗಂಟೆಗಳ ಮೊದಲು ಚಂದ್ರಗ್ರಹಣದ ಸೂತಕ ಅವಧಿಯು ಪ್ರಾರಂಭವಾಗುತ್ತದೆ. ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವನ್ನು ಭಾರತದಲ್ಲಿ ಕಾಣಬಹುದು.
ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತದೆ 2022?
ಚಂದ್ರ ಗ್ರಹಣ ನವೆಂಬರ್ 2022 ರ 08 ನೇ ತಾರೀಕು ಮಂಗಳವಾರದಂದು ಸಂಭವಿಸುತ್ತದೆ.
ಚಂದ್ರ ಗ್ರಹಣ 2022 ಸಮಯ?
ಸಂಜೆ 05:32 ಕ್ಕೆ ಪ್ರಾರಂಭವಾಗಿ ಸಂಜೆ 06.18 ಕ್ಕೆ ಮುಗಿಯಲಿದೆ.
Chandra Grahana 2022 Kannada
November 8, Tuesday
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
