
Kannada health tips
ಕ್ಯಾನ್ಸರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗೆ ಇದಕ್ಕೆ ಪೂರಕ ಎನ್ನುವಂತೆ ಹಲವಾರು ರೀತಿಯ ಹೊಸ ಹೊಸ ಅಧ್ಯಯನಗಳು ಕೂಡ ನಡಿತಾ ಇದೆ. ಇದೇ ವಿಷಯವಾಗಿ ನಡೆದಂತಹ ಒಂದು ಅಧ್ಯಯನ ಹೇಳಿದ ಪ್ರಕಾರ 2050 ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ರೋಗ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ 2022 ರಿಂದ 2050ರ ನಡುವೆ ಕ್ಯಾನ್ಸರ್ ಸಮಸ್ಯೆ ಶೇಕಡ 84ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಪುರುಷರಲ್ಲಿ ಕ್ಯಾನ್ಸರ್ ನಿಂದ ಹೆಚ್ಚುವ ಸಾವುಗಳಲ್ಲಿ ಶೇಕಡಾ 93ರಷ್ಟು ಹೆಚ್ಚಳವಾಗಲಿದೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ. ಈ ಸಂಖ್ಯೆ 2022 ರಲ್ಲಿ 5.4 ಮಿಲಿಯನ್ ನಿಂದ 2050ರಲ್ಲಿ 10.5 ಮಿಲಿಯನ್ ಗೆ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಲು ಕಾರಣವೇನು?
ಸಂಶೋಧಕರು 185 ದೇಶಗಳಿಂದ ಡೇಟಾವನ್ನು ಸಂಗ್ರಹ ಮಾಡಿದ್ದು ಅಧ್ಯಯನ ಮಾಡಿದ ಲೇಖಕರು ಹೇಳುವ ಪ್ರಕಾರ ಪುರುಷರು ಮಹಿಳೆಯ ಜೂನ್ ಪಾನ ಮತ್ತು ಮದ್ಯಪಾನ ಮಾಡುವುದರಿಂದ ಕ್ಯಾನ್ಸರ್ ಗೆ ಸಂಬಂಧಿಸಿದ ಸಾವು ನೋವುಗಳ ಅಪಾಯವನ್ನು ಹೆಚ್ಚು ಮಾಡುತ್ತದೆ. ಇದಲ್ಲದೆ ಪುರುಷರು ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಂಡುಬಂದಾಗ ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬರುವ ಸಾಧ್ಯತೆ ಕೂಡ ತುಂಬಾನೇ ಕಡಿಮೆ ಮತ್ತು ಕೆಲಸದಲ್ಲಿ ಕ್ಯಾನ್ಸರ್ ಕಾರಕಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ವಿವಿಧ ರಾಷ್ಟ್ರಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಈ ಫಲಿತಾಂಶಗಳಲ್ಲಿ ವ್ಯತ್ಯಾಸಗಳನ್ನು ಸಂಶೋಧಕರು ಗುರುತು ಮಾಡಿದ್ದಾರೆ. 2022 ಮತ್ತು 2020 ರ ನಡುವೆ ಆಫ್ರಿಕಾ ಮತ್ತು ಪೂರ್ವ ಮೆಡಿಟೇರಿಯನ್ ನಲ್ಲಿ ಕ್ಯಾನ್ಸರ್ ಪ್ರಕರಣ 2.5 ಪಟ್ಟು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿದ್ದಾರೆ. ಯುರೋಪ್ ನಲ್ಲಿ ಇದರ ಅರ್ಧದಷ್ಟು ಹೆಚ್ಚಳ ಕಂಡುಬರುವ ನಿರೀಕ್ಷೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.
2050 ರಲ್ಲಿ ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ ಎಂದು ಊಹೆ ಮಾಡಲಾಗಿದೆ. ಇದರ ನಂತರ ಪ್ರಾಸ್ಟೇಟ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಬರುತ್ತದೆ. ಅಲ್ಲದೆ 2020 ರ ಬಳಿಗೆ ಮೂತ್ರಕೋಶದ ಕ್ಯಾನ್ಸರ್ ಹೆಚ್ಚು ಮಾರಣಾಂತಿಕವಾಗಿದೆ ಎಂದು ಊಹೆ ಮಾಡಲಾಗಿದೆ.