ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸಿ ಹಣದ ಹೊಳೆ ಹರಿಯುತ್ತದೆ
Sri Krishna Janmashtami 2024: ಭಗವಾನ್ ಶ್ರೀಕೃಷ್ಣ ಜನ್ಮ ವಾರ್ಷಿಕೋತ್ಸವವನ್ನು ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿನದಂದು ಆಚರಣೆ ಮಾಡಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನ ಆರಾಧನೆ, ವಿಶೇಷವಾದಂತಹ ಪೂಜೆ ಹಾಗೂ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಕೃಷ್ಣನ ಸ್ಮರಣಾರ್ಥ ಭಕ್ತರು ಮನೆಯಲ್ಲಿ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯವನ್ನು ಅರ್ಪಣೆ ಮಾಡುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಅನ್ನವನ್ನು ನೈವೇದ್ಯ ಮಾಡುವುದು ಶ್ರೇಷ್ಠ ಹಾಗೂ ಇದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ ಭಕ್ತರು ಶ್ರೀಕೃಷ್ಣನ ವಿಶ್ವ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಜೀವನದಲ್ಲಿ ಶಾಂತಿ ಸುಖ ನೆಮ್ಮದಿ ಸಮೃದ್ಧಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ.
ಶ್ರೀಕೃಷ್ಣನಿಗೆ ಬೆಣ್ಣೆಯಿಂದ ಮಾಡಿದ ತಿನಿಸುಗಳನ್ನು ಅರ್ಪಣೆ ಮಾಡುವುದು ಅತ್ಯಂತ ಪ್ರಿಯಕರ ವಾಗಿದೆ ಎಂದು ಪರಿಗಣನೆ ಮಾಡಲಾಗಿದೆ. ಹಾಗಾಗಿ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು ಸಕ್ಕರೆ ಮಿಠಾಯಿ ನ ಕೂಡ ಅರ್ಪಿಸಬಹುದು.
ಬೆಣ್ಣೆ ಮತ್ತು ಡ್ರೈ ಫ್ರೂಟ್ಸ್ ನಿಂದ ಮಾಡಿದ ಪಾಯಸ ಶ್ರೀಕೃಷ್ಣನಿಗೆ ತುಂಬಾ ಇಷ್ಟವಾದ ನೈವೇದ್ಯ ಎಂದು ಪರಿಗಣನೆ ಮಾಡಲಾಗಿದೆ. ಆದಕಾರಣ ನೀವು ಕೂಡ ಕೃಷ್ಣನ ಆಶೀರ್ವಾದವನ್ನು ಪಡೆಯಲು ಖಂಡಿತವಾಗಿಯೂ ಈ ಪಾಯಸವನ್ನು ಅರ್ಪಿಸಬಹುದು.
ಬೆಣ್ಣೆಯಿಂದ ಮಾಡಿದ ಬೇಸಿನ್ ಲಾಡು ಇದನ್ನು ಕೂಡ ನೀವು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ್ ಕೃಷ್ಣನಿಗೆ ನೈವೇದ್ಯವನ್ನು ಮಾಡಬಹುದು. ಆದಕಾರಣ ನೀವು ಕೂಡ ಜನ್ಮಾಷ್ಟಮಿಯ ದಿನದಂದು ತಪ್ಪದೆ ನೈವೇದ್ಯವನ್ನು ಅರ್ಪಿಸಿ.
ಶನಿ ದೇವನ ಪ್ರಭಾವ ಈ ರಾಶಿ ಅವರಿಗೆಲ್ಲ 1.5 ತಿಂಗಳು ಐಶ್ವರ್ಯ ಯೋಗಗಳು ಲಭ್ಯ
ಕೊತ್ತುಂಬರಿ ಸೊಪ್ಪನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣನೆ ಮಾಡಲಾಗಿದೆ. ಆದಕಾರಣ ಲಡ್ಡು ಗೋಪಾಲನಿಗೆ ಕೊತ್ತಂಬರಿ ಸೊಪ್ಪಿನಲ್ಲಿ ಮಾಡಿದ ರೊಟ್ಟಿಯನ್ನು ಅರ್ಪಣೆ ಮಾಡುವುದು ಅತ್ಯಂತ ಮಂಗಳಕರ ವಾಗಿದೆ. ಇದನ್ನ ಮಾಡುವುದರಿಂದ ನಮ್ಮ ಆರ್ಥಿಕ ಸಮಸ್ಯೆಗಳು ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
