
ಮಗು ಜನಿಸಿದ ನಂತರ ತಾಯಿಯ ಎದೆ ಹಾಲು (Breast Milk) ಅಮೃತವಿದ್ದಂತೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ. ಹಾಗಾಗಿಯೇ ಬಾಣಂತಿಯರು ಉತ್ತಮ ಆಹಾರ ಸೇವನೆಯ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ, ನೀವು ಎಂದಾದರೂ ಗಮನಿಸಿದ್ದೀರಾ, ಕೆಲವು ತಾಯಂದಿರು ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಒಂದೆರಡು ಹನಿ ಹಾಲನ್ನು ನೆಲಕ್ಕೆ ಚೆಲ್ಲುತ್ತಾರೆ. ಇದು ಕೇವಲ ಸಂಪ್ರದಾಯವೋ ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣವಿದೆಯೇ? ಆಶ್ಚರ್ಯವಾದರೂ ಸತ್ಯ, ಹೀಗೆ ಮಾಡುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ! ಹಾಗಾದರೆ, ಮೊಲೆ ಹಾಲು ನೀಡುವ ಮೊದಲು ಹಾಲನ್ನು ಚೆಲ್ಲುವುದರ ಉದ್ದೇಶವೇನು? ತಿಳಿಯೋಣ ಬನ್ನಿ.
ಕೆಟ್ಟ ದೃಷ್ಟಿಯಿಂದ ಮಗುವನ್ನು ಕಾಪಾಡುವುದೇ?
ಸಾಮಾನ್ಯವಾಗಿ, ತಾಯಂದಿರು ತಮ್ಮ ಮಗುವಿಗೆ ಮೊಲೆ ಹಾಲು (Breast Milk) ನೀಡುವ ಮುನ್ನ ಸ್ವಲ್ಪ ಹಾಲನ್ನು ಕೆಳಗೆ ಚೆಲ್ಲುತ್ತಾರೆ. ಹೀಗೆ ಮಾಡುವುದರಿಂದ ಮಗುವಿಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಇದರಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಮಗು ಹೊಟ್ಟೆ ತುಂಬಾ ಹಾಲು ಕುಡಿಯುತ್ತದೆ ಎಂಬುದು ಅವರ ವಿಶ್ವಾಸ. ಆದರೆ, ಅನೇಕರು ಇದನ್ನು ಕೇವಲ ಮೂಢನಂಬಿಕೆ ಎಂದು ತಳ್ಳಿಹಾಕುತ್ತಾರೆ. ಆದರೆ ಸತ್ಯವೆಂದರೆ, ಇದರ ಹಿಂದೆ ಕೇವಲ ನಂಬಿಕೆ ಮಾತ್ರವಲ್ಲ, ವೈಜ್ಞಾನಿಕ ಕಾರಣಗಳೂ ಇವೆ.
ಮೊಲೆ ಹಾಲು ನೀಡುವ ಮೊದಲು ಚೆಲ್ಲುವುದರ ನಿಜವಾದ ಕಾರಣ ಇಲ್ಲಿದೆ!
ಮಗುವಿಗೆ ಮೊಲೆ ಹಾಲು (Breast Milk) ನೀಡುವ ಮೊದಲು ಸ್ವಲ್ಪ ಹಾಲನ್ನು ಹೊರಗೆ ಚೆಲ್ಲುವುದರಿಂದ, ಸ್ತನಗಳಲ್ಲಿ ಮೊದಲು ಶೇಖರಣೆಯಾಗಿದ್ದ ಹಾಲು ಹೊರಹೋಗುತ್ತದೆ. ಇದು ಮುಖ್ಯವಾಗಿ ಹಾಲಿನ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಬಾಣಂತಿಯರಿಗೆ ಎದೆಯಲ್ಲಿ ಹಾಲು ಬೇಗನೆ ಬರುವುದಿಲ್ಲ. ಹೀಗೆ ಸ್ವಲ್ಪ ಹಾಲು ತೆಗೆಯುವುದರಿಂದ ಹಾಲು ಬರುತ್ತಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಅಂದರೆ, ಇದು ನಿಧಾನಗತಿಯ ಹಾಲಿನ ಹರಿವನ್ನು ಹೆಚ್ಚಿಸುತ್ತದೆ.
ಅದಲ್ಲದೆ, ಹೀಗೆ ಮಾಡುವುದರಿಂದ ಸ್ತನಗಳು ಮೃದುವಾಗುತ್ತವೆ. ಇದರಿಂದ ಮಗುವಿಗೆ ಹಾಲು ಕುಡಿಯಲು ಸುಲಭವಾಗುತ್ತದೆ. ಗಟ್ಟಿಯಾದ ಸ್ತನಗಳಿಂದ ಮಗುವಿಗೆ ಸರಿಯಾಗಿ ಹೀರಲು ಸಾಧ್ಯವಾಗದೆ ತೊಂದರೆಯಾಗಬಹುದು. ಮೊಲೆ ಹಾಲು ನೀಡುವ ಮೊದಲು ಹಾಲನ್ನು ಹೊರಗೆ ಚೆಲ್ಲುವ ಕ್ರಮವು ಬಾಣಂತಿಯರಿಗೆ ಸ್ತನಗಳಲ್ಲಿ ಕಂಡುಬರುವ ಊತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗುತ್ತದೆ. ಸ್ತನಗಳಲ್ಲಿ ಅತಿಯಾದ ಹಾಲು ತುಂಬಿಕೊಂಡಾಗ ನೋವು ಮತ್ತು ಭಾರದ ಅನುಭವವಾಗಬಹುದು. ಸ್ವಲ್ಪ ಹಾಲು ತೆಗೆಯುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮಧ್ಯಾಹ್ನ ಊಟದ ನಂತರ ನಿದ್ರೆ ಮಾಡುವುದು ಒಳ್ಳೆಯದೇ ?
ಹೀಗಾಗಿ, ಮೊಲೆ ಹಾಲು ನೀಡುವ ಮೊದಲು ಒಂದೆರಡು ಹನಿ ಹಾಲನ್ನು ಚೆಲ್ಲುವುದು ಕೇವಲ ಒಂದು ಸಂಪ್ರದಾಯ ಅಥವಾ ಮೂಢನಂಬಿಕೆಯಲ್ಲ. ಇದರ ಹಿಂದೆ ತಾಯಿ ಮತ್ತು ಮಗು ಇಬ್ಬರಿಗೂ ಅನುಕೂಲವಾಗುವ ವೈಜ್ಞಾನಿಕ ಕಾರಣಗಳಿವೆ. ಇದು ಹಾಲಿನ ಹರಿವನ್ನು ಸುಧಾರಿಸುವುದರ ಜೊತೆಗೆ, ಸ್ತನಗಳ ಆರೋಗ್ಯವನ್ನು ಕಾಪಾಡಲು ಮತ್ತು ಮಗುವಿಗೆ ಸುಲಭವಾಗಿ ಹಾಲು ಕುಡಿಯಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ನೂರಾರು ವರ್ಷ ಬದುಕಲು ಈ ರಹಸ್ಯ ಗೊತ್ತಿದ್ದರೆ ಸಾಕು! 105 ವರ್ಷದ ಮಹಿಳೆ ಹೇಳಿದ್ದೇನು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.