
bigg boss kannada season 11 contestants
Bigg Boss Kannada Season 11 Contestants: ಬಿಗ್ ಬಾಸ್ ಶುರು ಆದ್ರೆ ಸಾಕು ಎಲ್ಲರೂ ಆ ವಿಷಯದ ಬಗ್ಗೆನೇ ಮಾತನಾಡ್ತಾ ಇರ್ತಾರೆ . ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸಹ ಬಿಗ್ ಬಾಸ್ ಸುದ್ದಿಗಳೇ ಹರಿದಾಡುತ್ತಾ ಇರುತ್ತದೆ. ಹಾಗಾದರೆ ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ಯಾರೆಲ್ಲ ಬರುತ್ತಾರೆ ಅಂತ ನೋಡೋಣ ಬನ್ನಿ.
ಬಿಗ್ ಬಾಸ್ ಕನ್ನಡ 11 ರ ಪ್ರೊಮೊವನ್ನು ಈಗಾಗಲೇ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮಾಡಿದ್ದಾರೆ. ಹಾಗೆ ಎಲ್ಲಾ ಬಿಗ್ ಬಾಸ್ ಸೀಸನ್ ಹಾಗೆಯೇ ಈ ಬಾರಿಯು ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಬರುವ ಸ್ಪರ್ದಿಗಳನ್ನು ನೋಡುವುದಾದರೆ ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರವನ್ನು ಮಾಡುತ್ತಿರುವ ತನ್ವಿ ರಾವ್ ಬರುತ್ತಾರೆ ಎಂದು ಊಹಿಸಲಾಗಿದೆ .
ಬಿಗ್ ಬಾಸ್ ಕನ್ನಡ 11 ರ ಸಂಭಾವ್ಯ ಸ್ಪರ್ದಿಗಳ ಪಟ್ಟಿ
ಬಿಗ್ ಬಾಸ್ ಶುರುವಾಗುತ್ತೆ ಅಂದ ತಕ್ಷಣವೇ ವದಂತಿಗಳು ಹಬ್ಬಲು ಶುರುವಾಗುತ್ತೆ. ಹಾಗೆಯೆ ವದಂತಿಗಳ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಜ್ಯೋತಿ ರೈ, ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸ, ವರುಣ್ ಆರಾಧ್ಯ, ಮೋಕ್ಷಿತಾ ಪೈ, ಭವ್ಯ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂದೆಲ್ಲಾ ಹೇಳಲಾಗಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತನಾಡುವ ಪ್ರಕಾರ ಬಿಗ್ ಬಾಸ್ ಕನ್ನಡ 11 ನೇ ಸೀಸನ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೇಳಿಬರುತ್ತಿದೆ. ಹಾಗೆ ಅಜಿತ್ ಹನುಮಕ್ಕನವರ್, Dr Bro ಎಂದೇ ಪ್ರಸಿದ್ದಿ ಪಡೆದಿರುವ ಗಗನ್ ಶ್ರೀನಿವಾಸ್ ಸಹ ಹೋಗಲಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ.
ಗಾಯಕಿ ಆಶಾ ಭಟ್ ಅವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂದು ವರದಿ ಆಗಿದೆ. ಕಿರುತೆರೆ ಮೂಲಕ ಗಮನ ಸೆಳೆದ ಸುಕೃತಾ ನಾಗ್ ಅವರು ಸಹ ದೊಡ್ಡ ಮನೆಗೆ ಹೋಗಲಿದ್ದಾರೆ. ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್ ಅವರ ಮಗ ಪಂಕಜ್ ನಾರಾಯಣ್ ಸಹ ಹೋಗುವ ಸಾಧ್ಯತೆ ಇದೆ.
ಸತ್ಯ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡಿದ್ದ ನಟಿ ಗೌತಮಿ ಜಾದವ್ ಸಹ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ಇದೆ. ಗೀತಾ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ ನಟಿ ಶರ್ಮಿತಾ ಗೌಡ ಸಹ ಹೋಗುವ ಸಂಭವ ಇದೆ.
ಪುರುಷರಲ್ಲಿ ಕ್ಯಾನ್ಸರ್ ಪ್ರಮಾಣ ಶೇಕಡ 84ರಷ್ಟು ಹೆಚ್ಚಳ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.