
Bhat n Bhat
Bhat n Bhat: ಭಟ್ ಎನ್ ಭಟ್ ಈ ಚಾನೆಲ್ ಅನ್ನು ಯಾರು ಯು ಟ್ಯೂಬ್ ನಲ್ಲಿ ನೋಡಿಲ್ಲ ಹೇಳಿ. ಕರ್ನಾಟಕದಲ್ಲಿ ಅತಿ ಕಡಿಮೆ ಸಮಯದಲ್ಲಿ ಈ ಚಾನೆಲ್ ವೈರಲ್ ಆಗಿದೆ ಅಂತಾನೆ ಹೇಳಬಹುದು. ಹೊಸದಾದ ವಿಶಿಷ್ಟ ಶೈಲಿಯಲ್ಲಿ ನೀವು ಭಟ್ ಏನ್ ಭಟ್ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ. ಸುತ್ತ್ತ ಮುತ್ತಲಿನ ಪರಿಸರದಲ್ಲಿಯೇ ಅಡುಗೆ ಮಾಡುವುದನ್ನ ನೋಡಲು ಜನರು ತುಂಬಾ ಇಷ್ಟ ಪಡುತ್ತಾರೆ. ಹಾಗೆ ಇವರ ನಿರೂಪಣೆಗೆ ಅಧಿಕ ಜನರು ಫ್ಯಾನ್ಸ್ ಆಗಿದ್ದಾರೆ.
ಸುದರ್ಶನ್ ಭಟ್ ಹಾಗೂ ಮನೋಹರ್ ಭಟ್ ಅವರು ಭಟ್ ಎನ್ ಭಟ್ [Bhat n Bhat] ಚಾನೆಲ್ ಅನ್ನು ನಡೆಸುತ್ತಾರೆ. ಸುದರ್ಶನ್ ಹಾಗೂ ಮನೋಹರ್ ಭಟ್ ಇಬ್ಬರು ಅವಳಿ ಸಹೋದರರು. ಇವರು ಕೇರಳದ ಕಾಸರಗೋಡು ಜಿಲ್ಲೆಯವರು. ಇವರದ್ದು ಹವ್ಯಕ ಬ್ರಾಹ್ಮಣ ಕುಟುಂಬ. ಇವರ ತಂದೆಯ ಹೆಸರು ವೆಂಕಟರಮಣ ಭಟ್ ಹಾಗೂ ತಾಯಿಯ ಹೆಸರು ಸುಲೋಚನಾ ಭಟ್.
ಇವರು ಲಾಕ್ ಡೌನ್ ಸಮಯದಲ್ಲಿ ಇವರ ಯು ಟ್ಯೂಬ್ ಚಾನೆಲ್ ಶುರು ಮಾಡಿದರು. ಇವರು ಮನೆಯ ಸುತ್ತಮುತ್ತಲು ಸಿಗುವ ತರಕಾರಿಗಳನ್ನು ಬಳಸಿ ಅಡುಗೆಯನ್ನು ಮಾಡಿದ ವೀಡಿಯೋಸ್ ತುಂಬಾ ವೈರಲ್ ಆಗಿದ್ದವು. ಯು ಟ್ಯೂಬ್ ಸೇರಿದಂತೆ ಫೇಸ್ಬುಕ್ ಪೇಜ್ ನಲ್ಲಿ ಕೂಡ ಮಿಲಿಯನ್ ನಲ್ಲಿ ವೀಡಿಯೋಸ್ ಗಳಿಗೆ ವ್ಯೂಸ್ ಬರುತ್ತೆ. ಈಗ ಇವರ ಯು ಟ್ಯೂಬ್ ಚಾನೆಲ್ ಶೀಘ್ರದಲ್ಲೇ ಒಂದು ಮಿಲಿಯನ್ ಚಂದಾದಾರರನ್ನು ತಲುಪುತ್ತದೆ. ಲಾಕ್ ಡೌನ್ ನಲ್ಲಿ ಶುರುವಾದ ಇವರ ಚಾನೆಲ್ ಅತಿ ದೊಡ್ಡ ಮೈಲಿಗಲನ್ನು ತಲುಪಿದೆ.
ಸುದರ್ಶನ್ ಭಟ್ ಹಾಗೂ ಮನೋಹರ್ ಭಟ್ ಇಬ್ಬರು ಕೂಡ ಯುವ ವಕೀಲರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಇವರ ಯು ಟ್ಯೂಬ್ ಚಾನೆಲ್ ನಲ್ಲಿ ಸುದರ್ಶನ್ ಭಟ್ ಅವರು ಹವ್ಯಕ ಬ್ರಾಹ್ಮಣ ಶೈಲಿಯ ಕನ್ನಡದಲ್ಲಿ ನಿರೂಪಣೆಯನ್ನು ಮಾಡುತ್ತಾರೆ ಹಾಗೆ ರೆಕಾರ್ಡ್ ಮಡಿದ ವೀಡಿಯೋಸ್ ಗಳನ್ನೂ ಮನೋಹರ್ ಭಟ್ ಅವರು ಎಡಿಟ್ ಮಾಡುವುದು ಹಾಗೂ ಅಪ್ಲೋಡ್ ಮಾಡ್ತಾರೆ. ಇವರಿಗೆ ಹೊಸ ಹೊಸ ರೆಸಿಪಿ ಐಡಿಯಾ ಗಳನ್ನೂ ಇವರ ಅಕ್ಕ ಹಾಗೂ ಭಾವ ನೀಡುತ್ತಾರೆ. ಇವರು ಕನ್ನಡದಲ್ಲಿ ವೀಡಿಯೋಸ್ ಮಾಡಿದರು ಇಂಗ್ಲಿಷ್ ನಲ್ಲಿ ಕೂಡ ಸಬ್ ಟೈಟಲ್ಸ್ ಹಾಕಿರ್ತಾರೆ. ಇದರಿಂದ ಬೇರೆ ಭಾಷೆಯವರು ನೋಡಿದರು ಕೂಡ ಅವರಿಗೆ ಅರ್ಥ ಆಗುತ್ತೆ.
ಇವರು ಮೈಸೂರ್ ಪಾಕ್, ಅಮೃತ ಫಲ, ಮಾಲೆ ಗೊಜ್ಜು, ಮಿರ್ಚಿ ಬಜೆ, ಕುಂಬಳ ಕಾಯಿ ಓಲನ್, ಬದನೇಕಾಯಿ ಎಣ್ಣೆಗಾಯಿ, ಗುಲಾಬ್ ಜಾಮೂನ್, ಎಳನೀರು ಹಲ್ವಾ, ಉಪ್ಪಿನಕಾಯಿ ಸೇರಿದಂತೆ ಇನ್ನು ಹಲವು ಬಗೆಯ ಅಡುಗೆಯ ವಿಡಿಯೋ ಗಳನ್ನೂ ಇವರ ಭಟ್ ಎನ್ ಭಟ್ [Bhat n Bhat] ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇವರ ಎಲ್ಲ ವೀಡಿಯೋಸ್ ಗಳು ಲಕ್ಷ ಗಟ್ಟಲೆ ವೀಕ್ಷಣೆಯನ್ನು ಸಹ ಪಡೆಯುತ್ತೆ. ಇವರು 155 ಹೆಚ್ಚಿನ ರೆಸಿಪಿಗಳನ್ನು ಶೇರ್ ಮಾಡಿದ್ದಾರೆ.
Bhat n Bhat Age
25 years
Bhat n Bhat Wikipedia
The Wikipedia page is not created
Sudarshan Bhat Bedradi wikipedia
The Wikipedia page is not created
Bhat n Bhat Youtube earnings
Approximately 3 Lakh to 5 Lakh rupees
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.