
ಕುಮಟಾ ತಾಲೂಕಿನ ಹೊಳೆಗದ್ದೆ ಗ್ರಾಮದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಭಜನೆ 29 ನವೆಂಬರ್ 2022 ಮಂಗಳವಾರದಂದು ಪ್ರಾರಂಭವಾಗಿ 2 ಡಿಸೆಂಬರ ಶುಕ್ರವಾರದವರೆಗೆ ನಡೆಯಿತು.
ಡಿಸೆಂಬರ 2 ರಂದು ನಡೆದ ಭಜನಾ ಮಂಗಲ ಕಾರ್ಯಕ್ರಮದಲ್ಲಿ ಹಾಲಕ್ಕಿ ಸಮಾಜದವರಿಂದ ಮರಕಾಲು ಕುಣಿತ ಮುಖ್ಯ ಆಕರ್ಷಣೆ ಆಗಿತ್ತು.
ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾದ ಶ್ರೀ ಶಾಂತಿಕಾಂಬೆಯ ಮೆರವಣಿಗೆ ದೇವಸ್ಥಾನದಿಂದ ಶ್ರೀ ಧಾರಾನಾಥ ದೇವಾಲಯ, ಧಾರೆಶ್ವರಕ್ಕೆ ತೆರಳಿ ಪೂಜೆ ಮುಗಿಸಿ ಮರಳಿ ಸ್ವಸ್ಥಾನಕ್ಕೆ ಬಂದು ಭಜನಾ ಮಂಗಲ ಕಾರ್ಯಕ್ರಮ ಮುಗಿಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು.
ಭಜನಾ ಮಂಗಲದ ದೃಶ್ಯಗಳನ್ನು ಕೆಳಗಿನ ವಿಡಿಯೋದಲ್ಲಿ ನೋಡಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.