
Bhagyalakshmi kannada serial
ಕನ್ನಡದ ಈಗಿನ ಟಾಪ್ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡದ {Colors Kannada} ಧಾರಾವಾಹಿ ಆದ ಭಾಗ್ಯಲಕ್ಷ್ಮೀ {Bhagyalakshmi kannada serial} ಧಾರಾವಾಹಿ ತುಂಬಾ ಫೇಮಸ್ ಆಗಿದೆ. ಹೆಚ್ಚಿನ ಜನರು ಈ ಧಾರಾವಾಹಿಯನ್ನು ಸಹ ನೋಡುತ್ತಾರೆ. ಈ ಭಾಗ್ಯಲಕ್ಷ್ಮೀ ಧಾರಾವಾಹಿಯ ನಟಿಯ ಹೆಸರು ಸುಷ್ಮಾ ಕೆ ರಾವ್. ಇವರ ಜೀವನದ ಕೆಲವೊಂದು ವಿಷಯದ ಬಗ್ಗೆ ತಿಳಿಯಿರಿ.
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ನಟಿ ಸುಷ್ಮಾ ಅವರು ಧಾರಾವಾಹಿಯಲ್ಲಿ ಗಂಡನಿಂದ ಬೈಗುಳವನ್ನು , ಮಗಳಿಂದ ತಿರಸ್ಕಾರವನ್ನು ಎದುರಿಸುತ್ತಿರುವ ಪಾತ್ರವನ್ನ ಮಾಡುತ್ತಿದ್ದಾರೆ. ಜೀವನದಲ್ಲಿ ಹಲವು ಕಷ್ಟಗಳು ಇವರ ಜೀವನದಲ್ಲಿ ಬಂದಿದೆ. ನಿಜ ಜೀವನದಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ.
ಸುಷ್ಮಾ ಅವರು ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ, ಪುಟ್ಟಗೌರಿ ಮದುವೆ ಹಾಗೂ ಇತರೆ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟು 10 ವರ್ಷಗಳ ನಂತರ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಮಾಡ್ತಾ ಇದ್ದಾರೆ ಭಾಗ್ಯಲಕ್ಷ್ಮಿಯ ಧಾರವಾಹಿಯನ್ನು ಸುಷ್ಮಾ ರಾವ್. ಇವರು ಮೂಲತಃ ಭರತನಾಟ್ಯಂ ಡ್ಯಾನ್ಸರ್ ಹಾಗೂ ದೇಶದ ವಿವಿಧ ಜಾಗಗಳಲ್ಲಿ ಇವರು ನೃತ್ಯ ಪ್ರದರ್ಶನವನ್ನು ಕೂಡ ಮಾಡ್ತಾ ಬಂದಿದ್ದರು ತುಂಬಾನೇ ಫೇಮಸ್ ಕೂಡ ಆಗಿದ್ದಾರೆ.
ಸುಷ್ಮಾ ಕೆ ರಾವ್ ಮೂಲತಃ ಚಿಕ್ಕಮಗಳೂರಿನವರು. ಇವರಿಗೆ ನಟಯಾಗಿ ಹಾಗೂ ನಿರೂಪಕಿಯಾಗಿ ತುಂಬಾನೇ ಆಫರ್ ಗಳು ಕೂಡ ಬಂದಿದ್ದವು. ಇವರ ತಂದೆ ತೀರಿ ಹೋದಾಗ ಹಾಗೆ ಕಾದು ಪ್ರಾಕ್ಚರ್ ಆದಾಗ, ತಾಯಿಗೆ ಬ್ರೈನ್ ಟ್ಯೂಮರ್ ಆದ ಸಮಯದಲ್ಲಿ ಕೂಡ ಸುಷ್ಮಾ ಅವರು ನಟನೆಯನ್ನು ಮಾಡಿದ್ದರು.
ಸುಷ್ಮಾ ಅವರು ಹೇಳುವ ಪ್ರಕಾರ ಧಾರವಾಹಿಗಳಲ್ಲಿ ವರ್ಷಾನುಗಟ್ಟಲೆ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆ ನಟನೆ ಬಂದಾಗ ಇವತ್ತು ನಟನೆ ಮಾಡೋಣ ನಾಳೆ ಮಾಡೋದಕ್ಕೆ ಆಗೋದಿಲ್ಲ ಅಂತ ಕೂಡ ಹೇಳುವುದಕ್ಕೆ ಸಾಧ್ಯ ಇಲ್ಲ ಹಾಗಾಗಿ ನಟನೆ ಮಾಡುವುದು ಒಂದು ತುಂಬಾ ದೊಡ್ಡ ಚಾಲೆಂಜ್ ಅನ್ನೋದು ಸುಷ್ಮಾ ಅವರ ಅಭಿಪ್ರಾಯ. ನಟಿಯಾಗಿ ಕಾಣಿಸಿಕೊಂಡಿರುವಂತಹ ಸುಷ್ಮಾ ಅವರು ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಹಲವಾರು ರಿಯಾಲಿಟಿ ಶೋಗಳಲ್ಲಿ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೆ ಮನೆ ಮಹಾಲಕ್ಷ್ಮಿ ಸೇರಿದಂತೆ ಜೀ ಕನ್ನಡದ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಧಾರವಾಹಿ ಕಥೆ ಪ್ರಕಾರ ಭಾಗ್ಯಾಳನ್ನ ಕಂಡರೆ ತಾಂಡವ ಸೋಪನ್ನು ಕೂಡ ಇಷ್ಟನೇ ಇರೋದಿಲ್ಲ ಹಾಗೆ ಅವಳ ಮಗಳು ತನ್ವಿಗೂ ಕೂಡ ಅಮ್ಮನ ಮನೆ ಕಂಡ್ರೆ ಇಷ್ಟ ಇರೋದಿಲ್ಲ. ಹಾಗೆ ಭಾಗ್ಯಳ ಗಂಡ ತಾಂಡವ್ ಆಫೀಸಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯ ಜೊತೆ ಪ್ರೀತಿಯಲ್ಲಿದ್ದಾನೆ.
ಈ ಧಾರಾವಾಹಿ ಕತೆಗಳು ಪ್ರತಿ ದಿವಸ ತುಂಬಾನೇ ಇಂಟರೆಸ್ಟಿಂಗ್ ಬರುವಂತಹ ಕಥೆಗಳನ್ನ ತುಂಬಾ ಜನ ಇಷ್ಟ ಪಡ್ತಾ ಇದ್ದಾರೆ. ಇದರ ಟಿ ಆರ್ ಪಿ ಕೂಡ ತುಂಬಾನೇ ಜಾಸ್ತಿಯಾಗಿದೆ. ಭಾಗ್ಯ ತನ್ನ ಮನೆ ಯಾವ ರೀತಿ ನಡೆಸಿಕೊಂಡು ಹೋಗ್ತಾಳೆ ಅನ್ನೋದು ತುಂಬಾನೇ ಕುತೂಹಲಕಾರಿ ಆಗಿರುತ್ತದೆ ಅಂತ ಕೆಲವರು ಹೇಳುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.