ಆರೋಗ್ಯವಾಗಿರಬೇಕೆಂದರೆ ಆಹಾರ ಸೇವನೆ ಅಗತ್ಯವಾಗಿದೆ. ಆದರೆ ನೀವು ಏನನ್ನು ತಿನ್ನುತ್ತಿದ್ದೀರಾ ಎನ್ನುವುದನ್ನು ತಿಳಿದುಕೊಂಡಿರಬೇಕು. ನೀವು ಪ್ರತಿದಿನ ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತೀರಾ. ಆದ್ರೆ ನೀವು ತಿನ್ನುವ ಆಹಾರ ಅತಿಯಾದರೆ ಅದು ಕೂಡ ವಿಷವಾಗುತ್ತೆ. ಹಾಗೆಯೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಕಾಡಲು ಪ್ರಾರಂಭವಾಗುತ್ತೆ.
ನೀವು ಕೂಡ ಈ ಕೆಳಗೆ ನೀಡಿರುವ ಆಹಾರಗಳನ್ನು ಪ್ರತಿದಿನ ತಿನ್ನುತ್ತಿದ್ದೀರಾ ಇದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂದು ತಿಳಿದುಕೊಳ್ಳಿ.
ಬ್ರೆಡ್: ಹಲವು ಜನರಿಗೆ ಬೆಳ್ಳಿಗೆ ಎಡ್ಡಾ ತಕ್ಷಣ ಚಹ ಅಥವಾ ಕಾಫಿ ಜೊತೆಗೆ ಬ್ರೆಡ್ ತಿನ್ನುವ ಅಭ್ಯಾಸವಿರುತ್ತೆ. ಬ್ರೆಡ್ ತಿನ್ನಲು ಬಹಳ ರುಚಿಯಾಗಿರುತ್ತೆ ಆದರೆ ಇದನ್ನು ತಿನ್ನುವುದರಿಂದ ನಿಮ್ಮ ದೇಹದ ಮೇಲೆ ಕೂಡ ಪರಿಣಾಮ ಬೀರುತ್ತೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಬ್ರೆಡ್ ನಲ್ಲಿ ಪೊಟ್ಯಾಸಿಯಂ ಬ್ರೋಮೇಟ್ ಅಂಶ ಇರುತ್ತೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕರ. ಅತಿಯಾದ ಸೇವನೆಯಿಂದ ನಿಮಗೆ ಮಧುಮೇಹದ ಸಮಸ್ಯೆ ಹಾಗೆಯೆ ಗ್ಯಾಸ್ಟ್ರಿಕ್, ಮಲಬದ್ಧತೆಯಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತೆ.
ಹುಟ್ಟುಹಬ್ಬದ ದಿನ ಕೇಕ್ ತಿನ್ನುವ ಮುನ್ನ ಎಚ್ಚರ..!
ಮೈದಾ ಹಿಟ್ಟು: ಮೈದಾ ಹಿಟ್ಟನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಾನಿಯುಂಟುಮಾಡುತ್ತೆ. ನೀವು ಅತಿಯಾಗಿ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಜಾಸ್ತಿ ಆಗುತ್ತೆ ಹಾಗೆಯೆ ನೀವು ಬೇಗನೆ ದಪ್ಪಆಗುತ್ತೀರಾ. ಇದರಿಂದ ರಕ್ತದೊತ್ತಡ ಬರುವ ಸಂಭವ ಕೂಡ ಇದೆ.
ಸಂಶೋದನೆಯಲ್ಲಿ ತಿಳಿದು ಬಂಧ ಮಾಹಿತಿಯ ಪ್ರಕಾರ ನೀವು ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸಿದರೇ ನಿಮ್ಮ ದೇಹದಲ್ಲಿ ಫೈಬರ್ ನಷ್ಟವಾಗುತ್ತೆ. ಇದರಿಂದಾಗಿ ನಿಮ್ಮ ದೇಹಕ್ಕೆ ಬೇಕಾಗುವ ಫೈಬರ್ ಅಂಶ ಸಿಗುವುದಿಲ್ಲ. ಇದರಿಂದ ನಿಮಗೆ ಹಲವು ಕಾಯಿಲೆಗಳು ಬರುವ ಸಂಭವ ಕೂಡ ಇದೆ.
ಮೂಗು ಕಟ್ಟಿದ್ದರೆ ಈ ಮನೆಮದ್ದನ್ನು ಬಳಸಿ
ತುಳಸಿ ಎಲೆಗಳನ್ನು ತಿನ್ನುವುದರಿಂದ ಏನೆಲ್ಲಾ ಆಗುತ್ತೆ?
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
