
- ಅಣಬೆ ಮನುಷ್ಯನಿಗೆ ಪ್ರಕ್ರತಿ ನೀಡಿದ ಒಂದು ಅದ್ಬುತ ಕೊಡುಗೆ
- ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಅಣಬೆ
- ಅಣಬೆ ಕೊಲೆಸ್ಟ್ರಾಲ್ ಬರದಂತೆ ನೋಡಿಕೊಳ್ಳುತ್ತೆ
ಅಣಬೆ, ಎಲ್ಲಾ ಕಾಲದಲ್ಲೂ ದೊರೆಯುತ್ತಿರುವ ಔಷಧಿ ಗುಣ ಉಳ್ಳ ಒಂದು ಉತ್ತಮ ಸಸ್ಯ ಅಣಬೆ ಮನುಕುಲಕ್ಕೆ ಆರೋಗ್ಯ ನೀಡುವ ನಿಟ್ಟಿನಲ್ಲಿ ಪ್ರಕೃತಿ ನೀಡಿದ ಒಂದು ವಿಶಿಷ್ಟ ಕೊಡುಗೆಯಾಗಿದೆ. ವಿಶೇಷವಾಗಿ ತರಕಾರಿ ರೂಪದಲ್ಲಿ ಬಳಕೆಯಾಗುತ್ತಿರುವ ಅಣಬೆ ಮಳೆಗಾಲದಲ್ಲಿ ಧಿಡೀರನೆ ಬೆಳೆಯುತ್ತವೆ.
ದೀರ್ಘ ಕಾಲದಿಂದ ಬಳಲುತ್ತಿರುವ ಮಧುಮೇಹ ರೋಗಿಗಳಿಗೆ ಹೃದಯ ರೋಗಿಗಳಿಗೆ ಅಣಬೆ ಒಂದು ಉತ್ತಮ ಔಷಧಿ. ಕೊಲೆಸ್ಟ್ರಾಲ್ ಹತ್ತಿರಕ್ಕೆ ಬಾರದಂತೆ ತಡೆಯಲು ಹೃದಯ ರೋಗಿಗಳು ಭಯ ಬಿಟ್ಟು ಹೆಚ್ಚಾಗಿ ಅಣಬೆಯನ್ನು ಸೇವಿಸಬಹುದು.
ಅಣಬೆ 2 ರಷ್ಟು ಸಾರಜನಕ ಹೊಂದಿದೆ ಇದರಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಹೆಚ್ಚುತ್ತದೆ. ಮಕ್ಕಳ ಬೆಳವಣಿಗೆಗೂ ಇದು ಪೂರಕವಾಗಿರುತ್ತದೆ ಸ್ವಾದಿಷ್ಟ ರುಚಿ ವಿಶೇಷ ಸುವಾಸನೆ ಹೊಂದಿರುವ ಅಣಬೆಯಲ್ಲಿ ಹೇರಳವಾಗಿ ನಾರಿನಂಶ ಇರುತ್ತದೆ ಇದರ ಪರಿಣಾಮದಿಂದ ಜೀವನ ಶಕ್ತಿ ವೃದ್ಧಿಸುತ್ತದೆ ಕರುಳ ತೊಂದರೆಗಳು ಹಾಗೂ ಮಲಬದ್ಧತೆ ತನ್ನಿಂದ ತಾನೇ ದೂರ ಸರಿಯುತ್ತವೆ.
ಅಣಬೆಯಲ್ಲಿ ಅಧಿಕ ಪ್ರಮಾಣದ ಪೋಲಿಕ್ ಆಮ್ಲ ಹಾಗೂ ವಿಟಮಿನ್ ಇರುವುದರಿಂದ ಗರ್ಭಿಣಿಯರಿಗೆ ಹಾಗೂ ಅಣಬೆಯನ್ನು ಕನಿಷ್ಠ ಎರಡು ವಾರಕ್ಕೆ ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಅಣಬೆಯಲ್ಲಿ ಕಡಿಮೆ ಪ್ರಮಾಣದ ಸೋಡಿಯಂ ಹಾಗೂ ಅಧಿಕ ಪ್ರಮಾಣದ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಅಣಬೆಯಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಮಧುಮೇಹದಿಂದ ಬಳಲುವವರಿಗೆ ಉತ್ತಮ ಪೋಷಕಾಂಶವಾಗಿದೆ.
ಮೂಲಂಗಿ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ?
ವಜ್ರಾಸನದಿಂದ ಬೆನ್ನು ನೋವು ಕಡಿಮೆ ಆಗುತ್ತಾ?
ಮುಖದ ಕಾಂತಿ ಹೆಚ್ಚಿಸಲು ಜೇನುತುಪ್ಪದೊಂದಿಗೆ ಹೀಗೆ ಮಾಡಿ
ಈ ಆಹಾರವನ್ನು ಸೇವನೆ ಮಾಡಿದ್ರೆ ನೀವೇ ಕೊರೊನಾಗೆ ಆಹ್ವಾನ ನೀಡಿದಂತೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.