ಈಗಾಗಲೇ ಬೇಸಿಗೆ ಪ್ರಾರಂಭವಾಗಿ ತಾಪಮಾನ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೆ ಸಮಯದಲ್ಲಿ ಮಾವಿನ ಹಣ್ಣಿನ ಸೀಸನ್ ಕೂಡ ಶುರುವಾಗಿದೆ. ಎಲ್ಲಿ ನೋಡಿದರು ಹೆಚ್ಚಾಗಿ ಮಾವಿನ ಹಣ್ಣಿನ ರಾಶಿ ಕಾಣಸಿಗುತ್ತೆ. ಮಾವಿನ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವು ಉಪಯೋಗಗಳು ಇದೆ. ಆದರೆ ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತಿನ್ನುವ ಮುನ್ನ ತಪ್ಪದೇ ಈ ಎಚ್ಚರವನ್ನು ನೀವು ವಹಿಸಬೇಕಾಗುತ್ತೆ.
ಹೆಚ್ಚಿನ ಜನರು ಮಾವಿನ ಹಣ್ಣನ್ನು ಅಂಗಡಿಗಳಿಂದ ಖರೀದಿ ಮಾಡಿ ತಂದಿರುತ್ತಾರೆ. ಹೆಚ್ಚಾಗಿ ಮಾವಿನ ಕಾಯಿಯನ್ನು ಬೇಗ ಹಣ್ಣು ಮಾಡಲು ಕೆಲವು ಕೆಮಿಕಲ್ ಬಳಸಿರುತ್ತಾರೆ. ಇದು ಮಾವಿನ ಹಣ್ಣಿನ ಮೇಲೆ ಇರುತ್ತೆ. ಹಾಗಾಗಿ ನೀವು ಈ ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ನಂತರ ಸೇವನೆ ಮಾಡಿ. ಕೆಲವು ಕೆಮಿಕಲ್ ನಿಂದ ನಿಮ್ಮ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತವೆ.
ಹಾಗೆಯೆ ಇನ್ನು ಹಲವು ಜನರು ಮಾವಿನ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ. ನಂತರ ನೇರವಾಗಿ ಕೋಲ್ಡ್ ಆಗಿರುವ ಮಾವಿನ ಹಣ್ಣನ್ನು ಸೇವಿಸುತ್ತಾರೆ. ಆದರೆ ಇದು ದೇಹಕ್ಕೆ ಒಳ್ಳೆಯದಲ್ಲ. ನೀವು ಯಾವುದೇ ಕಾರಣಕ್ಕೂ ಫ್ರಿಡ್ಜ್ ನಿಂದ ಮಾವಿನ ಹಣ್ಣನ್ನು ತೆಗೆದ ತಕ್ಷಣ ಸೇವನೆ ಮಾಡಬಾರದು. ನೀವು ಕೋಲ್ಡ್ ಆಗಿರುವ ಮಾವಿನ ಹಣ್ಣುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಬೇಕು. ನೀರಿನಲ್ಲಿ ನೆನೆಸಿಟ್ಟು ಮಾವಿನ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದು ಏನೆಂದುತಿಳಿಯಿರಿ.
ಕೆಲವು ಜನರಿಗೆ ಮಾವಿನ ಹಣ್ಣನ್ನು ತಿಂದ ನಂತರ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತೆ. ಹಾಗಾಗಿ ಈ ಸಮಸ್ಯೆ ಬರದಂತೆ ನೋಡಿಕೊಳ್ಳಲು ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಸೇವಿಸಿ. ಪ್ರತಿದಿನ ಹೆಚ್ಚು ಹೆಚ್ಚು ಮಾವಿನ ಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚುತ್ತೆ. ನೀವು ಮಾವಿನ ಹಣ್ಣನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ತಿಂದರೆ ಉಷ್ಣಾಂಶದ ಸಮಸ್ಯೆ ಬರುವುದಿಲ್ಲ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡುವುದರಿಂದ ಇದರಲ್ಲಿರುವ ಹೆಚ್ಚುವರಿ ಆಮ್ಲವನ್ನು ಕೂಡ ತೆಗೆದು ಹಾಕುತ್ತದೆ. ಮಾವಿನ ಹಣ್ಣಿನಲ್ಲಿ ಫೈಟಿಕ್ ಎನ್ನುವ ಆಮ್ಲ ಇದೆ. ಇದು ನಮ್ಮ ದೇಹದಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
