ಹುಟ್ಟುಹಬ್ಬದ ದಿನ ಎಲ್ಲರು ವಿಶ್ ಮಾಡುತ್ತಾರೆ. ಹಾಗೆಯೇ ಹಲವು ಜನರು ಪಾರ್ಟಿ ಕೂಡ ಮಾಡುತ್ತಾರೆ. ಬರ್ತ್ ಡೇ ಪಾರ್ಟಿಯಲ್ಲಿ ಕೇಕ್ ಕಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಭಾರತದಲ್ಲಿ ಈಗ ವಿದೇಶಿ ಸಂಸ್ಕೃತಿಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಕೇಕ್ ಕಟ್ ಮಾಡುವಾಗ ಅದರ ಮೇಲೆ ಒಂದು ಕ್ಯಾಂಡಲ್ ಇಟ್ಟು ಅದನ್ನ ಊದಿ ಹುಟುಹಬ್ಬವನ್ನು ಆಚರಣೆ ಮಾಡುತ್ತಾರೆ.ನಂತರ ಅದೇ ಕೇಕ್ ಅನ್ನು ಕಟ್ ಮಾಡಿ ಎಲ್ಲರು ತಿನ್ನುತ್ತಾರೆ ಆದರೆ ಈ ರೀತಿಯಾಗಿ ಮಾಡಿ ಕೇಕ್ ತಿಂದರೆ ಏನೆಲ್ಲಾ ತೊಂದರೆ ಇದೆ ಅಂತ ನೋಡಿ.
ಕೇಕ್ ಮೇಲೆ ಮೇಣದ ಬತ್ತಿ ಇಟ್ಟು ಆ ಕೇಕ್ ತಿನ್ನುವುದು ಸುರಕ್ಷಿತವಲ್ಲ ಎಂದು ಹೇಳಲಾಗಿದೆ. ಸೌತ್ ಕೆರೊಲಿನಾದ ಕ್ಲೆಮ್ಸನ್ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನದ ಪ್ರಕಾರ ಕೇಕ್ ಮೇಲೆ ಇಡುವ ಕ್ಯಾಂಡಲ್ ಇಂದ ಬ್ಯಾಕ್ಟೀರಿಯಾಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗುತ್ತವೆ. ಯಾಕೆಂದರೆ ಕೇಕ್ ಮೇಲೆ ಇತ್ತ ಮೇಣದಬತ್ತಿಯ ಶೇಕಡಾ ಕಾರಣದಿಂದ ಹೀಗೆ ಆಗುತ್ತೆ ಎಂದು ಹೇಳಲಾಗಿದೆ.
ಒಂದು ಅಧ್ಯಯನದಲ್ಲಿ ಸಂಶೋಧಕರು ಒಂದು ಕೇಕ್ ಪೀಸ್ ತೆಗೆಂದುಕೊಂಡು ಅದರ ಮೇಲೆ ಕ್ಯಾಂಡಲ್ ಹಚ್ಚಿ 15 ನಿಮಿಷ ಬಿಟ್ಟು ಅದನ್ನು ಪರೀಕ್ಷಿಸದಾಗ ಆ ಕೇಕ್ ಪೀಸ್ ಮೇಲೆ ಅತಿ ಹೆಚ್ಚು ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ. ಹಾಗೆಯೆ ಕ್ಯಾಂಡಲ್ ಇಡದೆ ಇರುವ ಕೇಕ್ ಮೇಲೆ ಕಡಿಮೆ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ.
| Join Our Telegram Group | Join Now |
ಹಾಗಾದರೆ ಕೇಕ್ ಕಟ್ ಮಾಡಲೇ ಬಾರದ?
ನೀವು ಹುಟ್ಟು ಹಬ್ಬದ ದಿನ ಕೇಕ್ ಕಟ್ ಮಾಡಬಹುದು ಆದರೆ ಅದರ ಮೇಲೆ ಕ್ಯಾಂಡಲ್ ಇಡುವುದನ್ನು ಆದಷ್ಟು ತಪ್ಪಿಸಿ. ಈ ರೀತಿಯಾಗಿ ಮಾಡುವುದರಿಂದ ಅರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದ ಕಾರಣ ಈ ವಿಷಯದಲ್ಲಿ ಜಾಗರೂಕರಾಗಿರಿ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
