ಅಯೋಧ್ಯಾ ರಾಮಮಂದಿರ ಹಾಗೂ ಮಥುರಾ ಮೇಲೆ ಬಾಂಬ್ ದಾಳಿ ಬೆದರಿಕೆ

ಅಯೋಧ್ಯಾ ಹಾಗೂ ಮಥುರಾ ಮೇಲೆ ಬಾಂಬ್ ಸ್ಫೋಟ ಮಾಡ್ತೇವೆ ಅಂತ ಪಿ ಎಫ್ ಐ ನಿಂದ ಒಂದು ಪತ್ರ ಬಂದಿದೆಯಂತೆ. ಪಿ ಆಫ್ ಐ ಮೇಲೆ ಮಹಾರಾಷ್ಟ್ರದಲ್ಲಿ ಒಂದು ಕೇಸ್ ರಿಜಿಸ್ಟರ್ ಆಗಿದೆ ಈ ದೂರನ್ನು ಕೊಟ್ಟಿರುವುದು ಅಲ್ಲಿನ ಬಿ ಜೆ ಪಿ ಎಂ ಎಲ್ ಎ.

ರಾಮ ಮಂದಿರ ಇರೋದು ಅಯೋದ್ಯೆಯಲ್ಲಿ ಹಾಗೆ ಶ್ರೀ ರಾಮ ಹುಟ್ಟಿದ್ದು ಕೂಡ ಇಲ್ಲೇ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಭಾರತದ ಮೇಲೆ ಬಾಬರ್ ಆಕ್ರಮಣ ಮಾಡಿದಾಗ ಅವನ ಸೇನಾಪತಿ ಇಲ್ಲಿರುವ ರಾಮ ಮಂದಿರವನ್ನು ನಾಶ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿ ಅದಕ್ಕೆ ಬಾಬರನ ಹೆಸರನ್ನು ಇಟ್ಟಿದ್ದ. ಹಾಗಾಗಿ ಅದನ್ನ ಬಾಬ್ರಿ ಮಸೀದಿ ಅಂತ ಕರೆಯಲಾಯಿತು.

ಮಥುರಾ ಕೃಷ್ಣನ ಜನ್ಮಸ್ಥಳ. ಇದು ಉತ್ತರ ಪ್ರದೇಶದಲ್ಲಿದೆ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ ಹಾಗೆ ಶ್ರೀ ಕೃಷ್ಣ ಮಥುರಾದಲ್ಲಿ ಹುಟ್ಟಿದ. ಹಾಗಾಗಿ ಈ ಎರಡು ಜಾಗ ಕೂಡ ಹಿಂದೂಗಳಿಗೆ ಪವಿತ್ರ ಸ್ಥಳವಾಗಿವೆ. ಮಥುರಾ ಕೂಡ ಮೊಘಲರ ಕಾಲದಲ್ಲಿ ನಾಶ ಆಯಿತು ಹಾಗೆ ದೇವಾಲಯವನ್ನು ಕೆಡವಿ ಶಾಹಿ ಮಸೀದಿಯನ್ನು ಔರಂಗಝೇಬನ ಕಾಲದಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತೆ.

ಗೋಮಾತೆಯ ನೋವು ಯಾರಿಗೂ ಕಾಣುತ್ತಿಲ್ಲವೇ? ಭಾರತಕ್ಕೆ ಅತಿ ದೊಡ್ಡ ಗಂಡಾಂತರ

ಈಗ ಎರಡು ದೇವಾಲಯದ ಬಗ್ಗೆ ಮತ್ತೆ ಸುದ್ದಿಯಾಗಿದೆ. ಪಿ ಎಫ್ ಐ ನಿಷೇಧವಾದ ಮೇಲೆ ಹಲವು ಪ್ರತಿಭಟನೆಗಳು ಕೂಡ ನಡೆದಿವೆ. ಪಿ ಎಫ್ ಐ ಮೇಲೆ ಬ್ಯಾನ್ ಹೇರಿದ್ದನ್ನ ಸಮರ್ಥಿಸಿಕೊಳ್ಳುವುದಕ್ಕೂ ಆಗದೆ ಬಿಡೋದಕ್ಕೂ ಆಗದೆ ಒದ್ದಾಡಿತು ಕಾಂಗ್ರೆಸ್. ಹಾಗೆ ತುಂಬಾ ಜನ ಆರ್ ಎಸ್ ಎಸ್ ಕೂಡ ಬ್ಯಾನ್ ಮಾಡಿ ಅಂತ ಹೇಳಿದ್ರು ಕೂಡ ಇದೇನು ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿಲ್ಲ.

ಈಗ ಪಿ ಎಫ್ ಐ ನಿಂದ ಬಂದ ಪಾತ್ರದ ಸುದ್ದಿ ದೊಡ್ಡದಾಗುತ್ತಿದೆ. ಮಹಾರಾಷ್ಟ್ರ ಶಾಸಕ ವಿಜಯ್ ದೇಶಮುಖ್ ಗೆ ಬಂದಿರುವ ಪತ್ರದಲ್ಲಿ ‘ಸರ್ ತನ್ ಸೆ ಜುಡಾ’ ಎಂಬ ಎಚ್ಚರಿಕೆಯನ್ನು ಕೊಡಲಾಗಿದೆ. ಇದರ ಅರ್ಥ ಪ್ರವಾದಿ ಮೊಹಮ್ಮದ್ದರ ವಿರುದ್ಧ ಮಾತನಾಡುವವರಿಗೆ ಇರೋದು ಒಂದೇ ಶಿಕ್ಷೆ ಅದೇ ಅವರ ರುಂಡವನ್ನು ಮುಂಡದಿಂದ ಬೇರೆ ಮಾಡುವುದು. ಈ ಸ್ಲೋಗನ್ ಹುಟ್ಟ್ಟಿಕೊಂಡಿದ್ದು ಪಾಕಿಸ್ತಾನದಲ್ಲಿ. ಈಗ ಭಾರತದಲ್ಲಿರುವವರ ಮತಾಂಧರ ಬಾಯಲ್ಲಿ ಕೂಡ ಕೇಳಿಬರುತ್ತಿದೆ. ಶಾಸಕನಿಗೆ ಬಂದಿರುವ ಪಾತ್ರದಲ್ಲಿ ಅಯೋಧ್ಯೆ ಹಾಗು ಮಥುರಾ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಪತ್ರ ಬರೆದಿದ್ದು ಪಿ ಎಫ್ಐ ಕಾರ್ಯಕರ್ತನೇ ಹೊರತು ಪಿ ಎಫ್ ಐ ಸಂಘಟನೆ ಅಲ್ಲ.

Share