ಮಹಾಕುಂಭಮೇಳದಲ್ಲಿ ಜನಪ್ರಿಯರಾಗಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ತಮ್ಮ ಮೇಲೆ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ನೋಯ್ಡಾದ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಈ ಘಟನೆ ಶುಕ್ರವಾರ ನಡೆದಿದೆ.
ಅಭಯ್ ಸಿಂಗ್ ಅವರು ತಮ್ಮ ದೂರಿನಲ್ಲಿ, ಕಾವಿ ಬಟ್ಟೆ ಧರಿಸಿದ ಕೆಲವು ವ್ಯಕ್ತಿಗಳು ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದಾಗ ನ್ಯೂಸ್ ರೂಂಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಐಐಟಿ ಬಾಬಾ (IIT Baba) ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದು ಹೊರಟಾಗ, “ನೀವು ನಿಮ್ಮನ್ನು ಧರ್ಮ ಪ್ರಚಾರಕರು ಎಂದು ಕರೆದುಕೊಳ್ಳುವುದಾದರೆ ಭಯ ಪಡುವ ಅಗತ್ಯವೇನು? ಓಡಿ ಹೋಗುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.
“ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತೆ ಎಂದು ಹೇಗೆ ಹೇಳಿದೆ” ಎಂದು ಸ್ವಾಮೀಜಿಗಳು ಐಐಟಿ ಬಾಬಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐಐಟಿ ಬಾಬಾ ಅವರು ನೀಡಿದ ದೂರನ್ನು ಸ್ವೀಕರಿಸಲು ನಿರಾಕರಿಸಿದ ಎಸ್.ಹೆಚ್.ಒ ಸೆಕ್ಟರ್ನ ಪೊಲೀಸ್ ಅಧಿಕಾರಿಗಳು, ಅವರನ್ನು ಮನವೊಲಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಲ್ಲಂಗಡಿ ಹಣ್ಣನ್ನು ತಿಂದರೆ ಅಪಾಯ ಫಿಕ್ಸ್! ಎಚ್ಚರ ಗ್ರಾಹಕರೇ!
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
