ಕಾಂಗ್ರೆಸ್ ಸರ್ಕಾರ ಹೇಳಿದಂತೆ ಈಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಸಿಕ್ಕಿದೆ. ಹೆಚ್ಚಿನ ಮಹಿಳೆಯರು ಉಚಿತ ಬಸ್ ನಲ್ಲಿ ಪ್ರಯಾಣವನ್ನು ಸಹ ಮಾಡಿದ್ದಾರೆ. ಶಕ್ತಿ ಯೋಜನೆಯಡಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಆದರೆ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅನ್ನು ನೀವು ತೋರಿಸಬೇಕಾಗುತ್ತೆ. ಉಚಿತವಾಗಿ ಪ್ರಯಾಣಿಸಲು ಮತ್ತೆ ಶಕ್ತಿ ಸ್ಮಾರ್ಟ್ ಕಾರ್ಡ್ ಕೂಡ ಬೇಕಾಗುತ್ತೆ.
ಶಕ್ತಿ ಸ್ಮಾರ್ಟ್ ಕಾರ್ಡ್
ಮಹಿಳೆಯರು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ತೋರಿಸಿ ಬಸ್ ನಲ್ಲಿ ಕೇವಲ ಮೂರು ತಿಂಗಳು ಮಾತ್ರ ಪ್ರಯಾಣಿಸಬಹುದಾಗಿದೆ. ನಂತರ ಉಚಿತವಾಗಿ ಪ್ರಯಾಣಿಸಲು ಶಕ್ತಿ ಸ್ಮಾರ್ಟ್ ಕಾರ್ಡ್ ಅವಶ್ಯಕವಾಗಿದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಮಾತ್ರ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುತ್ತೆ. ಹಾಗಾದರೆ ಈ ಸ್ಮಾರ್ಟ್ ಕಾರ್ಡ್ ಅನ್ನು ಮೊಬೈಲ್ ನಲ್ಲಿ ಪಡೆಯುವುದು ಹೇಗೆ ಅಂತ ವಿವರವಾಗಿ ನೋಡಿ.
ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಲು ಮೊದಲು ಸರ್ಕಾರದ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕಾಗುತ್ತೆ. ನಂತರ ಸೇವಾ ಸಿಂಧು ಪೋರ್ಟಲ್ ನ ಡಿಜಿಲಾಕರ್ {Digi Loker} ಪೇಜ್ ಓಪನ್ ಆಗುತ್ತೆ. ನೀವು ಹೊಸದಾಗಿ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡುತ್ತಿದ್ದರೆ ನೀವು ಡಿಜಿಲಾಕರ್ ಅಕೌಂಟ್ ಓಪನ್ ಮಾಡಬೇಕಾಗುತ್ತೆ.
ನೀವು ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಹಾಕಿ ಡಿಜಿಲಾಕರ್ ಅಕೌಂಟ್ ಅನ್ನು ತೆರೆಯಬಹುದು. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ ವರ್ಡ್ ಓ ಟಿ ಪಿ ಮೂಲಕ ಲಾಗ್ ಇನ್ ಆಗಬೇಕು. ನಂತರ ಅಲ್ಲಿ ಸರ್ಚ್ ಒಪ್ಶನ್ ಕಾಣುತ್ತೆ. ಅದರಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ನಿಮ್ಮ ಹೆಸರು, ವಿಳಾಸ, ಇ ಮೇಲ್ ಐಡಿ, ಆಧಾರ್ ಕಾರ್ಡ್ ನಂಬರ್, ಗುರುತಿನ ಚೀಟಿ ಸೇರಿದಂತೆ ಬೇರೆ ಅಗತ್ಯವಿರುವ ವಿವರಗಳನ್ನು ನೀವು ಎಂಟರ್ ಮಾಡಬೇಕಾಗುತ್ತೆ. ಹಾಗೆಯೆ ಆ ದಾಖಲೆಗಳನ್ನು ಸ್ಕ್ಯಾನ್ [Scan] ಮಾಡಿ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು.
ಇದೆಲ್ಲ ಆದ ನಂತರ ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ PDF ಫೈಲ್ ಓಪನ್ ಆಗುತ್ತೆ. ಅಲ್ಲಿ ನೀವು ಡೌನ್ಲೋಡ್ ಪಿಡಿಎಫ್ ಒಪ್ಶನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನ ತಪ್ಪದೆ ಎಲ್ಲರಿಗು ಶೇರ್ ಮಾಡಿ.
ಇದನ್ನೂ ಓದಿ: ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಆನ್ಲೈನ್ ನಲ್ಲಿ ಪಡೆಯುವುದು ಹೇಗೆ