ನೀವು ಹಲವು ತಿಂಡಿಗಳನ್ನು ಕರಿಯಲು ಎಣ್ಣೆ ಬಳಸುತ್ತಿರ. ಹಾಗೆಯೇ ಅದೇ ಎಣ್ಣೆಯನ್ನು ನೀವು ಇನ್ನೊಮ್ಮೆ ಬಳಸುವುದರಿಂದ ಅದು ನಮ್ಮ ದೇಹಕ್ಕೆ ಮಾರಕವಾಗುತ್ತೆ. ಹೆಚ್ಚಿನ ಜನರು ಮನೆಯಲ್ಲಿ ತಿಂಡಿಗಳನ್ನು ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸ್ತಾರೆ. ಈ ರೀತಿಯಾಗಿ ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.
- ಒಮ್ಮೆ ಬಳಸಿದ ಎಣ್ಣೆಯನ್ನು ಪುನಃ ಬಳಸಬೇಡಿ
- ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು
- ರಕ್ತದೊತ್ತಡ ಹೆಚ್ಚಾಗುತ್ತೆ
ಹಾರ್ಟ್ ಪ್ರಾಬ್ಲಮ್ ಬರಬಹುದು: ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಹೃಉದಯಕ್ಕೆ ಸಂಬಂದಿಸಿದ ಕಾಯಿಲೆಗಳು ಬರುವ ಸಂಭವ ಜಾಸ್ತಿ ಆಗಿರುತ್ತೆ. ಒಮ್ಮೆ ಬಳಸಿದ ಎಣ್ಣೆಯಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತೆ. ಮತ್ತೆ ನೀವು ಅದನ್ನು ಬಳಸುವುದರಿಂದ ಎಣ್ಣೆಯನ್ನು ಬಿಸಿ ಮಾಡುವುದರಿಂದ ಅದು ಕೊಬ್ಬನ್ನು ಟ್ರಾನ್ಸ್ ಫ್ಯಾಟ್ ಗಳಾಗಿ ಪರಿವರ್ತಿಸುತ್ತೆ. ಇದು ಹೃದಯ ಸಂಬಂದಿ ಕಾಯಿಲೆಗಳಿಗೆ ಕಾರಣವಾಗಬಹುದು.
ಕ್ಯಾನ್ಸರ್ ಬರುವ ಸಂಭವ ಜಾಸ್ತಿ: ಪದೇ ಪದೇ ಒಮ್ಮೆ ಬಳಸಿದ ಎಣ್ಣೆ ಬಿಸಿ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವ ಕೂಡ ಜಾಸ್ತಿ ಆಗಿರುತ್ತೆ. ಅದರಲ್ಲಿರುವ ಎಲ್ಲ ಆಂಟಿಓಕ್ಸಿಡೆಂಟ್ಸ್ ನಾಶವಾಗುತ್ತೆ. ಅಂತಹ ಸಮಯದಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಸ್ರಷ್ಟಿಯಾಗುತ್ತೆ. ಈ ರೀತಿಯಾದ ಎಣ್ಣೆ ಬಳಸುವುದರಿಂದ ಪಿತ್ತಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್ ಹಾಗೂ ಹಲವು ಸಮಸ್ಯೆ ಶುರುವಾಗುತ್ತೆ.
ರಕ್ತದೊತ್ತಡ ಜಾಸ್ತಿಯಾಗುತ್ತೆ: ಒಮ್ಮೆ ಬಳ್ಸಿದ ಎಣ್ಣೆಯನ್ನು ಇನ್ನೊಮೆ ಬಳಸುವುದರಿಂದ ರಕ್ತದೊತ್ತಡ ತ್ವರಿತವಾಗಿ ಅನಿಯಂತ್ರಿತವಾಗಬಹುದು.
ಇವುಗಳನ್ನೂ ಓದಿ:
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ನೋಡಿ
ಕಿತ್ತಳೆ ಹಣ್ಣನ್ನು ಸೇವನೆ ಮಾಡಿ ಈ ಆರೋಗ್ಯ ಲಾಭವನ್ನು ಪಡೆಯಿರಿ
ವಜ್ರಾಸನದಿಂದ ಬೆನ್ನು ನೋವು ಕಡಿಮೆ ಆಗುತ್ತಾ?
ಕೂದಲು ಉದುರುವ ಸಮಸ್ಯೆಗೆ ಪರಿಹಾರ । ಕೂದಲು ಉದುರುವಿಕೆಗೆ ಮನೆ ಮದ್ದು
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
