
- ಜುಲೈ 28 ರಂದು ಮಂಗಳ ಮತ್ತು ಶನಿ ಗ್ರಹಗಳ ಸಂಯೋಗದಿಂದ 30 ವರ್ಷಗಳ ಬಳಿಕ “ಸಂಸಪ್ತಕ ಯೋಗ” ರೂಪುಗೊಳ್ಳಲಿದೆ.
- ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಮನೆಯಲ್ಲಿ ಶುಭ ಕಾರ್ಯಗಳು ಮತ್ತು ಭೂಮಿ-ಮನೆ ಖರೀದಿ ಯೋಗವಿದೆ
- ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಮನೆಯಲ್ಲಿ ಶುಭ ಕಾರ್ಯಗಳು ಮತ್ತು ಭೂಮಿ-ಮನೆ ಖರೀದಿ ಯೋಗವಿದೆ
ಸುಮಾರು 30 ವರ್ಷಗಳ ಬಳಿಕ, ಕಮಾಂಡರ್ ಗ್ರಹ ಎನ್ನಲಾಗುವ ಮಂಗಳ ಮತ್ತು ನ್ಯಾಯದ ಅಧಿಪತಿ ಶನಿ ದೇವನ ಸಂಯೋಗದಿಂದ “ಸಂಸಪ್ತಕ ಯೋಗ” ನಿರ್ಮಾಣವಾಗಲಿದೆ. ಈ ವರ್ಷದ ಆರಂಭದಲ್ಲಿಯೇ ಕರ್ಮಫಲದಾತ ಶನಿ ಮಹಾತ್ಮ ಮೀನ ರಾಶಿಗೆ ಕಾಲಿಟ್ಟಿದ್ದಾನೆ. ಈಗ, ಜುಲೈ 28ರಂದು ಕಮಾಂಡರ್ ಗ್ರಹ ಮಂಗಳ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಗ್ರಹಗಳ ಸಂಚಾರವು ನೇರವಾಗಿ ಪರಸ್ಪರರ ಮೇಲೆ ಪ್ರಭಾವ ಬೀರಿ, ಅತ್ಯಂತ ಶುಭಕರವಾದ ಸಂಸಪ್ತಕ ಯೋಗವನ್ನು ಸೃಷ್ಟಿಸಲಿದೆ.
ಇದರಿಂದ ಕೆಲವು ಅದೃಷ್ಟಶಾಲಿ ರಾಶಿಗಳ ಜನರು ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುವ ಭಾಗ್ಯವನ್ನು ಪಡೆಯಲಿದ್ದಾರೆ. ಅವರ ವೃತ್ತಿ, ವ್ಯವಹಾರದಲ್ಲಿ ಅದೃಷ್ಟ ಕೈ ಹಿಡಿಯಲಿದ್ದು, ಸಂಪತ್ತು ಮತ್ತು ಸಂತೋಷ ತುಂಬಿ ಬರಲಿದೆ.
ಮೇಷ ರಾಶಿಯವರೇ, ಶನಿ-ಮಂಗಳ ಯುತಿಯಿಂದ ರೂಪುಗೊಳ್ಳಲಿರುವ ಸಂಸಪ್ತಕ ಯೋಗದಿಂದ ನಿಮ್ಮ ಜೀವನದಲ್ಲಿ ಅದೃಷ್ಟ ಖಂಡಿತಾ ಕೈ ಹಿಡಿಯಲಿದೆ. ವಿಶೇಷವಾಗಿ ವಿದೇಶ ವ್ಯಾಪಾರದಿಂದ ಭರ್ಜರಿ ಲಾಭವನ್ನು ಕಾಣುವಿರಿ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಬಹಳ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಜಯ ದೊರೆಯಲಿದೆ, ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ಇದು ನಿಮ್ಮ ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು ನಿಮ್ಮದಾಗುವ ಸುವರ್ಣ ಕಾಲ. ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ, ಅದರಲ್ಲಿ ಯಶಸ್ಸು ಸಾಧಿಸುವಿರಿ.
ಇದನ್ನೂ ಓದಿ: ಆಗಸ್ಟ್ನಲ್ಲಿ ಅದೃಷ್ಟದ ಜಾಕ್ಪಾಟ್: ಶ್ರಾವಣದಲ್ಲಿ 2 ರಾಜಯೋಗ, ಈ ರಾಶಿಗಳಿಗಿದು ಸಿರಿ ಸಂಪತ್ತಿನ ಸುರಿಮಳೆ!
ಮಕರ ರಾಶಿಯವರೇ, ಶನಿ-ಮಂಗಳ ಯುತಿಯಿಂದ ಸೃಷ್ಟಿಯಾಗಲಿರುವ ಸಂಸಪ್ತಕ ಯೋಗವು ನಿಮ್ಮ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ತರಲಿದೆ. ನಿಮ್ಮ ಉದ್ಯಮದಲ್ಲಿ ಅನಿರೀಕ್ಷಿತ ಪ್ರಗತಿ ಕಾಣುವಿರಿ. ಅಷ್ಟೇ ಅಲ್ಲ, ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಂಭವವಿದೆ, ಇದರಿಂದ ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ಬಹಳ ದಿನಗಳಿಂದ ಕನಸಾಗಿದ್ದ ಭೂಮಿ ಅಥವಾ ಮನೆ ಖರೀದಿ ಯೋಗವೂ ಇದೆ. ಇದು ನಿಮ್ಮ ಆಸ್ತಿ ಹೆಚ್ಚಳಕ್ಕೆ ಉತ್ತಮ ಸಮಯ.
ತುಲಾ ರಾಶಿಯವರಿಗೆ ಶನಿ-ಮಂಗಳನಿಂದ ರೂಪುಗೊಳ್ಳಲಿರುವ ಸಂಸಪ್ತಕ ಯೋಗವು ಹಲವು ಆಯಾಮಗಳಲ್ಲಿ ಶುಭ ಫಲಗಳನ್ನು ತರಲಿದೆ. ನಿಮ್ಮ ವೃತ್ತಿ ವ್ಯವಹಾರದಲ್ಲಿ ದೊಡ್ಡ ಆರ್ಡರ್ಗಳು ದೊರೆಯುವ ಸಾಧ್ಯತೆ ಇದ್ದು, ಆದಾಯದಲ್ಲಿ ಭಾರೀ ಏರಿಕೆ ಕಂಡು ಬರಲಿದೆ. ನಿಮ್ಮ ವ್ಯಾಪಾರ ವಿಸ್ತಾರವಾಗುತ್ತದೆ. ವಿದೇಶದಲ್ಲಿ ಉದ್ಯೋಗ ಹೊಂದುವ ಕನಸು ನನಸಾಗುವ ಸಮಯವಿದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಹುಡುಕುತ್ತಿರುವವರಿಗೆ ಇದು ಉತ್ತಮ ಸಮಯ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಉತ್ತಮವಾಗುತ್ತದೆ.
ಇದನ್ನೂ ಓದಿ: ಈ ರಾಶಿಗಳಿಗೆ ಹಂಸ ಮಹಾ ಪುರುಷ ರಾಜಯೋಗ: ಸಂಪತ್ತಿನ ಸುರಿಮಳೆ ಗ್ಯಾರಂಟಿ!
Aaradhya is an accomplished content writer with five years of experience specializing in astrology. She possesses extensive expertise in researching, analyzing, and crafting insightful and engaging articles on various astrological topics.