
ಹಿರಿಯ ನಟ ಪರೇಶ್ ರಾವಲ್, ತಮ್ಮ ಹಾಸ್ಯ ಪಾತ್ರಗಳಿಂದಲೇ ಮನೆಮಾತಾದವರು. ಅದರಲ್ಲೂ ‘ಹೇರಾ ಫೆರಿ’ ಸರಣಿಯಲ್ಲಿನ ಬಾಬುರಾವ್ ಪಾತ್ರವನ್ನು ಇಂದಿಗೂ ಜನರು ಮರೆಯಲು ಸಾಧ್ಯವಿಲ್ಲ. ಆದರೆ, ಇತ್ತೀಚೆಗೆ ಅವರೊಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ನೀರನ್ನು ಕುಡಿಯುವ ಬದಲು, ತಮ್ಮದೇ ಮೂತ್ರವನ್ನು ಕುಡಿದಿದ್ದರಂತೆ! ಇದಕ್ಕೆ ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!
ಹೌದು, ಇತ್ತೀಚೆಗೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾಗ ಪರೇಶ್ ರಾವಲ್ಗೆ ಮೊಣಕಾಲು ಗಾಯವಾಗಿತ್ತು. ಈ ಸಮಸ್ಯೆಗೆ ಪರಿಹಾರ ನೀಡಿದ್ದು ಬೇರಾರೂ ಅಲ್ಲ, ಖ್ಯಾತ ಸ್ಟಂಟ್ ಮಾಸ್ಟರ್ ಅಜಯ್ ದೇವಗನ್ ತಂದೆ ವೀರು ದೇವಗನ್! ಅವರು ನೀಡಿದ ಸಲಹೆಯೇ ಮೂತ್ರ ಸೇವನೆ. ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಮೂತ್ರವನ್ನು ಸೇವಿಸಲು ಪ್ರಾರಂಭಿಸಿದ ಪರೇಶ್ ರಾವಲ್, ಕಾಲಿನ ಸಮಸ್ಯೆಯಿಂದ ಮುಕ್ತಿ ಪಡೆದರು!
“ನಾನು ಆಸ್ಪತ್ರೆಯಲ್ಲಿದ್ದಾಗ ವೀರು ದೇವಗನ್ ನನ್ನನ್ನು ಭೇಟಿ ಮಾಡಲು ಬಂದರು. ಏನಾಯಿತು ಎಂದು ವಿಚಾರಿಸಿದರು. ನನ್ನ ಕಾಲಿನ ಗಾಯದ ಬಗ್ಗೆ ಅವರಿಗೆ ತಿಳಿಸಿದೆ. ಆ ಸಮಯದಲ್ಲಿ ನನ್ನ ವೃತ್ತಿಜೀವನವೇ ಮುಗಿಯಿತು ಎಂದುಕೊಂಡಿದ್ದೆ. ಆಗ ಅವರು ಬೆಳಿಗ್ಗೆ ಎದ್ದ ಕೂಡಲೇ ತಮ್ಮದೇ ಮೂತ್ರವನ್ನು ಸೇವಿಸಲು ಹೇಳಿದರು. ಮದ್ಯಪಾನ ಮಾಡಬಾರದು ಎಂದರು. ನಾನು ಅದನ್ನು ಬಿಟ್ಟೆ. ಸಾಮಾನ್ಯ ಆಹಾರ ಸೇವಿಸಿದೆ” ಎಂದು ಪರೇಶ್ ರಾವಲ್ ನೆನಪಿಸಿಕೊಂಡರು.
“ನಾನು ನನ್ನದೇ ಮೂತ್ರವನ್ನು ಬಿಯರ್ನಂತೆ ಸಿಪ್ ಮಾಡುತ್ತಿದ್ದೆ. ನಾನು ಅದನ್ನು ಸರಿಯಾಗಿ ಪಾಲಿಸುತ್ತಿದ್ದೆ. ಇದನ್ನು 15 ದಿನಗಳ ಕಾಲ ಮಾಡಿದೆ. ನನ್ನ ಎಕ್ಸ್ರೇ ವರದಿ ಬಂದಾಗ ವೈದ್ಯರೇ ಆಶ್ಚರ್ಯಚಕಿತರಾದರು. ಕಾಲಿನ ಸಮಸ್ಯೆ ಪರಿಹಾರವಾಗಿದೆ ಎಂದರು. ಸಾಮಾನ್ಯವಾಗಿ ಈ ರೀತಿಯ ಕಾಲಿನ ತೊಂದರೆಯಾದಾಗ ಗುಣವಾಗಲು ಎರಡೂವರೆ ತಿಂಗಳು ಬೇಕಾಗುತ್ತದೆ. ಆದರೆ ನನಗೆ ಕೇವಲ 15 ದಿನಗಳಲ್ಲಿ ಪರಿಹಾರ ಸಿಕ್ಕಿತು” ಎಂದು ಪರೇಶ್ ವಿವರಿಸಿದರು.
ಇರುವೆಗಳು ಕಟ್ಟಿದ ಹಿಮಾಚಲದ ನಿಗೂಢ ಚಂಡಿ ದೇಗುಲ
ಈ ವಿಷಯವನ್ನು ಕೇಳಿ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪರೇಶ್ ರಾವಲ್ ಅವರ ಈ ಅನುಭವವು ಮೂತ್ರ ಚಿಕಿತ್ಸೆಯ ಬಗ್ಗೆ ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೂ ವೈದ್ಯಕೀಯವಾಗಿ ಮೂತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಪುರಾವೆಗಳಿಲ್ಲ. ಆದ್ದರಿಂದ ಈ ರೀತಿಯ ಚಿಕಿತ್ಸೆಯನ್ನು ವೈದ್ಯರ ಸಲಹೆಯಿಲ್ಲದೆ ಅನುಸರಿಸುವುದು ಅಪಾಯಕಾರಿ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.