
- ಈ ಯೋಜನೆಯಡಿ 30 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ, ದಿನಕ್ಕೆ 2GB ಡೇಟಾ ಮತ್ತು 100 ಉಚಿತ SMS ಲಭ್ಯವಿರುತ್ತದೆ
- ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ಹೊಸ ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಈ ಯೋಜನೆ ಘೋಷಿಸಲಾಗಿದೆ
- BSNL ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೇವಲ 1 ರೂಪಾಯಿಗೆ ವಿಶೇಷ ‘ಟ್ರೂ ಡಿಜಿಟಲ್ ಫ್ರೀಡಂ’ ಆಫರ್ ಪರಿಚಯಿಸಿದೆ.
ಹಲವು ಟೆಲಿಕಾಂ ಕಂಪನಿಗಳ ನಡುವಿನ ಪೈಪೋಟಿಯಲ್ಲಿ ತನ್ನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು BSNL ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಯೋಜನೆಯನ್ನು ರೂಪಿಸಲಾಗಿದ್ದು, ಇದು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ.
ಕೇವಲ 1 ರೂಪಾಯಿಗೆ ಬಿ ಎಸ ಏನ್ ಎಲ್ ತನ್ನ ಬಳಕೆದಾರರಿಗೆ 30 ದಿನಗಳ ಕಾಲ ವ್ಯಾಲಿಡಿಟಿ ನೀಡಲಿದೆ. ಈ ಅವಧಿಯಲ್ಲಿ ಗ್ರಾಹಕರು ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 2GB ಹೈ-ಸ್ಪೀಡ್ ಡೇಟಾ ಮತ್ತು 100 ಉಚಿತ SMS ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಕೊಡುಗೆಯನ್ನು ‘ಟ್ರೂ ಡಿಜಿಟಲ್ ಫ್ರೀಡಂ’ ಎಂದು ಹೆಸರಿಸಲಾಗಿದೆ ಮತ್ತು ಇದು ಆಗಸ್ಟ್ 1 ರಿಂದ ಆಗಸ್ಟ್ 31ರ ವರೆಗೆ ಜಾರಿಯಲ್ಲಿ ಇರುತ್ತದೆ.
ಇದನ್ನೂ ಓದಿ: ಕನ್ವರ್ಯಾತ್ರೆಲಿ ಬೆನ್ನ ಮೇಲೆ ಅಸ್ವಸ್ಥ ಗಂಡನನ್ನು ಹೊತ್ತು 150 ಕಿ.ಮೀ ನಡೆದ ಪತ್ನಿ
ಕಳೆದ ಕೆಲವು ತಿಂಗಳುಗಳಿಂದ ಅನೇಕ ಗ್ರಾಹಕರು BSNL ತೊರೆದು ಇತರ ಖಾಸಗಿ ನೆಟ್ವರ್ಕ್ಗಳಿಗೆ ಪೋರ್ಟ್ ಆಗುತ್ತಿದ್ದಾರೆ. ಈ ಇಳಿಕೆಯ ಗ್ರಾಹಕರ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಹೊಸಬರನ್ನು ತನ್ನತ್ತ ಸೆಳೆಯಲು BSNL ಈ ಆಕರ್ಷಕ ಆಫರ್ ಮುಂದಿಟ್ಟಿದೆ.
ಇದೇ ಸಮಯದಲ್ಲಿ, ಖಾಸಗಿ ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ವಿಭಿನ್ನ ಯೋಜನೆಗಳನ್ನು ಪರಿಚಯಿಸುತ್ತಿವೆ. ಉದಾಹರಣೆಗೆ, ಏರ್ಟೆಲ್ ಇತ್ತೀಚೆಗೆ 399 ರೂಪಾಯಿಗಳ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 28 ದಿನಗಳ ಮಾನ್ಯತೆ, ಪ್ರತಿದಿನ 2.5GB ಡೇಟಾ, ಉಚಿತ ಕರೆಗಳು ಮತ್ತು 100 SMS ಜೊತೆಗೆ, ಉಚಿತ ಜಿಯೋಸಿನಿಮಾ ಪ್ರೀಮಿಯಂ ಚಂದಾದಾರಿಕೆಯನ್ನೂ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ, BSNLನ 1 ರೂಪಾಯಿಯ ಆಫರ್ ಹೊಸ ಗ್ರಾಹಕರಿಗೆ ಒಂದು ಆರ್ಥಿಕವಾಗಿ ಲಾಭದಾಯಕ ಆಯ್ಕೆಯಾಗಿದೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.