ಗೋವನ್ನ ಪೂಜಿಸಿ ಆರಾಧಿಸುವ ದೇಶ ನಮ್ಮದು, ಗೋವು ಆರ್ಥಿಕತೆಯ, ಧಾರ್ಮಿಕತೆಯ ಮತ್ತು ಮತಬ್ಯಾಂಕಿನ ಕೇಂದ್ರವನ್ನಾಗಿಸಿಕೊಂಡಿರುವ ಏಕೈಕ ದೇಶ ಭಾರತ. ಭಾರತದಲ್ಲಿ ಗೋಮಾತೆಯನ್ನು ಪೂಜಿಸುವವರು ತುಂಬಾ ಜನ ಇದ್ದಾರೆ ಹಾಗೆಯೇ ಇದನ್ನ ತಿರಸ್ಕಾರ ಮನೋಭಾವದಿಂದ ನೋಡುತ್ತಾ ಕೇವಲ ಮಾಂಸದ ಮುದ್ದೆ ಅಂತೆ ಕಾಣುವ ಜನರು ನಮ್ಮ ಮಧ್ಯೆ ಇದ್ದಾರೆ. ನಿಮಗೆ ಇದರಲ್ಲಿಯೂ ಒಂದಿಷ್ಟು ಮಹಾತ್ಮರು ಯಾವುದೇ ಜಾತಿ, ಮತ ಬೇಧವಿಲ್ಲದೆ ಗೋವಿನ ಉಪಯುಕ್ತತೆಯನ್ನು ಮತ್ತು ಅವಶ್ಯಕತೆಯನ್ನು ನಮ್ಮ ಮುಂದಿನ ಪೀಳಿಗೆಗೂ ಕೂಡ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ತುಂಬಾ ಜನರು ಹೀಗೆ ಪ್ರಾಮುಖ್ಯತೆಯನ್ನು ನೀಡಿ ಅದ್ರ ಮಹಿಮೆಯನ್ನು ನಾನಾ ರೀತಿಯಲ್ಲಿ ತಮ್ಮ ಬರವಣಿಗೆಯಲ್ಲಿ ಬರೆದಿದ್ದಾರೆ.
ಸಂತಕವಿ ಗೋಸ್ವಾಮಿ ತುಳಸೀದಾಸರು ತಮ್ಮ ಕೃತಿ ರಾಮಚರಿತಮಾನಸ ದಲ್ಲಿ ಎಲ್ಲರ ತಾಯಿಯ ಗೋವಿನ ಸೇವೆ ಮಾಡಲೆಂದೇ ಸ್ವತಹ ಭಗವಂತ ಮಾನವನಾಗಿ ಅವತರಿಸಿದ ಎಂದರ್ಥ. ಮನುಷ್ಯ ಮೂಲತಹ ಪಶುವಿನ ಹತ್ಯೆ ಮಾಡುವುದು ಹಾಗೂ ಅದನ್ನ ತಿನ್ನುವುದು ಸೈತಾನ್ ಎಂದರ್ಥ ಅಂದರೆ ಇದು ದೆವ್ವದ ಕೆಲಸ ಎಂದರ್ಥ. ಅದು ಕೇವಲ ದೆವ್ವದ ಕೆಲಸ ಹೊರತು ಪರಮೇಶ್ವರನ ಆದೇಶ ವಾಗಿರಲಿ ಸಾಧ್ಯವಿಲ್ಲ ಅಂತ ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಇದರಂತೆ ಇವರ ಗುರುಗಳಾದ ರಾಮಕೃಷ್ಣ ಪರಮಹಂಸರು ಗೋವು ಕೇವಲ ಕೊಂಬು ಬಾಲವಿರುವ ಪಶು ಅಲ್ಲ ಅದು ಮಹಾಶಕ್ತಿಯ ಸ್ವರೂಪ ಎಂಬುದಾಗಿ ತಿಳಿಸಿದ್ದಾರೆ ಗೋವನ್ನ ದೇವತೆಯ ಸಮಾನವಾಗಿ ಪೂಜೆ ಮಾಡ್ತಾರೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಿ ಗೋವಧೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಬೇಕು ಎಂದು ಕಂಚಿ ಕಾಮಕೋಟಿಯ ಶ್ರೀಗಳು ಹೇಳಿದರು. ಗೋಮಾತೆಯನ್ನು ವಧಿಸುವುದರಿಂದ ಆಯಾ ದೇಶದ ರಾಜರು ಹಾಗೂ ಪ್ರಜೆಗಳು ನಾಶವಾಗುತ್ತಾರೆ ಅಂತ ತಿಳಿಸಲಾಗಿದೆ.
ನಿಮ್ಮ ಜೇಬಿನಲ್ಲಿ ಕರ್ಪೂರ ಇಟ್ಟುಕೊಂಡರೆ ಹಣ ಹೆಚ್ಚಾಗುತ್ತಾ?
ಗೋವು ಕರುಣಾನಿಧಿ ಎಂದು ಸ್ವಾಮಿ ಸರಸ್ವತಿಯವರು ಹಾಡಿಹೊಗಳಿದ್ದಾರೆ ಹಾಗೆಯೇ ವಿನೋಬಾ ಭಾವೆಯವರು ಹಿಂದುಸ್ತಾನ ರೈತರ ನಾಡಾಗಿದೆ ವ್ಯವಸಾಯದ ಶೋಧನೆ ಹಿಂದೂಸ್ತಾನ್ದಾಗಿದೆ. ಹಾಗೆ ಭಾರತದಲ್ಲಿ ಗೋ ರಕ್ಷಣೆಯನ್ನು ಮಾಡಲಾಗದಿದ್ದರೆ ಮಾಡದೆ ಹೋದರೆ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥ ಅಭಿವೃದ್ಧಿ ಇಲ್ಲ ಹಾಗೂ ಅದರ ಸುಗಂಧವಲ್ಲ ಕಳೆದುಕೊಂಡ ಹಾಗೆ.ಮಾಜಿ ಪ್ರಧಾನಿ ಇಂದಿರಾಗಾಂಧಿ ನೈರೋಬಿಯ ದಲ್ಲಿ ನಡೆದ ಅಂತರಾಷ್ಟ್ರೀಯ ವಿದ್ಯುತ್ ಶಕ್ತಿಯ ಒಂದು ಸಮ್ಮೇಳನದಲ್ಲಿ ಭಾರತದಲ್ಲಿ ಪಶು ಸಂಪತ್ತಿನಿಂದ ಸಿಗುವ ಶಕ್ತಿ ದೇಶದಲ್ಲಿನ ವಿದ್ಯುತ್ ಸ್ಥಾವರಗಳಿಂದ ಸಿಗುವ ವಿದ್ಯುತ್ ಶಕ್ತಿಗಳಿಂದ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿರುವುದು ದಾಖಲಾಗಿದೆ. ಇಸ್ಕಾನ್ ಸಂಸ್ಥೆಯು ಗೋಹತ್ಯೆ ಮಾಡುವವರು ಮುಂದಿನ ಜನುಮದಲ್ಲಿ ತಾವೇ ಗೋವಾಗಿ ಹತ್ಯೆ ಆಗಬೇಕಾಗುತ್ತದೆ ಎಂದು ಆಧಾರಸಹಿತವಾಗಿ ಪ್ರತಿಪಾದಿಸುತ್ತದೆ. ಭಕ್ತ ವೇದಾಂತ ಶ್ರೀ ಶೀಲ ಪ್ರಭುಪಾದರು ಕರ್ಮ ಸಿದ್ಧಾಂತದ ಆಧಾರದ ಮೇಲೆ ಇದನ್ನು ನಿರೂಪಿಸಿ ತೋರಿಸಿದ್ದಾರೆ.