120 KM ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್
ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಹೊಸ ಉದ್ದಿಮೆಯಾದ, evtric motors ಹೊಚ್ಚ ಹೊಸ ಮೂರು ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಗ್ರೇಟರ್ ನೋಯ್ಡಾದಲ್ಲಿನ ಇಂಡಿಯಾ ಎಕ್ಸ್ಪೋ 2021ರಲ್ಲಿ ಇವಿಟ್ರಿಕ್ ಹೊಸ ಸ್ಕೂಟರ್ ಅನಾವರಣ ಮಾಡಿದೆ.
ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು,ಇವಿಟ್ರಿಕ್ ರೈಸ್ (Motor Cycle), ಇವಿಟ್ರಿಕ್ ಮೈಟಿ (Scooty) ಮತ್ತು ಇವಿಟ್ರಿಕ್ ರೈಡ್ ಪ್ರೋ (scooter) ಎನ್ನುವ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಬಣ್ಣಗಳಲ್ಲಿ ಕೂಡ ಈ ವಾಹನಗಳು ಲಭ್ಯ. ಹಾಗೆಯೇ ಇದರ ಮೋಡೆಲ್ ಕೂಡ ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗಿದೆ.
ಈ ಗಾಡಿ ಗಂಟೆಗೆ 100 ಕಿಮೀ ವೇಗ, 120 ಕಿಮೀ ಮೈಲೇಜ್ ಕೊಡುತ್ತದೆ.ಬೈಕ್, ಸ್ಕೂಟರ್ ಸೇರಿ 3 ದ್ವಿಚಕ್ರ ವಾಹನಗಳನ್ನು ಈ ಕಂಪೆನಿ ಬಿಡುಗಡೆ ಮಾಡುತ್ತದೆ .
ಬೈಕ್ ಹಾಗೂ ಸ್ಕೂಟರ್ ಸುಲಭವಾಗಿ ಗಂಟೆಗೆ 70 ಕಿಮೀ ಗರಿಷ್ಟವೇಗ ತಲುಪುತ್ತದೆ ಮತ್ತು ಒಂದು ಬಾರಿ ಪೂರ್ಣ ಚಾರ್ಜ್ ನಲ್ಲಿ 90 ಕಿಮೀ ದೂರ ಚಲಿಸುತ್ತದೆ. ಇವಿಟ್ರಿಕ್ ನ ಮತ್ತೊಂದು ಅಧಿಕ ವೇಗದ ಇ-ಸ್ಕೂಟರ್ ಅತ್ಯುತ್ತಮ ಮಾಡೆಲ್ ಆಗಿದ್ದು, ಇದರ ಇನ್ನೊಂದು ಮಾಡೆಲ್ ಗಂಟೆಗೆ 75 ಕಿಮೀ ವೇಗದಲ್ಲಿ ಓಡುತ್ತದೆ, ಹಾಗೂ 90 ಕಿಮೀ ಶ್ರೇಣಿಯನ್ನು ನೀಡುತ್ತದೆ.
ಇದು ಸಂಪೂರ್ಣ ಭಾರತದಲ್ಲಿ ತಯಾರಾದಂತಹ ವಾಹನವಾಗಿದೆ. ಇದು MAKE IN INDIA ಹಾಗೂ ಆತ್ಮನಿರ್ಭರ ಭಾರತವನ್ನು ಬೆಂಬಲಿಸುತ್ತದೆ.
Published on: December 27, 2021
Updated on: November 20, 2022