ಕನ್ನಡದ ಪ್ರಸಿದ್ಧ ಧಾರಾವಾಹಿ ಕನ್ನಡತಿ ಈಗ ಪ್ರಮುಖ ಘಟ್ಟ ತಲುಪಿದೆ. ಸಾನಿಯಾ ಮಾಡಿದ ಪ್ಲ್ಯಾನ್ ಆಕೆಗೆ ಉಲ್ಟಾ ಹೊಡೆಯುವ ಸಾಧ್ಯತೆ ತುಂಬಾ ಇದೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ದೊಡ್ಡ ಪ್ಲಾನ್ ಮಾಡಿದ್ದಳು ಆದರೆ, ಅವಳ ಪ್ಲಾನ್ ಹಾಳಾಗಿ ಭುವಿ ಬದುಕಿದ್ದಾಳೆ.
ಈಗ ಐಸಿಯುನಲ್ಲಿ ಭುವಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭುವಿಯನ್ನು ಹತ್ಯೆ ಮಾಡಿದ್ರೆ ವರುಗೆ ಹರ್ಷ ಹತ್ತಿರ ಆಗುತ್ತಾನೆ ಅನ್ನೋದು ಸಾನಿಯಾ ಪ್ಲ್ಯಾನ್ ಆಗಿತ್ತು. ಭುವಿ ಈ ಸ್ಥಿತಿಗೆ ಬರಲು ವರು ಕಾರಣ ಅಂತ ಹರ್ಷ ತಿಳಿದುಕೊಂಡಿದ್ದಾನೆ. ಈ ಕಾರಣಕ್ಕೆ ಆತ ವರುಧಿನಿ ಜತೆಗೆ ಸರಿಯಾಗಿ ಮಾತನಾಡ್ತಾ ಇಲ್ಲ. ಇದರಿಂದ ವರುಗೆ ಸಿಟ್ಟು ಬಂದಿದೆ. ಸಾನಿಯಾ ವಿರುದ್ಧ ತಿರುಗಿ ಬೀಳುವ ಸೂಚನೆ ನೀಡಿದ್ದಾಳೆ.
ಹರ್ಷ ಹಾಗೂ ಭುವಿಯ ನಿಶ್ಚಿತಾರ್ಥ ನೆರವೇರಿದೆ. ಈ ವಿಚಾರದಲ್ಲಿ ಅತಿ ಹೆಚ್ಚು ಉರಿದುಕೊಂಡಿದ್ದು ಸಾನಿಯಾ ಹಾಗೂ ವರುಧಿನಿ. ಈಗ ಇಬ್ಬರೂ ಒಂದಾಗಿದ್ದಾರೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಪ್ಲ್ಯಾನ್ ರೂಪಿಸಿದ್ದಳು. ಅಂತೆಯೇ ಬೆಟ್ಟದ ಮೇಲಿರುವಾಗ ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ.
ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.