ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 50000 ಠೇವಣಿ ಇರಿಸಿ 3300 ಪಿಂಚಣಿ ಪಡೆಯಿರಿ
ಹೆಚ್ಚಿನ ಜನರು ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಕೋನದಿಂದ ಪೋಸ್ಟ್ ಆಫೀಸ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಪೋಸ್ಟ್ ಆಫೀಸ್ ಕೂಡ ತನ್ನ ಗ್ರಾಹಕರಿಗೆ ಆಗಾಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಇರುತ್ತೆ. ಹಾಗೆ ಈ ಯೋಜನೆಯಡಿ ನೀವು ಭೂಮಿ ಹಣವನ್ನು ಹೂಡಿಕೆ ಮಾಡಿದ ನಂತರ ಪಿಂಚಣಿ ರೂಪದಲ್ಲಿ ಅದರ ಬಡ್ಡಿಯನ್ನು ಪಡೆಯಬಹುದು. ಯೋಜನೆಯ ಪರಿಪಕ್ವತೆಯ ಬಳಿಕ ನೀವು ಹೂಡಿಕೆ ಮಾಡಿದ್ದ ಎಲ್ಲ ಹಣ ವಾಪಸ್ ಸಿಗಲಿದೆ.
ಪೋಸ್ಟ್ ಆಫೀಸ್ ನ ಈ ಸ್ಕೀಮ್ ಯಾವುದು?
ಯೋಜನೆಯ ಹೆಸರು ಪೋಸ್ಟ್ ಆಫೀಸ್ಮಂಥಲಿ ಇನ್ಕಂ ಸ್ಕೀಮ್. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಹಾಗೂ 100 ರ ಗಣಕದಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಡಿ ನೀವು ಗರಿಷ್ಠ ಅಂದರೆ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು ಆದರೆ ಈ ಮಿತಿ ಕೇವಲ ಸಿಂಗಲ್ ಅಕೌಂಟ್ ಗಾಗಿ ಮಾತ್ರವಿದೆ. ಜಂಟಿ ಖಾತೆಯ ಗರಿಷ್ಠ ಮಿತಿ 9 ಲಕ್ಷ ರುಪಾಯಿ ಆಗಿದೆ. ಈ ಯೋಜನೆಯಡಿ ಗರಿಷ್ಠ ಅಂದರೆ ಮೂರು ಜನ ಸೇರಿ ಜಂಟಿ ಖಾತೆ ತೆರೆಯಬಹುದು. ಇದಲ್ಲದೆ ಬಾಲಕನ ಹೆಸರಿನಲ್ಲಿ ಪೋಷಕರು ಕೂಡ ಖಾತೆ ತೆರೆಯಬಹುದು.
ಈ ಯೋಜನೆಯಡಿ ಮಾಸಿಕ ಆಧಾರದ ಮೇಲೆ ನಿಮಗೆ ಹಣ ಪಾವತಿ ಮಾಡಲಾಗುತ್ತೆ. ಪ್ರಸ್ತುತ ಈ ಖಾತೆಯ ಮೇಲೆ ಶೇಕಡ 6.6 ರಸ್ಟು ಬಡ್ಡಿ ಪಾವತಿಸಲಾಗುತ್ತದೆ.
ಪೋಸ್ಟ್ ಆಫೀಸ್ ನ ಈ ಯೋಜನೆಯ ಪರಿಪಕ್ವತೆಯ ಅವಧಿ 5 ವರ್ಷಗಳದ್ದಾಗಿದೆ. ಖಾತೆ ತೆರೆದ ಒಂದು ವರ್ಷದವರೆಗೆ ನೀವು ಇದರಿಂದ ಯಾವುದೇ ಹಣವನ್ನು ಹಿಂಪಡೆಯುವ ಹಾಗಿಲ್ಲ. 1 ರಿಂದ 3 ವರ್ಷಗಳಲ್ಲಿ ಒಂದು ವೇಳೆ ನೀವು ಈ ಖಾತೆಯನ್ನು ಮೊಟಕುಗೊಳಿಸಿದರೆ, ಮೂಲ ಮೊತ್ತ ದಿಂದ ಶೇ.2 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಇನ್ನೊಂದೆಡೆ 3-5 ವರ್ಷದ ಒಳಗೆ ನೀವು ಹಣವನ್ನು ಹಿಂಪಡೆಯಲು ಬಯಸಿದರೆ, ನಿಮ್ಮ ಒಟ್ಟು ಹಣದಿಂದ ಶೇ. 1 ರಷ್ಟು ಕಡಿತಗೊಳಿಸಲಾಗುತ್ತದೆ.