ರಾಜ್ಯಾದ್ಯಂತ ಈಗಂತೂ ಎಲ್ಲಿ ನೋಡಿದರು ಹಿಜಬ್ ಹಾಗೂ ಕೇಸರಿ ಶಾಲಿನ ಸಂಘರ್ಷವು ನಡಿತಾಯಿದೆ. ಆದರೆ ರಾಜ್ಯದಲ್ಲಿ ಮೊದಲ ಬಾರಿಗೆ ಕುಮಟಾದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ ಹಿಜಬ್ ವಿಚಾರ. ಕರ್ನಾಟಕ ಸರ್ಕಾರವು ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದ ಬೆನ್ನಲ್ಲೇ ಕುಮಟಾ ಪಟ್ಟಣದ ಡಾಕ್ಟರ್ ಎ. ವಿ ಬಾಳಿಗ ಪಿಯು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ವೇಲನ್ನೇ ಹಿಜಬ್ ರೀತಿಯಲ್ಲಿ ಧರಿಸಿ ಕಾಲೇಜಿಗೆ ಬಂದಿದ್ದು ಕಂಡುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ವಿಚಾರ ರಾಜ್ಯದಲ್ಲದೆ ದೇಶದಾದ್ಯಂತ ಬಹಳ ದೊಡ್ಡ ಸುದ್ದಿಯಾಗಿದೆ ಈಗ ಸುದ್ದಿ ಉತ್ತರ ಕನ್ನಡ ಜಿಲ್ಲೆಗೆ ಕೂಡ ಪಸರಿಸಿದ ರಾಜಕೀಯ ಪ್ರೇರಿತವಾದ ಈ ವಿವಾದ ಇಲ್ಲಿಗೆ ನಿಲ್ಲುವ ಹಾಗೆ ಕಾಣಿಸ್ತಾ ಇಲ್ಲ. DR AV BALIGA ಕಾಲೇಜಿನಲ್ಲಿ ಹಿಜಬ್ ಗೆ ಅವಕಾಶ ಇಲ್ಲ ಅಂತ ಪ್ರಾಂಶುಪಾಲರು ಕೆಲ ದಿನಗಳ ಹಿಂದೆಯೇ ಆದೇಶವನ್ನ ಮಾಡಿದರು ಅದರಂತೆ ಮುಸ್ಲಿಂ ಸಮುದಾಯದವರು ಕೂಡ ಹಿಜಬ್ ಧರಿಸಿರಲಿಲ್ಲ. ಪದವಿ ಕಾಲೇಜಿನ M.COM ವಿದ್ಯಾರ್ಥಿನಿಯೊಬ್ಬಳು ಪಿಯು ಕಾಲೇಜಿನ ಮಹಿಳಾ ಕೊಠಡಿಗೆ ಆಗಮಿಸಿ ನೀವು ಧರಿಸಿದ ಚೂಡಿದಾರದ ವೇಲನ್ನೇ ಹಿಜಬ್ ರೀತಿಯಲ್ಲಿ ಧರಿಸಿ ಎಂದು ಸೂಚನೆಯನ್ನು ನೀಡಿದ ಹಿನ್ನೆಲೆಯಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ತರಗತಿಗೆ ಪ್ರವೇಶಿಸಿದ್ದಾರೆ. ಇದರಿಂದ ಸಿಟ್ಟಾದ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲನ ಧರಿಸಿ ರಸ್ತೆಯಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ.
ನಂತರ ಮಧ್ಯಪ್ರವೇಶಿಸಿದ ಪ್ರಾಂಶುಪಾಲರು ಸರ್ಕಾರದ ಕಾನೂನನ್ನು ನಾವೆಲ್ಲರೂ ಕೂಡ ಪಾಲನೆ
ಮಾಡಲೇಬೇಕು ಆದಕಾರಣ ಯಾವುದೇ ಕಾರಣಕ್ಕೂ ತರಗತಿಯ ಒಳಗಡೆ ಹಿಜಬ್ ಹಾಗೂ ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಹೋಗಲು ಅವಕಾಶವಿಲ್ಲ ಅಂತ ಹೇಳಿದ್ದಾರೆ ಈ ವಿಚಾರವನ್ನ ಎರಡು ಕಡೆಯ ವಿದ್ಯಾರ್ಥಿಗಳಿಗೆ ವಿಷಯವನ್ನು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲ ಅವರನ್ನು ಭೇಟಿಯಾಗಿ ಒಂದು ವೇಳೆ ಹಿಜಬ್ ಧರಿಸಲು ಅವಕಾಶವನ್ನು ನೀಡಿದರೆ ನಾವು ಕೂಡ ಕೇಸರಿ ಶಲ್ಯ ಧರಿಸಿ ತರಗತಿ ಒಳಗೆ ಪ್ರವೇಶ ಮಾಡುತ್ತೇವೆ. ಕಾಲೇಜಿನಲ್ಲಿ ಸಮಾನತೆಯ ಸಂಕೇತವಾದ ಸಮವಸ್ತ್ರವನ್ನು ಎಲ್ಲರೂ ಧರಿಸಿಕೊಂಡು ಬರಲೇಬೇಕು ಆದ ಕಾರಣ ಯಾವುದೇ ಕಾರಣಕ್ಕೂ ಹಿಜಬ್ ಗೆ ಅವಕಾಶ ನೀಡಬಾರದೆಂದು ಮೌಖಿಕವಾಗಿ ಮನವಿ ಮಾಡಿದರು.