ಒಮ್ಮೆ ಚಾರ್ಜ್ ಮಾಡಿದ್ರೆ 7 ತಿಂಗಳು ಓಡಾಡುತ್ತೆ ಈ ಕಾರು | Lightyear 0 Solar car
ಈಗ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಹೊಸ ರೀತಿಯ ಆವಿಷ್ಕಾರಗಳು ನಡೆಯುತ್ತಾ ಇದೆ. ಹಾಗೆ ಅನೇಕ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯಲ್ಲಿ ಕೂಡ ಇದೆ. ಆದರೆ ಈಗ ಸೋಲಾರ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಲೈಟ್ ಇಯರ್ {Light Year} ತನ್ನ ಮೊದಲ ಉತ್ಪಾದನಾ ವಾಹನವಾಗಿರುವ ಲೈಟ್ ಇಯರ್ 0 ಅನ್ನು ಬಹಿರಂಗಪಡಿಸಿದೆ.
ಈ ಕಾರಿನಲ್ಲಿ ಸೋಲಾರ್ ಹಾಗೂ ವಿದ್ಯುತ್ ನಿಂದ ಚಾರ್ಜ್ ಮಾಡುವ ವ್ಯವಸ್ಥೆಯಿದೆ ಹಾಗೆಯೇ ಕಾರಿನ ಮೈಲೇಜ್ 1000 ಕಿಲೋಮೀಟರಿಗೂ ಅಧಿಕವಾಗಿದೆ ಅಂತ ಕಂಪನಿ ತಿಳಿಸಿದೆ. ಆರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ ಪರೀಕ್ಷೆಯ ನಂತರ ಸೋಲಾರ್ ಕಾರಿನ ಉತ್ಪಾದನೆಯನ್ನು ಪ್ರಾರಂಭ ಮಾಡಲು ಕಂಪನಿ ನಿರ್ಧರಿಸಿದೆ.
ALSO READ: ಕೇವಲ 4.5 ಲಕ್ಷ ರೂಪಾಯಿಗೆ ಸಿಗುತ್ತೆ ಎಲೆಕ್ಟ್ರಿಕ್ ಕಾರು
ಒಮ್ಮೆ ಚಾರ್ಜ್ ಮಾಡಿದ್ರೆ 7 ತಿಂಗಳು ಓಡಾಡಬಹುದು
ಜಾಸ್ತಿ ಬಿಸಿಲು ಇರುವ ಪ್ರದೇಶಗಳಲ್ಲಿ ಚಾರ್ಜರ್ ಗೆ ಪ್ಲಗ್ ಮಾಡದೆ ಏಳು ತಿಂಗಳುಗಳ ಕಾಲ ಓಡಾಡಬಹುದು ಅಂತ ಕಂಪನಿ ಹೇಳಿದೆ. ಬಿಸಿಲಿನ ವಾತಾವರಣದೊಂದಿಗೆ ಪ್ರಯಾಣವು ಸರಿಸುಮಾರು 35 ಕಿಲೋಮೀಟರ್ ಗಳವರೆಗೆ ಇರುತ್ತೆ.
ಈ ಕಾರಿನಲ್ಲಿ ಸೋಲಾರ್ ಪ್ಯಾನಲ್ ಗಳ ಜೊತೆಗೆ ನಾಲ್ಕು ಇನ್ ವೀಲ್ ಮೋಟಾರ್ ಗಳಿಂದ ಶಕ್ತಿಯನ್ನು ಬಳಸುತ್ತೆ. ಒಂದೇ ಒಂದು ಚಾರ್ಜ್ ನಲ್ಲಿ 625 ಕಿ ಮೀ ಮೈಲೇಜ್ ನೀಡುತ್ತದೆ. ಹೆದ್ದಾರಿಯ ವೇಗದಲ್ಲಿ ಗಂಟೆಗೆ ಸುಮಾರು 100 KM ಓಡಿಸಿದರೆ ಈ ಕಾರನ್ನು ಇನ್ನೂ 550 KM ಓಡಿಸಬಹುದು. ಈ ಕಾರಿನ ಬೆಲೆ ಸುಮಾರು 27 ಲಕ್ಷ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.
WhatsApp Group
Join Now